ನೀವು ತಿಂದಿದ್ದು ಜೀರ್ಣ ಆಗುತ್ತಾ ಇಲ್ಲವ ಹಾಗಾದ್ರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು , ಅಜೀರ್ಣ ಸಮಸ್ಸೆ ಸಂಪೂರ್ಣವಾಗೇ ನಿವಾರಣೆ ಆಗುತ್ತೆ..

166

ಅಜೀರ್ಣ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಮಾಡಿಗೆ ಸರಳ ಮನೆಮದ್ದು ಇದನ್ನು ಮಾಡುವುದಕ್ಕೆ ಹೆಚ್ಚು ಶ್ರಮ ಬೇಕಿಲ್ಲ ನಿಮ್ಮ ಅಜೀರ್ಣತೆಯ ನ್ನ ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಮಾಡಬಹುದು!ನಮಸ್ಕಾರಗಳು ಬನ್ನಿ ಇವತ್ತಿನ ಲೇಖನದಲ್ಲಿ ನಾವು ಹೇಳುವಂತಹ ಈ ಮನೆಮದ್ದನ್ನು ಸಂಪೂರ್ಣವಾಗಿ ತಿಳಿಯಿರಿ ಸಹಜವಾಗಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತಹ ಈ ಅಜೀರ್ಣತೆಗೆ ಸಕಷ್ಟು ಪರಿಹಾರಗಳಿವೆ ಅದು ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಪರಿಹಾರಗಳಿರಬಹುದು ಹಾಗೂ ಕೆಲವೊಂದು ಪರಿಹಾರಗಳು ಅದು ಮನೆಮದ್ದುಗಳು ಸಹ ಆಗಿರಬಹುದು.

ಆದರೆ ನಾವು ಪರಿಹಾರಗಳನ್ನು ಪಾಲಿಸುವಾಗ ಅದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದಿರುವ ಹಾಗೆ ತಿಳಿದು ಬಳಿಕ ಆ ಮನೆಮದ್ದುಗಳ ಬಳಸಬೇಕು ಅಥವಾ ಮಾರುಕಟ್ಟೆ ದೊರೆಯುವಂತಹ ಕೆಲವೊಂದು ಪರಿಹಾರಗಳನ್ನು ಸಹ ಬಳಸಬಹುದು ಈ ದಿನದ ಲೇಖನದಲ್ಲಿ ಅಜೀರ್ಣತೆಗೆ ಮಾಡಬಹುದಾದ ಮನೆಯಲ್ಲಿಯೇ ಮಾಡಬಹುದಾದಂತಹ ಸರಳ ಮನೆ ಮದ್ದಿನ ಕುರಿತು ಮಾತನಾಡುತ್ತಿದ್ದೇವೆ.

ಹಾಗಾಗಿ ಅಜೀರ್ಣತೆ ನ ನಿವಾರಣೆ ಮಾಡಿಕೊಳ್ಳುವ ಹಲವು ವಿಧಾನಗಳನ್ನು ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ.ಹೌದು ಅಜೀರ್ಣತೆ ಯಾವಾಗ ಉಂಟಾಗುತ್ತದೆ ಅಂದರೆ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಮತ್ತು ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದರಿಂದ ಅದರ ತೀವ್ರತೆ ಉಂಟಾಗುತ್ತದೆ ಅಷ್ಟೇ ಅಲ್ಲ ಕೆಲವೊಂದು ಆಹಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಹಳಸಿದ ಅನ್ನ ಊಟ ಮಾಡುವುದು ಅಥವಾ ವಿಪರೀತವಾಗಿ ಮಸಾಲೆ ಪದಾರ್ಥಗಳನ್ನು ಸೇರಿಸಿ ಆಹಾರಪದಾರ್ಥಗಳನ್ನು ತಯಾರಿಸಿ ತಿನ್ನುವುದು

ಹೆಚ್ಚು ಮಾಂಸಾಹಾರ ಪದಾರ್ಥಗಳನ್ನು ಸೇವಿಸುವುದು ಮತ್ತು ಕರಿದ ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಈ ರೀತಿ ಕೆಲವೊಂದು ಪದಾರ್ಥಗಳು ಕೆಲವೊಂದು ಬಾರಿ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ ಹಾಗೂ ದೇಹದಲ್ಲಿ ನಮ್ಮ ಜೀರ್ಣಶಕ್ತಿ ಕಡಿಮೆ ಇದ್ದರೂ ಸಹ ತಿಂದ ಆಹಾರ ಜೀರ್ಣವಾಗದೆ ಅಜೀರ್ಣತೆ ಉಂಟಾಗುತ್ತದೆ ಆಗ ಹುಳಿತೇಗು ಗ್ಯಾಸ್ಟ್ರಿಕ್ ಸಮಸ್ಯೆ ಎದೆ ಉರಿ ಇಂತಹ ತೊಂದರೆಗಳು ಎದುರಾಗುತ್ತದೆ.

