ಈ ಸೊಪ್ಪನ್ನ ಮನೆಗೆ ತಂದು ಹೀಗೆ ಬಳಸಿ ಸಾಕು ನಿಮ್ಮ ಜೀವಮಾನದಲ್ಲಿ ಕೀಲು ನೋವು , ಮಂಡಿ ಹಾಗು ಸೊಂಟ ನೋವು ಬರೋದೇ ಇಲ್ಲ..

153

ಕೀಲುನೋವು ಮಂಡಿನೋವಿನ ಸಮಸ್ಯೆಗೆ ಸಂಧಿವಾತದ ಸಮಸ್ಯೆಗೆ ಒಂದು ಮನೆಯ ಮದ್ದನ್ನು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಇತ್ತೀಚಿನ ದಿವಸಗಳಲ್ಲಿ ಅಂತೂ ಸಂಧಿವಾತದ ಸಮಸ್ಯೆ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಮೂವತ್ತರಿಂದ ನಲವತ್ತು ವಯಸ್ಸಿನ ವ್ಯಕ್ತಿಗಳಿಗೆ ಹೆಚ್ಚಾಗಿ ಕಂಡು ಬರುತ್ತಿದ್ದು.ಈ ಒಂದು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನಾವು ತಿಳಿದುಕೊಳ್ಳೋಣ ಶಾಶ್ವತ ಪರಿಹಾರ ಅಂತ ಅಂದರೆ ಯಾವುದೆ ಟ್ರೀಟ್ಮೆಂಟ್ ಅಲ್ಲ ಅಥವಾ ಯಾವುದೆ ಮಾತ್ರೆಗಳನ್ನು ಸೇವಿಸುವುದು ಕೂಡ ಅಲ್ಲ. ಇದನ್ನು ನಾವು ಒಂದು ಔಷಧೀಯ ಗಿಡಮೂಲಿಕೆಯನ್ನು ಬಳಸಿ ಈ ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ.

ಸಾಮಾನ್ಯವಾಗಿ ನಮ್ಮ ದೇಹ ರಚನೆಯಲ್ಲಿ ಮೂಳೆಗಳ ನಡುವೆ ಒಂದು ತೆಳುವಾದ ಪದರವಿರುತ್ತದೆ. ಅದನ್ನ ಕಾರ್ಟಿಲೇಜ್ ಅಂತ ಕರೀತೇವೆ. ಇದು ತುಂಬಾ ತೆಳುವಾಗಿ ಇದ್ದು. ಇದೇನಾದರೂ ಡ್ಯಾಮೇಜ್ ಆದರೆ ನಮಗೆ ಕೀಲುನೋವಿನ ಸಮಸ್ಯೆ ಮಂಡಿನೋವಿನ ಸಮಸ್ಯೆ ಉಂಟಾಗುತ್ತದೆ. ಅತಿಯಾದ ಬೊಜ್ಜು ತೂಕ ಹೆಚ್ಚುವಿಕೆ ಮತ್ತು ದೇಹಕ್ಕೆ ವ್ಯಾಯಾಮ ಮಾಡಿಸದೆ ಇರುವುದು ಉತ್ತಮವಾದ ಜೀವನ ಶೈಲಿಯನ್ನು ನಡೆಸದೆ ಇರುವುದು ಈ ಎಲ್ಲ ಕಾರಣಗಳು ಕೂಡಾ ಮಂಡಿ ನೋವು ಕೀಲು ನೋವಿನ ಸಮಸ್ಯೆಗೆ ಸಂಧಿವಾತದ ಸಮಸ್ಯೆಗೆ ಕಾರಣಗಳು ಆಗುತ್ತವೆ.

