ಬಾಯಲ್ಲಿ ಆಗುವ ಹುಣ್ಣುಗಳು , ಹಲ್ಲಲ್ಲಿ ಆಗುವ ಹುಳುಕು , ಪಿತ್ತ ಇನ್ನು ಅನೇಕ ಸಮಸ್ಸೆಗೆ ರಾಮಭಾಣ ಈ ಸೊಪ್ಪು …

256

ಬಸಳೆ ಸೊಪ್ಪಿನ ಪ್ರಯೋಜನ ತಿಳಿದರೆ ಖಂಡಿತ ಅಚ್ಚರಿಯಾಗುತ್ತೆ! ಹೌದು ನಮ್ಮ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಈ ಸೊಪ್ಪು ಪ್ರಕೃತಿಯಲ್ಲಿ ಅಡಗಿರುವ ಎಷ್ಟು ಶಕ್ತಿಯನ್ನು ತನ್ನೊಳಗೆ ಅಡಗಿಸಿಕೊಂಡಿದೆ ಅಲ್ವಾ. ಹಾಗಾಗಿಯೇ ಅದೆಷ್ಟೋ ಅನಾರೋಗ್ಯ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರವನ್ನೂ ನೀಡಬಲ್ಲದು ಈ ಬಸಳೆ…

ಹೌದು ಬಸಳೆ ಸೊಪ್ಪು ಸಾಮಾನ್ಯವಾಗಿ ತಿನ್ನಲು ನಿಮಗೆ ರುಚಿ ಅನಿಸದೆ ಇರಬಹುದು ಆದರೆ ಬಸಳೆ ಸೊಪ್ಪಿನಿಂದ ಹಲವು ಖಾದ್ಯಗಳನ್ನು ತಯಾರಿಸಿ ತಿನ್ನಬಹುದು ರುಚಿರುಚಿಯಾಗಿಯೂ ಕೂಡಾ ಮಾಡಿ ತಿನ್ನಬಹುದು ಇತ್ತೀಚಿನ ದಿನಗಳಲ್ಲಿ ಬಸಳೆ ಸೊಪ್ಪಿನಿಂದ ಬಜ್ಜಿ ಅಂತ ರುಚಿಕರವಾದ ಖಾದ್ಯ ಗಳಂತೆ ಎಲ್ಲವನ್ನೂ ಮಾಡಿ ತಿಂತಾರೆ, ಅದರ ಬಸಳೆ ಸೊಪ್ಪನ್ನು ನಾವು ರುಚಿಕರ ಖಾದ್ಯ ವಾಗಿ ಸೇವಿಸಿದರೂ ಆಗೋ ಹಾಗೆ ಸೊಪ್ಪನ್ನು ಬೇಯಿಸಿ ಅದರ ರುಚಿಯನ್ನು ಸವಿದರು ಇದರಲ್ಲಿರುವ ಗುಣ ಮಾತ್ರ ಒಂದೆ.

ಹೌದು ಬಸಳೆ ಸೊಪ್ಪನ್ನು ನೀವು ಹೇಗೆ ತಿನ್ನಿ, ಆದರೆ ಮಾತ್ರ ಈ ಸೊಪ್ಪಿನ ಸೇವನೆ ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಉಪಯೋಗಗಳನ್ನು ನೀಡುತ್ತದೆ. ಹಾಗಾಗಿ ಬಸಳೆ ಸೊಪ್ಪಿನ ಪ್ರಯೋಜನಗಳನ್ನು ಅರಿತು ಇದರ ರುಚಿ ಹೇಗೇ ಇರಲಿ ಅದನ್ನು ಆದಷ್ಟು ಹೆಚ್ಚಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಬಸಳೆ ಸೊಪ್ಪಿನ ಸೇವನೆ ಮಾಡುತ್ತಾ ಬನ್ನಿ. ಎಷ್ಟೋ ಮಂದಿ ಸೊಪ್ಪುಗಳನ್ನೂ ತಿನ್ನುವುದಕ್ಕೆ ಆಲಸ್ಯ ಮಾಡ್ತಾರೆ ಆದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ, ಯಾವಾಗ ಅಂದರೆ ನಮ್ಮ ಆರೋಗ್ಯ ಕೆಟ್ಟಾಗ ಮಾತ್ರೆ ತೆಗೆದುಕೊಳ್ಳುವ ಪರಿಸ್ಥಿತಿ ಬಂದಾಗ.

