ಈ ಗಿಡವನ್ನ ಎಲ್ಲೇ ಸಿಕ್ಕರೂ ಬಿಡಬೇಕು ಕಿತ್ಕೊಂಡು ಬಂದು ಮನೆಯ ಈ ಜಾಗದಲ್ಲಿ ಇಡಿ ಸಾಕು… ನಿಮ್ಮ ಮನೆಯಲ್ಲಿ ಎಂತ ವಾಸ್ತುದೋಷ ಹಾಗು ನಕಾರಾತ್ಮಕ ಶಕ್ತಿಗಳು ಇದ್ರೂ ಸಹ ನಿವಾರಣೆ ಆಗುತ್ತದೆ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ನಾವು ಇವತ್ತಿನ ಮಾಹಿತಿಯಲ್ಲಿ ಹೇಳಲಿರುವ ವಿಚಾರವೇನು ಅಂದರೆ ನೀವು ಮನೆಯನ್ನು ಕಟ್ಟಿಸಿರುತ್ತೇವೆ ಅಥವಾ ನೀವು ಕಟ್ಟಬೇಕು ಅಂತ ಏರುತ್ತಿರುವ ಮನೆ ಅರ್ಧಕ್ಕೆ ನಿಂತಿರುತ್ತದೆ ಇದೆಲ್ಲವೂ ನಮ್ಮ ಗ್ರಹಚಾರ ಗಳಿಂದ ಉಂಟಾಗುತ್ತಾ ಇರುತ್ತದೆ ಅಂತ ಹೇಳಬಹುದು ಆದರೆ ನೀವು ಈಗಾಗಲೇ ಮನೆ ಆ ಮನೆಯಲ್ಲಿ ಕೆಲವೊಂದು ದೋಷಗಳು ಕೆಲವೊಂದು ಸಮಸ್ಯೆಗಳು ಇರುತ್ತದೆ ಅಂತ ಯಾರಾದರೂ ಹೇಳಿರುತ್ತಾರೆ ಅಥವಾ ಮನೆಗೆ ಯಾರಾದರೂ ಬಂದಾಗ ಇಲ್ಲಿ ವಾಸ್ತು ಸಮಸ್ಯೆ ಇದೆ ಅಂತ ಕೂಡ ನಿಮಗೆ ಹೇಳಿರುತ್ತಾರೆ. ಆಗ ಚಿಂತೆ ಶುರುವಾಗುತ್ತೆ ವಾಸ್ತುದೋಷ ಇದೆ ಅಂದಾಗ ಆ ಮನೆ ಏಳಿಗೆ ಬರುವುದಿಲ್ಲ ಅನ್ನುವ ವಿಚಾರ ನಮ್ಮ ತಲೆಯಲ್ಲಿ ಕೂತುಬಿಟ್ಟಿರುತ್ತದೆ.

ಇದಕ್ಕಾಗಿ ಏನು ಮಾಡುವುದು ಎಂದು ಪರಿಹಾರವನ್ನು ಹುಡುಕಿ ಹುಡುಕಿ ಸಾಕಾಗಿ ಹೋಗಿರುತ್ತದೆ ಆದರೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ನಮ್ಮ ತಲೆ ಸಿಡಿದು ಹೋಗಿರುತ್ತವೆ ಹಾಗೆಯೇ ವಾಸ್ತುದೋಷ ಇದೆ ಅಂದಾಜಿನಿಂದ ಮನಸ್ಸಿಗೆ ನೆಮ್ಮದಿ ಕೂಡ ಇರುವುದಿಲ್ಲಾ. ಇದರಿಂದಲೇ ಹಲವು ಅನಾರೋಗ್ಯ ಸಮಸ್ಯೆಗಳನ್ನು ನಾವು ನಮಗೆ ತಂದುಕೊಂಡು ಬಿಡುತ್ತೇವೆ. ಆದರೆ ಮನೆಯಲ್ಲಿ ಯಾವುದೇ ತರಹದ ದೋಷ ಗಳಿರಲಿ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು ಪ್ರತಿದಿನ ಮನೇನ ಶುದ್ಧಿಮಾಡಿ ವಾರಕ್ಕೊಮ್ಮೆಯಾದರೂ ಮನೆಗೆ ಗೋಮೂತ್ರವನ್ನು ಚಿಮುಕಿಸಿ ಮನೆಯನ್ನು ಶುದ್ಧಮಾಡಿ ಹಾಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಶಿಲುಬೆ ಕಟ್ಟದಿರುವ ಹಾಗೆ ನೋಡಿಕೊಳ್ಳಿ ಈ ರೀತಿ ಪದೇ ಪದೆ ಮನೆಯಲ್ಲಿ ಶಿಲಭೆ ಕಟ್ಟುತ್ತಿದ್ದರೆ ಅದು ಇನ್ನಷ್ಟು ಸಾಲಬಾಧೆಯನ್ನು ತಂದುಕೊಡುತ್ತದೆ ದಾರಿದ್ರ್ಯತನವನ್ನು ಸೂಚಿಸುತ್ತದೆ.

