ಈ ತರದ ಒಂದು ಮನೆಮದ್ದು ಮಾಡಿ ಸೇವಿಸಿ ಸಾಕು ಪಿತ್ತದ ಸಮಸ್ಸೆ ನಿಮ್ಮ ಜೀವನದಲ್ಲಿ ಬರೋದೇ ಇಲ್ಲ…

175

ನಮಸ್ಕಾರ ಆಯುರ್ವೇದ ಚಿಕಿತ್ಸೆ ನೀಡುವುದು ಮನುಷ್ಯನ ದೇಹದ ಪ್ರಕೃತಿಯ ಮೇಲೆ ಆಧಾರಿಸಿ ನೀಡಲಾಗುತ್ತದೆ. ಹೌದು ಮನುಷ್ಯನ ದೇಹದ ಪ್ರಕೃತಿ 3ವಿಧದಲ್ಲಿ ಇರುತ್ತದೆ. ಅದೇನೆಂದರೆ ವಾತ ಪ್ರಕೃತಿ ಪಿತ್ತ ಪ್ರಕೃತಿ ಮತ್ತು ಕಫ ಪ್ರಕೃತಿ. ಒಬ್ಬೊಬ್ಬರ ದೇಹ ಒಂದೊಂದು ಪ್ರಕೃತಿಯನ್ನ ಹೊಂದಿರುತ್ತದೆ ಹಾಗೆ ಕೆಲವರು ಕೆಲವೊಂದು ಅನಾರೋಗ್ಯ ಸಮಸ್ಯೆಯಿಂದ ಬಳಲುವ ಆಯುರ್ವೇದದಲ್ಲಿ,

ಅದನ್ನು ಕಫದ ಪ್ರಕೃತಿ ವಾತದ ಪ್ರಕೃತಿ ಮತ್ತು ಪಿತ್ತ ಪ್ರಕೃತಿ ಎಂದು ವಿಂಗಡಿಸಿದ್ದಾರೆ, ಅದರ ಆಧಾರದ ಮೇಲೆ ಚಿಕಿತ್ಸೆಯನ್ನು ಕೂಡ ನೀಡ್ತಾರೆ. ಮೊದಲು ನಮಗೆ ಆಗಿರುವ ಅನಾರೋಗ್ಯ ಸಮಸ್ಯೆ ಯಾವ ಪ್ರಕೃತಿಗೆ ಒಳಗೊಂಡಿದೆ ಅನ್ನೋದನ್ನು ಅರಿತುಕೊಳ್ಳಬೇಕು ನಂತರ ಅದಕ್ಕೆ ತಕ್ಕ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೌದು ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾದಾಗ ತಲೆಸುತ್ತುವುದು ನಾವು ಹೆಚ್ಚು ಕಾಫಿ ಟೀ ಕುಡಿಯುವುದರಿಂದ ಈ ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತದೆ. ಆಗ ನಾವು ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬಹುದು ಕೆಲವರು ಕಾಫಿ ಟೀ ಕುಡಿದ ನಂತರ ತಲೆಸುತ್ತು ಅಂದರೆ ಮನೆಯಲ್ಲಿ ಹಿರಿಯರಿದ್ದರೆ ಬಾಯಿಗೆ ಜೀರಿಗೆ ಹಾಕಿ ಅದರ ರಸವನ್ನು ನುಂಗು ಅಂತ ಹೇಳ್ತಾರೆ. ಈ ರೀತಿ ನಮ್ಮ ಹಿರಿಯರು ಕೂಡ ಕೆಲವೊಂದು ಮನೆಮದ್ದುಗಳ ಬಗ್ಗೆ ತಿಳಿದು ಚಿಕ್ಕಪುಟ್ಟ ಸಮಸ್ಯೆಗಳಿಗೆ ಕೂಡಲೇ ಮನೆ ಮದ್ದುಗಳನ್ನು ಮಾಡಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತಾ ಇದ್ದರು.

