ಥೈರಾಯ್ಡ್ ಸಮಸ್ಸೆ ಇದ್ರೆ , ಪಿಸಿಒಡಿ,ಪಿಸಿಒಸ್ ಸಮಸ್ಸೆ ಇದ್ರೆ ಈ ರೀತಿಯ ಒಂದು ನೈಸರ್ಗಿಕ ಮನೆಮದ್ದು ಮಾಡಿ ಸಾಕು ತುಂಬಾ ಫಾಸ್ಟ ಆಗಿ ನಿವಾರಣೆ ಆಗುತ್ತದೆ…

248

ಥೈರಾಯ್ಡ್ ಸಮಸ್ಯೆ ಇರುವವರು ಪಿಸಿಓಡಿ ಪಿಸಿಒಎಸ್ ಸಮಸ್ಯೆ ಇರೋರು ಈ ಮನೆಮದ್ದನ್ನು ಈ ವಿಧಾನದಲ್ಲಿ ಪಾಲಿಸುತ್ತಾ ಬರಬೇಕು, ಹೌದು ಥೈರಾಯ್ಡ್ ಸಮಸ್ಯೆಗೆ ಪಿಸಿಓಡಿ ಸಮಸ್ಯೆಗೆ ಬೀಟ್ರೂಟ್ ಮಿಲ್ಕ್ ಶೇಕ್ ಅತ್ಯುತ್ತಮ ಆದರೆ ಮಾಡುವ ವಿಧಾನ ಹೇಗೆ ಗೊತ್ತಾ?ಥೈರಾಯ್ಡ್ ಸಮಸ್ಯೆ ಎಂಬುದು ದಿನದಿಂದ ದಿನಕ್ಕೆ ಯುವಜನರಲ್ಲಿ ಹೆಚ್ಚುತ್ತಿದೆ ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಈ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತ ಇರುವುದನ್ನು ನೋಡಿದಾಗ ನಮ್ಮ ಜೀವನಶೈಲಿ ದಿನದಿಂದ ದಿನಕ್ಕೆ ಎಷ್ಟು ಬದಲಾಗುತ್ತಿದೆ ಜೊತೆಗೆ ಆಹಾರ ಪದ್ದತಿ ಎಷ್ಟು ಬದಲಾಗುತ್ತಾ ಇದೆ ಎಂಬುದು ನಮಗೆ ಗೊತ್ತಾಗುತ್ತದೆ.

ಹಾಗಾಗಿ ಇವತ್ತಿನ ಈ ಲೇಖನಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಥೈರಾಯ್ಡ್ ಸಮಸ್ಯೆಯಾಗಲಿ ಪಿಸಿಓಡಿ ಪಿಸಿಒಎಸ್ ಇಂತಹ ಸಮಸ್ಯೆಗಳು ಬಾರದಿರುವ ಹಾಗೆ ಕಾಪಾಡಿಕೊಳ್ಳಲು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಏನು ಮಾಡಬೇಕು ಎಂಬ ಸರಳ ಮನೆಮದ್ದು ಹೇಳಿಕೊಡ್ತೇವೆ. ಇದರ ಜೊತೆಗೆ ಕೆಲವೊಂದು ಮಾಹಿತಿಗಳು ಕೂಡ ಈ ಪುಟದ ಮೂಲಕ ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ ಇಂತಹ ಜೀವನಶೈಲಿಯನ್ನು ಜೊತೆಗೆ ಇಂತಹ ಆಹಾರ ಪದ್ದತಿಯನ್ನು ನೀವು ಪಾಲಿಸಿದ್ದಲ್ಲಿ ನಿಮಗೆ ಜೀವನದಲ್ಲಿ ಥೈರಾಯ್ಡ್ ಸಮಸ್ಯೆ ಬರುವುದಿಲ್ಲ.

ಪಿಸಿಒಡಿ ಪಿಸಿಒಎಸ್ ಸಮಸ್ಯೆ ಕೂಡ ಹೆಣ್ಣು ಮಕ್ಕಳಲ್ಲಿ ಕಂಡು ಬರುವುದು ಅಂದರೆ ಇರ್ರೆಗ್ಯುಲರ್ ಪೀರಿಯಡ್ಸ್ ಮತ್ತು ಹಾರ್ಮೋನ್ ಇಂಬ್ಯಾಲೆನ್ಸ್ ಜೊತೆಗೆ ವಿಪರೀತ ಕೂದಲು ಉದುರುವುದು ಇವೆಲ್ಲವೂ ಈ ತೊಂದರೆಯ ಲಕ್ಷಣಗಳಾಗಿರುತ್ತವೆ.ಥೈರಾಯ್ಡ್ ಸಮಸ್ಯೆಯಾಗಲಿ ಪಿಸಿಓಡಿ ಪಿಸಿಒಎಸ್ ಸಮಸ್ಯೆಯಾಗಲಿ ಮುಖ್ಯವಾಗಿ ಉಂಟಾಗುವುದೆ ಹಾರ್ಮೋನ್ ಇಂಬ್ಯಾಲೆನ್ಸ್ ಕಾರಣದಿಂದಾಗಿ.

