ನಿಮ್ಮ ಚರ್ಮದ ಮೇಲೆ ಏನೇ ತೊಂದರೆ ಆದರೂ ಸಹ ಈ ಒಂದು ಮನೆಮದ್ದು ಹಚ್ಚಿ ಸಾಕು .. ಚಮತ್ಕಾರದ ರೂಪದಲ್ಲಿ ನಿವಾರಣೆ ಆಗುತ್ತೆ..

122

ಚರ್ಮ ಸಂಬಂಧಿ ಸಮಸ್ಯೆ ಇರುವವರು ಮಾಡಿ ಈ ಪರಿಹಾರ ಈ ಮನೆಮದ್ದಿನಿಂದ ಯಾವುದೇ ತರದ ಚರ್ಮಕ್ಕೆ ಸಂಬಂಧಪಟ್ಟ ತೊಂದರೆ ಇರಲಿ ಅದು ಬಹು ಬೇಗ ಪರಿಹಾರ ಆಗುತ್ತದೆ! ನಮಸ್ಕಾರಗಳು ಬನ್ನಿ ಇವತ್ತಿನ ಲೇಖನದಲ್ಲಿ ಚರ್ಮ ಸಂಬಂಧಿ ತೊಂದರೆ ಆಗಿರುವಂತಹ ಕಜ್ಜಿ ತುರಿಕೆ ಅಥವಾ ಇನ್ಯಾವುದೇ ಸಂಘ ಸಮಸ್ಯೆ ಇದ್ದರೂ ಅದನ್ನ ಪರಿಹಾರ ಮಾಡೋದಕ್ಕೆ ಮನೆಯಲ್ಲೇ ಮಾಡಬಹುದಾದ ಸರಳ ಮತ್ತು ಉತ್ತಮ ಮನೆಮದ್ದಿನ ಕುರಿತು ತಿಳಿದುಕೊಳ್ಳೋಣ.

ಹೌದು ಹಲವರಿಗೆ ಸಂಶಯ ಇರುತ್ತದೆ ಕೆಲವೊಂದು ಔಷಧಿಗಳನ್ನು ಬಳಸುವಾಗ ಈ ಪರಿಹಾರ ನಮಗೆ ಸಮಸ್ಯೆಯಿಂದ ವಿವರಣೆ ಕೊಡುತ್ತಾ ಅಂತ ಆದರೆ ಬಳಸಿದ ಮೇಲೆ ತಾನೆ ಆ ಔಷಧಿ ಫಲಿತಾಂಶ ಕೊಡ್ತಾ ಇಲ್ವಾ ಎಂಬುದು ಗೊತ್ತಾಗುವುದು.ಒಳ್ಳೆಯ ಫಲಿತಾಂಶ ಕೊಟ್ಟರೆ ಉತ್ತಮ ಆದರೆ ಸೈಡ್ ಎಫೆಕ್ಟ್ ಗಳನ್ನು ನೀಡಿದರೆ ಇನ್ನಷ್ಟು ತೊಂದರೆಯಾಗುತ್ತದೆ ಆದರೆ ಮನೆಮದ್ದಿನಲ್ಲಿ ಹಾಗಲ್ಲ ನೀವು ನೈಸರ್ಗಿಕವಾಗಿ ಮಾಡಿಕೊಳ್ಳುವ ಈ ಮನೆಮದ್ದಿನಿಂದ ಯಾವುದೇ ತರಹದ ಸೈಡ್ ಎಫೆಕ್ಟ್ ಗಳು ಇಲ್ಲದೆ, ಚರ್ಮ ಸಂಬಂಧಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ಚರ್ಮ ಸಂಬಂಧಿ ತೊಂದರೆಯನ್ನು ನಿವಾರಣೆ ಮಾಡುವುದಕ್ಕೆ ನಾವಿಲ್ಲಿ ಬಳಸುತ್ತಿರುವಂತಹ ಪದಾರ್ಥ ಅಂದರೆ ಅದು ಉತ್ತಮವಾದ ಗಿಡಮೂಲಿಕೆ ಅದು ಮತ್ಯಾವುದೂ ಅಲ್ಲ ಕುಪ್ಪಿಗಿಡ, ಹೌದು ಈ ಕುಪ್ಪಿಗಿಡ ಬಹಳ ಅದ್ಭುತವಾದ ಗಿಡಮೂಲಿಕೆ ಚರ್ಮ ಸಂಬಂಧಿ ತೊಂದರೆಗಳನ್ನು ನಿವಾರಣೆ ಮಾಡಲು.ಹಾಗಾಗಿ ಇಂದಿನ ಲೇಖನದಲ್ಲಿ ಕುಪ್ಪಿ ಗಿಡವನ್ನು ಬಳಸಿ, ಚರ್ಮ ಸಂಬಂಧಿ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.ಈ ಪರಿಹಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮುಖ್ಯವಾಗಿ ಕುಪ್ಪಿಗಿಡ ಇದರ ಜೊತೆಗೆ ಬೇವಿನ ಎಲೆ ಹಾಗೂ ಶುದ್ಧ ಅರಿಶಿಣ ಬೇಕಾಗಿರುತ್ತದೆ.