ಹಾಗೆ ಎಂದಿಗೂ ಮಾಡಿಕೊಳ್ಳಬೇಡಿ ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ ನಾವು ಚಿಕ್ಕವರಾಗಿದ್ದಾಗಿನಿಂದ ಮೂವತ್ತು ವರುಷಗಳ ವರೆಗೂ ಹೇಗೆ ಆಹಾರ ಪದ್ದತಿಯನ್ನು ಪಾಲಿಸಿಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬನ್ನಿ. ಆಗ ಮುಂದಿನ ದಿನಗಳಲ್ಲಿಯೂ ಅಂದರೆ ಮೂವತ್ತು ವರ್ಷ ಮೇಲ್ಪಟ್ಟ ಮೇಲೆಯೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಾವು ನಮ್ಮ ಆಹಾರ ಪದ್ಧತಿಯ ಬಗ್ಗೆಯೂ ಜೀವನಶೈಲಿಯ ಬಗ್ಗೆಯೂ ಆಲೋಚಿಸದೆ ನಮಗೆ ಹೇಗೆ ಬೇಕೋ ಹಾಗೆ ನಡೆದುಕೊಂಡು ಹೋದರೆ, ಹಾಗೆಯೇ ಮುಂದಿನ ದಿನಗಳಲ್ಲಿ ನಮ್ಮ ಶರೀರ ಸರಿಯಾಗಿ ನಮಗೂ ಕೂಡ ಬುದ್ಧಿ ಕಲಿಸುತ್ತದೆ. ಹಲವು ಮಾತ್ರೆಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡುತ್ತದೆ, ಹಾಗೆ ಆಗೋದು ಬೇಕಾ?

ಹಾಗಾದರೆ ನಿಮ್ಮ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಲು ಇಂದಿನಿಂದಲೇ ಉತ್ತಮ ಆಹಾರ ಪದ್ದತಿಯನ್ನು ಪಾಲಿಸಿ ಜೊತೆಗೆ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ಆಕೆಯ ಹಸಿರು ಹಸಿರಾಗಿರುವ ಈ ಬಸಳೆಸೊಪ್ಪು ಮಧುಮೇಹದಿಂದ ಹಿಡಿದು ನಿಮ್ಮ ಹಲ್ಲು ನೋವಿನ ಸಮಸ್ಯೆ ವರೆಗು ಉತ್ತಮ ಪರಿಹಾರವನ್ನು ನೀಡುತ್ತದೆ. ನಿಮಗೇನಾದರೂ ಹಲ್ಲು ನೋವೆ ? ಬಸಳೆ ಸೊಪ್ಪಿನ ಕಲ್ಲುಪ್ಪನ್ನು ಸೇರಿಸಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟು ಜಗಿದು ಸ್ವಲ್ಪ ಸಮಯ ಹಾಗೆ ಇಟ್ಟುಕೊಳ್ಳಿ. ಇದರಿಂದ ಹಲ್ಲು ನೋವು ಬಹಳ ಬೇಗ ಶಮನಗೊಳ್ಳುತ್ತದೆ ಒಮ್ಮೆ ಟ್ರೈ ಮಾಡಿ ಹಲ್ಲು ನೋವು ಬಂದಾಗ.

ಮಧುಮೇಹಿಗಳಿಗೆ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣಕ್ಕೆ ತರಲು ಈ ಬಸಳೆಸೊಪ್ಪು ಸಹಕಾರಿ ಹಾಗೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವವರು ಮತ್ತು ಬಾಯಿಹುಣ್ಣು ಸಮಸ್ಯೆ ಅನ್ನುವವರು ಬಸಳೆ ಸೊಪ್ಪು ಸೇವಿಸಿ ನಿಮಗೆ ಈ ಸೊಪ್ಪು ವರದಾನ ಎನ್ನಬಹುದು…. ಹೌದು ಪ್ರಕೃತಿ ಮಾತೆ ನಿಮಗಾಗಿ ಈ ಬಸಳೆ ಸೊಪ್ಪನ್ನು ವರವಾಗಿ ನೀಡಿದ್ದಾಳೆ. ಹಾಗಾಗಿ ಈ ಸಮಸ್ಯೆಯಿಂದ ಬಳಲುವವರು ಸ್ವಲ್ಪ ಹೆಚ್ಚಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಈ ಬಸಳೆ ಸೊಪ್ಪನ್ನು ಅಳವಡಿಸಿಕೊಳ್ಳಿ ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಹಾಗೆ ಬಾಯಿ ಹುಣ್ಣು ಅನ್ನೋರು ಬೇರೆ ಯಾವುದೂ ಪರಿಹರ ಮಾಡಿಕೊಳ್ಳುವುದಕ್ಕಿಂತ ಬಸಳೆ ಸೊಪ್ಪು ತಿನ್ನಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

WhatsApp Channel Join Now
Telegram Channel Join Now