ಈ ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾದಾಗ ಅದಕ್ಕಾಗಿ ಈ ಪರಿಹಾರವನ್ನು ಮಾಡಿ ಸುಲಭವಾದ ಮನೆಮದ್ದುಗಳು ಮತ್ತು ಸುಲಭವಾಗಿ ಸಮಸ್ಯೆ ಪರಿಹಾರ ಆಗುತ್ತದೆ ಮೊದಲನೆಯ ಮನೆ ಮತ್ತು ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಏನೆಂದರೆ ಜೀರಿಗೆ ಅನ್ನೋ ತೆಗೆದುಕೊಳ್ಳಬೇಕು ನಂತರ ಅದನ್ನು ಕೈ ಮೇಲೆ ಹಾಕಿಕೊಂಡು ಅದಕ್ಕೆ ಸ್ವಲ್ಪವೇ ಸ್ವಲ್ಪ ಸುಣ್ಣವನ್ನು ಮಿಶ್ರ ಮಾಡಿಕೊಳ್ಳಬೇಕು ನಂತರ ಇದನ್ನು ಮತ್ತೊಂದು ಕೈಯಿಂದ ಅಂದರೆ ಎರಡೂ ಕೈಗಳಿಂದ ಜೀರಿಗೆಯ ಹೋಟ್ಟನ್ನು ತೆಗೆದು ಹಾಕಬೇಕು ನಂತರ ಹೋಟ್ಟನ್ನು ತೆಗೆದು ಹಾಕಿ ಜೀರಿಗೆ ಮತ್ತು ಸುಣ್ಣದ ಮಿಶ್ರಣವನ್ನು ಬಾಯಿಗೆ ಹಾಕಿ ಜಗಿದು ಅದರ ರಸವನ್ನು ನುಂಗಬೇಕು. ಈ ರೀತಿ ಮಾಡುವುದರಿಂದ ಪಿತ್ತದ ಸಮಸ್ಯೆ ಬೇಗ ಪರಿಹಾರ ಆಗುತ್ತದೆ, ಇದನ್ನು ದಿನಕ್ಕೆ ಎರಡು ಬಾರಿ ಪಾಲಿಸಬೇಕು.

ಎರಡನೆಯ ಪರಿಹಾರ ಏನು ಅಂದರೆ ಏಲಕ್ಕಿ ಮತ್ತು ಜೇನುತುಪ್ಪ ಇದಕ್ಕಾಗಿ. ಮೊದಲಿಗೆ 1ಫೋರ್ಕ್ ಅಥವಾ ಟೂತ್ ಪೇಸ್ಟ್ ನಿಂದ ಈ ಏಲಕ್ಕಿಯನ್ನು ಚುಚ್ಚಿ ಇದನ್ನು ಸ್ವಲ್ಪ ಸಮಯ ಸುಡಬೇಕು ಸ್ಟೌನ ಮೇಲೆ ಏಲಕ್ಕಿಯನ್ನು ಇಟ್ಟು ಸುಟ್ಟ ನಂತರ ಅದನ್ನು ಜಜ್ಜಿದರೆ ಏಲಕ್ಕಿ ಪುಡಿಯಾಗುತ್ತದೆ. ಆ ಸಂಪೂರ್ಣ ಪುಡಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಸೇವಿಸ ಬೇಕು ಈ ರೀತಿ ಪಿತಗೆ ಸಂಬಂಧಪಟ್ಟ ಸಮಸ್ಯೆ ನಿವಾರಣೆ ಆಗುವವರೆಗೂ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಮಸ್ಯೆಗಳು ಪರಿಹಾರ ಆಗುತ್ತದೆ.

ಈ ಎರಡೂ ಮನೆಮದ್ದುಗಳಲ್ಲಿ ನಿಮ್ಮ ಮನೆಯಲ್ಲಿ ಯಾವ ಪದಾರ್ಥಗಳು ಬೇಗ ದೊರೆಯುತ್ತದೆ. ಅದನ್ನ ಬಳಸಿ ನೀವು ಪರಿಹಾರ ಮಾಡಿಕೊಳ್ಳಿ ಮತ್ತು ಪಿತ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾದಾಗ, ಅದಷ್ಟು ಟೀ ಮತ್ತು ಕಾಫಿ ಕುಡಿಯುವುದನ್ನು ಕಡಿಮೆ ಮಾಡಿ ಮತ್ತು ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸವನ್ನು ಹಿಂಡಿ ಆ ನೀರನ್ನು ಕುಡಿಯುತ್ತಾ ಬನ್ನಿ ಬೇಗ ಸಮಸ್ಯೆ ಪರಿಹಾರವಾಗುತ್ತದೆ.

WhatsApp Channel Join Now
Telegram Channel Join Now