ಆದಕಾರಣ ಇಂದಿನ ಮಾಹಿತಿಯಲ್ಲಿ ನಾನು ತಿಳಿಸುತ್ತಿರುವ ವಿಚಾರವೂ ಒಂದು ಗಿಡಮೂಲಿಕೆಯನ್ನು ಬಳಸಿ ಇದನ್ನು ಉಪಯೋಗಿಸುತ್ತಾ ಬರುವುದರಿಂದ ಕೀಲು ನೋವಿನ ಸಮಸ್ಯೆ ಸಂಧಿವಾತದ ಸಮಸ್ಯೆ ಕಡಿಮೆಯಾಗುತ್ತದೆ. ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರೊಂದಿಗೆ ತೂಕ ಹೆಚ್ಚಿದ್ದರೆ ಅಥವಾ ಅನಗತ್ಯ ಬೊಜ್ಜು ಸಮಸ್ಯೆ ಇದ್ದಲ್ಲಿ. ಆ ಒಂದು ತೂಕವನ್ನು ಇಳಿಸಿಕೊಳ್ಳುವ ಮುಖಾಂತರ ಕೂಡ ನಾವು ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ.

ತೂಕ ಹೆಚ್ಚಾದರೆ ಮೂಳೆ ಸವೆತ ಆಗುತ್ತದೆ ಇದರಿಂದ ಕೂಡ ಮಂಡಿ ನೋವಿನ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಮಾಡಬಹುದಾದ ಕೆಲವೊಂದು ಪರಿಹಾರಗಳನ್ನು ನುಗ್ಗೆ ಸೊಪ್ಪು. ಈ ನುಗ್ಗೆ ಸೊಪ್ಪು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿಯೂ ಕೂಡ ಸಿಗುತ್ತಿದೆ ಹಾಗಾಗಿ ಇದನ್ನು ಪೇಟೆ ಮಂದಿ ಕೂಡ ಮಾಡಿಕೊಳ್ಳಬಹುದಾಗಿದೆ.

ಮೊದಲಿಗೆ ನುಗ್ಗೆ ಸೊಪ್ಪನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು ನಂತರ ಈ ಎಲೆಯನ್ನು ಬೇರ್ಪಡಿಸಿ ಅದನ್ನು ಪೇಸ್ಟ್ ಮಾಡಿಕೊಳ್ಳಬೇಕು. ಅಗತ್ಯವಾದರೆ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಸೈಂಧವ ಲವಣವನ್ನು ಹಾಕಿ ಮತ್ತೊಮ್ಮೆ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಈ ಪೇಸ್ಟ್ ಅನ್ನು ನೋವಾದ ಭಾಗದಲ್ಲಿ ಲೇಪನ ಮಾಡಿಕೊಳ್ಳಬೇಕು .

ಈ ರೀತಿ ಪ್ರತಿದಿನ ಮಾಡುತ್ತಾ ಬರುವುದರಿಂದ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ ಸಂಧಿವಾತ ಸಮಸ್ಯೆ ಕೂಡ ಪರಿಹಾರವಾಗುತ್ತದೆ ಅಷ್ಟೇ ಅಲ್ಲದೆ ಉತ್ತಮವಾದ ಜೀವನ ಶೈಲಿಯಲ್ಲಿ ನುಗ್ಗೆಸೊಪ್ಪನ್ನು ವಾರದಲ್ಲಿ ಎರಡು ಬಾರಿ ತಿನ್ನುತ್ತಾ ಬರುವುದರಿಂದ. ದೇಹಕ್ಕೆ ಒಳ್ಳೆಯ ಕ್ಯಾಲ್ಷಿಯಂ ಮತ್ತು ಐರನ್ ಅಂಶ ದೊರೆಯುತ್ತದೆ ಇದು ಮೂಳೆಗಳನ್ನು ಬಲಪಡಿಸುತ್ತದೆ.

ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಾ ಇದೆ ಅನ್ನೋರು ಸ್ನಾನ ಮಾಡುವ ನೀರಿಗೆ ಸೈಂಧವ ಲವಣವನ್ನು ಬೆರೆಸಿ ಸ್ನಾನ ಮಾಡುವುದರಿಂದ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಸ್ವಲ್ಪ ಕಡಿಮೆಯಾಗುತ್ತದೆ. ನೀವು ಯಾವುದೆ ಚಿಕಿತ್ಸೆ ಪಡೆಯದೆ ನಿಮ್ಮ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಈ ಕೆಲವೊಂದು ಟಿಪ್ಸ್ಗಳನ್ನು ಪಾಲಿಸುವ ಮುಖಾಂತರ ಪರಿಹರಿಸಿಕೊಳ್ಳಬಹುದು.

WhatsApp Channel Join Now
Telegram Channel Join Now