ಹಾಗಾಗಿ ಈ ರೀತಿ ಅಜೀರ್ಣತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳೋದಕ್ಕೆ ಮಾಡಬಹುದಾದ ಮೊದಲನೇ ಮನೆ ಮದ್ದಿನ ವಿಧಾನ ಹೇಗೆ ಅಂದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಲವಂಗ.ಲವಂಗವನ್ನು ಕುಟ್ಟಿ ಪುಡಿ ಮಾಡಿಕೊಂಡು ನೀರನ್ನು ಕುದಿಸಿಕೊಂಡು ನೀರಿಗೆ ಲವಂಗದ ಪುಡಿಯನ್ನು ಮಿಶ್ರ ಮಾಡಿ ಆ ನೀರನ್ನು ಊಟದ ನಂತರ ಕುಡಿಯಬೇಕು. ಈ ವಿಧಾನವನ್ನು ಪಾಲಿಸುವುದರಿಂದ ಅಜೀರ್ಣತೆ ನಿವಾರಣೆಯಾಗುತ್ತದೆ ಮತ್ತು ಹುಳಿ ತೇಗಿನ ಅಂತಹ ಸಮಸ್ಯೆ ಹೊಟ್ಟೆ ಉಬ್ಬರದಂತಹ ಸಮಸ್ಯೆ ಪರಿಹಾರವಾಗುತ್ತದೆ ಕೆಲವರಿಗೆ ಹುಳಿತೇಗು ಬರುತ್ತಾ ಇರುತ್ತದೆ ಈ ಮನೆಮದ್ದು ಪಾಲಿಸುವುದರಿಂದ ಆ ಹುಳಿತೇಗಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ಎರಡನೆಯ ವಿಧಾನ ಬಹಳ ಎಫೆಕ್ಟಿವ್ ಮನೆಮದ್ದು ಅದೇನೆಂದರೆ ಓಂಕಾಳು ಈ ಮನೆ ಮದ್ದಿಗೆ ಬೇಕಾಗಿರುತ್ತದೆ ಓಂ ಕಾಳನ್ನು, ಇದನ್ನೂ ಪುಡಿ ಮಾಡಿಕೊಂಡು ಈ ಓಂಕಾಳಿನ ಪುಡಿಯನ್ನು ಬಿಸಿ ನೀರಿಗೆ ಮಿಶ್ರಣ ಮಾಡಿಕೊಂಡು ಊಟದ ನಂತರ ಆಗಲಿ ಅಥವಾ ಊಟಕ್ಕೂ ಮೊದಲು ಆಗಲಿ ಕುಡಿಯಬೇಕು.ಈ ವಿಧಾನವನ್ನು ಪಾಲಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಊಟದ ನಂತರ ಈ ಡ್ರಿಂಕ್ ಅನ್ನು ಕುಡಿಯುವುದರಿಂದ ಅಜೀರ್ಣತೆ ನಿವಾರಣೆಯಾಗುತ್ತದೆ. ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಮೆಟಬಾಲಿಸಮ್ ರೇಟ್ ಮುಖ್ಯವಾಗಿ ಹೆಚ್ಚುತ್ತದೆ.ಹಾಗಾಗಿ ಈ ಮನೆ ಮದ್ದನ್ನು ಪಾಲಿಸಿ ಅಥವಾ ಈ ದಿನ ದ ಲೇಖನದಲ್ಲಿ ತಿಳಿಸಿದಂತಹ ಈ ಎರಡೂ ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸಿ ಅಜೀರ್ಣತೆಯಿಂದ ನಿವಾರಣೆ ಮಾಡಿಕೊಳ್ಳಿ ಧನ್ಯವಾದ.