ಮನೆಮದ್ದು ಮಾಡುವ ವಿಧಾನ ಹೇಗೆಂದರೆ ಕುಪ್ಪಿಗಿಡ ಎಲೆಗಳನ್ನ ತೆಗೆದುಕೊಳ್ಳಬೇಕು ಜೊತೆಗೆ ಬೇವಿನ ಎಲೆಗಳನ್ನು ತೆಗೆದುಕೊಳ್ಳಬೇಕು ಇದನ್ನು ಮಿಕ್ಸಿ ಮಾಡದೆ ಕುಟ್ಟಿ ಪುಡಿಮಾಡಿಕೊಳ್ಳಬೇಕು ಸ್ವಲ್ಪ ಸ್ವಲ್ಪ ನೀರನ್ನು ಮಿಶ್ರ ಮಾಡಿ ಈ ಕುಪ್ಪಿಗಿಡ ಹಾಗೂ ಬೇವಿನ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ ಈಗ ಈ ಪೇಸ್ಟ್ ಗೆ ಶುದ್ಧ ಅರಿಶಿಣವನ್ನು ಮಿಶ್ರಣ ಮಾಡಿ ಚರ್ಮ ಸಂಬಂಧಿ ತೊಂದರೆ ಎಲ್ಲಿ ಇದೆಯೋ ಅಲ್ಲಿ ಫೇಸ್ ಪ್ಯಾಕ್ ರೀತಿ ಹಾಕಿಕೊಳ್ಳಿ. ಇದರಿಂದ ಫಂಗಸ್ ತೊಂದರೆ ಇರಲಿ ಅಥವಾ ಇನ್ಯಾವುದೇ ಕಜ್ಜಿ ತುರಿಕೆಯಂತಹ ಸಮಸ್ಯೆ ಇರಲಿ ಈ ಮನೆಮದ್ದನ್ನು ಮಾಡುವುದರಿಂದ ಸುಲಭವಾಗಿ ಬಹಳ ಎಫೆಕ್ಟಿವ್ ಆಗಿ ಚರ್ಮ ಸಂಬಂಧಿ ತೊಂದರೆಗಳ ಪರಿಹಾರ ಮಾಡಿಕೊಳ್ಳಬಹುದು.

ಈ ಮನೆ ಮದ್ದನ್ನು ಪ್ರತಿ ದಿನ ಅಥವಾ ದಿನ ಬಿಟ್ಟು ದಿನ ಪಾಲಿಸಿಕೊಂಡು ಬನ್ನಿ ಬಹಳ ಎಫೆಕ್ಟಿವ್ ಆಗಿ ರಿಸಲ್ಟ್ ದೊರೆಯುತ್ತೆ.ಹಾಗಾಗಿ ಈ ಮನೆ ಮದ್ದನ್ನು ಯಾರು ಚರ್ಮ ಸಂಬಂಧಿ ತೊಂದರೆಗಳಿಂದ ಬಳಲುತ್ತಾರೆ ಅಂಥವರು ಮಾಡಿ ಈ ಸರಳ ಹಾಗೂ ಸುಲಭವಾದ ಎಫೆಕ್ಟಿವ್ ಆದಂತಹ ಮನೆಮದ್ದನ್ನು ಜೊತೆಗೆ ಚರ್ಮ ಸಂಬಂಧಿ ತೊಂದರೆಗಳು ಇದ್ದಾಗ ಅದೆಷ್ಟು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಿ ಮತ್ತು ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳು ಹಾಗೂ ಕಲ್ಲುಪ್ಪನ್ನು ಮಿಶ್ರಣ ಮಾಡಿ ಸ್ನಾನ ಮಾಡಿ.

ಚರ್ಮ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರು ದಿನ ಬಿಟ್ಟು ದಿನ ಟವಲ್ ಅನ್ನು ಬಿಸಿ ನೀರಿಗೆ ಹಾಕಿ ಮತ್ತು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಹಾಗೂ ನೀವು ಧರಿಸುವ ಬಟ್ಟೆಯನ್ನು ಸಹ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ತುಂಬಾ ಒಳ್ಳೆಯದು.

WhatsApp Channel Join Now
Telegram Channel Join Now