ಹಾಗಾಗಿ ನಿಮ್ಮ ಮನೆಯಲ್ಲಿಯೂ ಕೂಡ ವಾಸ್ತುದೋಷ ಇದೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆಯಿಂದ ಮನೆಯ ಸದಸ್ಯರು ಬಳಲುತ್ತಾ ಇದ್ದರೆ ಅಂದಾಗ ಶುಕ್ರವಾರದ ದಿನದಂದು ನಾವು ಹೇಳುವ ಪರಿಹಾರವನ್ನು ಪಾಲಿಸಿ. ಈ ಪರಿಹಾರ ಏನಪ್ಪಾ ಅಂದರೆ ಶುಕ್ರವಾರ ಅಮ್ಮನವರ ಈ ದಿನ ಮನೆಯಲ್ಲಿ ಬೇಗನೆ ಎದ್ದು ಅದೆಷ್ಟು ಸೂರ್ಯೋದಯಕ್ಕು ಮುಂಚೆಯೇ ಎದ್ದು ಮನೆಯನ್ನು ಸ್ವಚ್ಛ ಮಾಡಿ ಮನೆ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಬಳಿಕ ನಿಮ್ಮ ಮನೆಯ ಬಳಿ ಬಿಳಿ ಎಕ್ಕದ ಗಿಡ ಇದೆಯಾ ಎಂದು ನೋಡಿಕೊಳ್ಳಿ, ಅಲ್ಲಿಗೆ ಹೋಗಿ ಮೊದಲು ಬಿಳಿ ಎಕ್ಕದ ಗಿಡಕ್ಕೆ ನೀವು ನೀರನ್ನು ಚಿಮುಕಿಸಿ ಅರಿಶಿಣ ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡಬೇಕು ಕೊನೆಗೆ ನೀವು ಅಂತಂದ ನೈವೇದ್ಯಗಳನ್ನು ದೇವರಿಗೆ ಸಮರ್ಪಿಸಿ ಕೊನೆಯಲ್ಲಿ ಪೂಜೆ ಎಲ್ಲಾ ಆದ ಮೇಲೆ ನಿಮ್ಮ ಮೊಳಕೈ ಉದ್ದದಷ್ಟು ಎಕ್ಕದ ಗಿಡದ ಕಡ್ಡಿಯನ್ನು ತೆಗೆದುಕೊಂಡು ನಿಮ್ಮ ಮನೆಗೆ ಬಂದು ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಿ ಕಟ್ಟಬೇಕು.

ಈ ರೀತಿ ನೀವು ಮಾಡಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಮುಖ್ಯವಾಗಿ ವಾಸ್ತು ಸಮಸ್ಯೆ ಇದ್ದರೆ ವಾಸ್ತುದೋಷ ನಿವಾರಣೆ ಆಗುತ್ತದೆ ಮತ್ತು ಯಾವುದೇ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ ಅಂತಹ ಅದ್ಭುತ ಪರಿಹಾರವನ್ನ ಇದು ನಿಮಗೆ ತಂದುಕೊಡುತ್ತದೆ ಅಷ್ಟೆಲ್ಲಾ ಬೇರೆ ಪರಿಹಾರಗಳನ್ನು ನಮಗೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅನ್ನೋರು ಈ ಪರಿಹಾರವನ್ನು ಯಾವುದೇ ಖರ್ಚಿಲ್ಲದೆ ಮಾಡಿಕೊಳ್ಳಬಹುದು ಆದರೆ ಮನುಷ್ಯರಲ್ಲಿ ನಂಬಿಕೆ ಇರಬೇಕು ಆ ದೇವರ ಮೇಲೆ ಭಕ್ತಿ ಇರಬೇಕು.

ವಾಸ್ತು ಸಮಸ್ಯೆ ಇದ್ದರೆ ಮನೆಯಲ್ಲಿ ಆಗಾಗ ಅನಾರೋಗ್ಯ ಕಾಡುವುದು ನಾವು ಮಾಡುತ್ತಿರುವ ಕೆಲಸ ಕಾರ್ಯಗಳು ಕೈಗೂಡದೆ ಇರುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತಾ ಇರುತ್ತದೆ ಆದಕಾರಣ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ನಾವು ಹೇಳುವ ಈ ಸುಲಭ ಪರಿಹಾರವನ್ನು ಪಾಲಿಸಿ ಸಾಕು ತಾಯಿಯ ಅನುಗ್ರಹ ವನ್ನು ನೀವು ಪಡೆಯಬಹುದು. ಮತ್ತೊಂದು ವಿಚಾರವೇನು ಅಂದರೆ ನೀವು ವ್ಯಾಪಾರ ವಹಿವಾಟು ಮಾಡುತ್ತಾ ಇದ್ದಲ್ಲಿ ಪ್ರತಿ ದಿನ ಎಕ್ಕದ ಹೂವನ್ನು ಅಂದರೆ ಬಿಳಿ ಎಕ್ಕದ ಹೂವನ್ನೇ ತರಬೇಕು ಅದನ್ನು ನಿಮ್ಮ ಹಣ ಇಡುವ ಸ್ಥಳದಲ್ಲಿ ಅಂದರೆ ನೀವು ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿ ಕ್ಯಾಶ್ ಟೇಬಲ್ ಬಳಿ ಈ ಬಿಳಿ ಎಕ್ಕದ ಹೂವನ್ನು ಇರಿಸಿ ಹಾಗೂ ಗಣಪತಿ ಗೌಡ ಬಿಳಿ ಎಕ್ಕದ ಹೂವನ್ನು ಸಮರ್ಪಿಸಿ ಇದರಿಂದ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ವಿಘ್ನಗಳು ದೂರವಾಗುತ್ತೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.