ಚರ್ಮದ ಮೇಲೆ , ಮುಖದ ಮೇಲೆ ಎಂತ ಕಲೆ , ಬೋಂಗು ಆದರೂ ಸಹ ಈ ಒಂದು ಬೇರನ್ನ ಚೆನ್ನಾಗಿ ಅರೆದು ಹಚ್ಚಿದರೆ ಸಾಕು … ಎಲ್ಲ ನಿವಾರಣೆ ಆಗುತ್ತದೆ…

129

ಮುಖದ ಮೇಲಿರುವ ಕಲೆಯನ್ನ ನಿವಾರಣೆ ಮಾಡಲು ಜತೆಗೆ ಬಿಕ್ಕಳಿಕೆ ಸಮಸ್ಯೆ ಬಾಯಾರಿಕೆ ಇಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಈ ಬೇರಿನ ಪ್ರಯೋಜನ ಪಡೆದುಕೊಳ್ಳಿ ಇದು ಸಾಮಾನ್ಯವಾದ ಬೇರಲ್ಲ ಆದರೂ ಕೂಡ ಜನರು ಇದರ ಪ್ರಭಾವದ ಬಗ್ಗೆ ತಿಳಿದಿಲ್ಲ ಬನ್ನಿ ಇಂದಿನ ಲೇಖನ ತುಂಬ ವಿಶೇಷವಾಗಿದೆ ಹಾಗೂ ಈ ಬೇರಿನ ಪ್ರಯೋಜನ ತಿಳಿದು ನೀವು ಕೂಡ ಇದರ ಬಳಕೆ ಮಾಡಿಹೌದು ಈ ಬೇರು ಸಾಮಾನ್ಯವಾಗಿ ಹಳ್ಳಿ ಕಡೆ ದೊರೆಯುತ್ತದೆ ಇದು ಪೊದೆ ಪೊದೆ ರೀತಿಯಲ್ಲಿ ಬೆಳೆಯುತ್ತದೆ, ಈ ಗಿಡಮೂಲಿಕೆ ಮತ್ಯಾವುದೂ ಅಲ್ಲ ಲಾವಂಚ. ಹೌದು ಲಾವಂಚದ ಬೇರು ಇದರ ಹೆಸರನ್ನು ನೀವು ಕೇಳಿದ್ದೀರಾ ಅಲ್ವಾ ಈ ಬೇರಿನ ಪ್ರಯೋಜನ ಅಪಾರವಾದುದು.

ನಿಮ್ಮಲ್ಲಿ ಕಾಡುತ್ತಿರುವಂತಹ ಹಲವು ಸಮಸ್ಯೆಗಳಿಗೆ ಇದು ಯಾವ ರೀತಿ ಪರಿಹಾರ ಕೊಡುತ್ತದೆ ಎಂಬುದನ್ನು ತಿಳಿಸುವುದೇ ಇವತ್ತಿನ ಈ ಲೇಖನದ ಮುಖ್ಯ ಉದ್ದೇಶ ಆಗಿದೆ ಹಾಗಾಗಿ ಲಾವಂಚದ ಬೇರಿನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ಲೇಖನದಲ್ಲಿ.

ಲಾವಂಚದ ಬೇರು ಇದರ ಹೆಸರು ನಿಮಗೆ ವಿಚಿತ್ರವೆನಿಸಬಹುದು ಇದನ್ನು ಸಂಸ್ಕೃತದಲ್ಲಿ ಹುಸಿರ ಅಂತ ಕರೆಯುತ್ತಾರೆ ಈ ಬೇರಿನ ಕುರಿತು ಹೇಳುವುದಾದರೆ ತ್ವಚೆಗೆ ಸಂಬಂಧಪಟ್ಟಂತಹ ಹಲವು ಸಮಸ್ಯೆಗಳಿಗೆ ಈ ಬೇರಿನ ಪ್ರಯೋಜನ ಉತ್ತಮವಾಗಿ ಕೆಲಸ ಮಾಡಿ ಪ್ರಭಾವವಾಗಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ, ಹಾಗೂ ಲಾವಂಚದ ಬೇರಿನ ಚೂರ್ಣವನ್ನು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ರೀತಿ ಹಚ್ಚುತ್ತಾ ಬಂದರೆ ಮುಖದ ಮೇಲಿರುವ ಮೊಡವೆ ಕಲೆ ಯಿಂದ ಹಿಡಿದು ಪಿಗ್ಮೆಂಟೇಶನ್ ತೊಂದರೆ ಅನ್ನೂ ಸಹ ನಿವಾರಣೆ ಮಾಡುತ್ತದೆ ಈ ಬೇರಿನ ಚೂರ್ಣ