ಹಾಗಾಗಿ ಮೊದಲು ಈ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನು ಹೇಗೆ ಸರಿಪಡಿಸಿಕೊಳ್ಳುವುದು ಅಂತ ನೋಡುವುದಾದರೆ, ಒಂದೇ ಪರಿಹಾರವಿರುವುದು ಆರೋಗ್ಯ ಪದ್ದತಿಯನ್ನು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಮತ್ತು ಆಹಾರದಲ್ಲಿ ಪೋಷಕಾಂಶಭರಿತ ಆಹಾರ ಪದಾರ್ಥಗಳನ್ನು ಸೇವಿಸುವುದು ಆಚೆ ತಿಂಡಿಗಳನ್ನು ಎಣ್ಣೆಪದಾರ್ಥದಿಂದ ಕರಿದ ತಿಂಡಿಗಳನ್ನು ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡುವುದು ಮಾಡಿದರೆ ಈ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನೋದು ಆದಷ್ಟು ಬೇಗ ಸರಿ ಹೋಗುತ್ತದೆ.

ಇದರ ಜೊತೆಗೆ ಈಗಾಗಲೇ ಥೈರಾಯ್ಡ್ ಸಮಸ್ಯೆ ಬಂದಿದೆ ಅನ್ನೋರು ಈ ಬೀಟ್ರೂಟ್ ಮಿಲ್ಕ್ ಶೇಕ್ ಅನ್ನು ಮಾಡಿ ಕುಡಿಯಿರಿ. ಇದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಪರಿಹಾರವಾಗುತ್ತೆ ಮತ್ತು ಥೈರಾಯ್ಡ್ ಗ್ರಂಥಿಯ ಕೆಲಸವು ಸರಿಹೋಗಿ ಇರೆಗ್ಯುಲರ್ ಪಿರಿಯಡ್ಸ್ ಗೂ ಸಹ ಪರಿಹಾರ ದೊರೆಯುತ್ತದೆ.

ಹೌದು ಈ ಬೀಟ್ ರೂಟ್ ಮಿಲ್ಕ್ ಶೇಕ್ ಮಾಡುವುದು ಹೇಗೆ ಅಂದರೆ ಮೊದಲಿಗೆ ಬೀಟ್ ರೂಟನ್ನು ತುರಿದು ಇದರಿಂದ ಸರಸ ಬೇರ್ಪಡಿಸಿ ಇದನ್ನು ಒಂದೆಡೆ ತೆಗೆದಿಟ್ಟುಕೊಳ್ಳಿ ಹಾಗೂ ಹಾಲನ್ನು ಬಿಸಿ ಮಾಡಿ ಇದಕ್ಕೆ ದಾಲ್ಚಿನಿ ಪುಡಿ ಮತ್ತು ಕೊಕೊ ಪೌಡರ್ ಒಣಶುಂಠಿ ಪುಡಿ ಮಿಶ್ರ ಮಾಡಿ, ಈ ಹಾಲನ್ನು ಕಾಯಿಸಿದ ಮೇಲೆ ತಣ್ಣಗಾಗಲು ಬಿಡಬೇಕು.

ಹೀಗೆ ಮಾಡಿದ ಮೇಲೆ ಈ ಹಾಲಿನೊಂದಿಗೆ ಶೇಖರಣೆ ಮಾಡಿಟ್ಟುಕೊಂಡಂತಹ, ಬೀಟ್ ರೂಟ್ ರಸವನ್ನು ಮಿಶ್ರಮಾಡಿ ಬ್ಲೆಂಡರ್ ಮೂಲಕ ಈ ಎಲ್ಲಾ ಮಿಶ್ರಣವನ್ನು ಬ್ಲೆಂಡ್ ಮಾಡಿಕೊಂಡು, ಇದಕ್ಕೆ ಕಲ್ಲುಸಕ್ಕರೆ ಜೇನುತುಪ್ಪ ಬೆಲ್ಲ ಇವುಗಳಲ್ಲಿ, ಯಾವುದಾದರು ಬೇಕಾದರೂ ಸೇರಿಸಿಕೊಳ್ಳಿ. ಇದನ್ನು ಪ್ರತಿದಿನ ಕುಡಿಯುತ್ತ ಬನ್ನಿ ಯಾವಾಗ ಅಂದರೆ ಬೆಳಿಗ್ಗೆ ತಿಂಡಿಗು ಮೊದಲು ಈ ಮಿಲ್ಕ್ ಶೇಕ್ ಅನ್ನು ಕುಡಿಯಬೇಕು, ಇದರಿಂದ ರಕ್ತಹೀನತೆ ದೂರವಾಗುತ್ತೆ ಜೊತೆಗೆ ಬೀಟ್ರೂಟ್ ಇರುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆತು ತೂಕ ಕೂಡ ಕಡಿಮೆಯಾಗುತ್ತದೆ.

ಹೌದು ಕೆಲವರಿಗೆ ಆಚೆ ಆಹಾರ ಪದಾರ್ಥಗಳು ತಿನ್ನುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿರುತ್ತದೆ ಹಾಗೂ ರಕ್ತ ಕೊರತೆಯಿಂದಾಗಿ ಕೂಡ ಇರ್ರೆಗ್ಯುಲರ್ ಪೀರಿಯಡ್ಸ್ ಉಂಟಾಗಿರುತ್ತದೆ ಜೊತೆಗೆ ಹೈ ರೋಡ್ ಸಮಸ್ಯೆ ಮುಂತಾದವರಲ್ಲಿ ತೂಕ ಹೆಚ್ಚಿರುತ್ತದೆ. ಈ ಎಲ್ಲ ಲಕ್ಷಣಗಳಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಈ ಸುಲಭ ಸರಳ ಬೀಟ್ರೂಟ್ ಮಿಲ್ಕ್ ಶೇಕ್ ಮಾಡಿ ಕುಡಿಯಿರಿ ಧನ್ಯವಾದ.

WhatsApp Channel Join Now
Telegram Channel Join Now