ಬಿಕ್ಕಳಿಕೆ ಸಮಸ್ಯೆ ಕಾಡುತ್ತಾ ಇರುವವರು ಈ ಬೇರಿನ ಚೂರ್ಣವನ್ನು ಕೊತ್ತಂಬರಿ ಬೀಜದ ಪುಡಿಯೊಂದಿಗೆ ಮಿಶ್ರಮಾಡಿ ಸೇರಿಸುತ್ತಾ ಬರಬೇಕು ಇದರಿಂದ ಬಿಕ್ಕಳಿಕೆ ನಿವಾರಣೆಯಾಗುತ್ತದೆಈ ಬೇರಿನ ಚೂರ್ಣ ಕಷಾಯ ಮಾಡಿ ಸೇವನೆ ಮಾಡುತ್ತಾ ಬಂದರೆ ಉದರ ಸಂಬಂಧಿ ತೊಂದರೆಗಳು ಅಜೀರ್ಣತೆ ನಿವಾರಣೆಯಾಗುತ್ತದೆ ಕರುಳು ಶುದ್ದಿಯಾಗುತ್ತದೆ ಜೊತೆಗೆ ಈ ಬೇರಿನ ಚೂರ್ಣವನ್ನು ಬೆಲ್ಲದೊಂದಿಗೆ ಮಿಶ್ರ ಮಾಡಿ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.

ಲಾವಂಚದ ಬೇರಿನ ಚೂರ್ಣವನ್ನು ಹಾಲಿನೊಂದಿಗೆ ಮಿಶ್ರಮಾಡಿ ಇದಕ್ಕೆ ರೋಸ್ ವಾಟರ್ ಮತ್ತು ಅರಿಶಿಣ ಮಿಶ್ರಣ ಮಾಡಿ ಮೊಡವೆಯಾದ ಕಲಿಕೆ ಲೇಪನ ಮಾಡಬೇಕು ಇದರಿಂದ ಮೊಡವೆ ಕಲೆಗಳು ನಿವಾರಣೆ ಆಗುತ್ತದೆ ಮತ್ತು ಫೇಸ್ ಗ್ಲೋ ಸಹ ಬರುತ್ತದೆಪಿಗ್ಮೆಂಟೇಶನ್ ತೊಂದರೆ ಹಲವರಿಗೆ ಕಾಡುತ್ತಾ ಇರುತ್ತದೆ ಅಂಥವರು ಲಾವಂಚದ ಬೇರಿನ ಚೂರ್ಣವನ್ನು ಅಕ್ಕಿಹಿಟ್ಟು ಮತ್ತು ಕಡಲೆ ಹಿಟ್ಟಿನೊಂದಿಗೆ ಮಿಶ್ರ ಮಾಡಿ ಪ್ರತಿದಿನ ಮುಖಕ್ಕೆ ಹಚ್ಚುತ್ತ ಬರಬೇಕು ಇದರಿಂದ ಪಿಗ್ಮೆಂಟೇಶನ್ ತೊಂದರೆ ಕೂಡ ನಿವಾರಣೆಯಾಗುತ್ತದೆ.

ಕಫ ಮತ್ತು ವಾತಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಣೆ ಮಾಡಲು ಲಾವಂಚದ ಬೇರು ಉಪಯುಕ್ತವಾಗಿದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆಈ ಲಾವಂಚದ ಬೇರು ಹೌದು ಇದರ ಕಷಾಯ ಮಾಡುವಾಗ ಇದರೊಟ್ಟಿಗೆ ಶುಂಠಿ ಮತ್ತು ಮೆಣಸನ್ನು ಮಿಶ್ರಮಾಡಿ ಇದರ ಸೇವನೆ ಮಾಡುತ್ತಾ ಬಂದರೆ ಅಂದರೆ ಲಾವಂಚದ ಬೇರಿನ ಕಷಾಯವನ್ನು ಸೇವನೆ ಮಾಡುತ್ತಾ ಬಂದರೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ.ಇಷ್ಟೆಲ್ಲಾ ಆರೋಗ್ಯಕರ ಲಾಭಗಳಿರುವ ಲಾವಂಚದ ಬೇರು ನಿಮಗೆ ಆಯುರ್ವೇದಿಕ್ ಅಂಗಡಿಗಳಲ್ಲಿಯೂ ಕೂಡ ದೊರೆಯುತ್ತದೆ ಈ ಆರೋಗ್ಯಕರ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದ.

LEAVE A REPLY

Please enter your comment!
Please enter your name here