ನಮ್ಮ ಬೆಂಗಳೂರಿನಲ್ಲಿ ಇದೆಯಂತೆ ಪವಾಡವನ್ನ ಮಾಡುವಂತಹ ಶಕ್ತಿ ಶಾಲಿ ಹನುಮಂತನ ದೇವಾಲಯ … ಇಲ್ಲಿ ನಿಮಗೆ ಇರುವ ಎಂತೆ ಕಠಿಣ ಸಮಸ್ಸೆ ಇದ್ದರು ಸಹ ಇಲ್ಲಿಗೆ ಹೋಗಿ ಬೇಡಿಕೊಂಡರೆ ಸಮಸ್ಸೆಗಳು ನಿವಾರಣೆ ಆಗುತ್ತವೆ ಅಂತೇ… ಅಷ್ಟಕ್ಕೂ ಬೆಂಗಳೂರಿನಲ್ಲಿ ಎಲ್ಲಿದೆ ಈ ದೇವಸ್ಥಾನ ಗೊತ್ತ …

379

ರಾಜಧಾನಿಯಲ್ಲಿದೆ ವಿಶೇಷವಾದ ಆಂಜನೇಯ ಸ್ವಾಮಿಯ ದೇವಾಲಯ. ಬೆಂಗಳೂರಿನ ಈ ಆಂಜನೇಯನ ದೇವಾಲಯವು ಅಪಾರ ಮಹಿಮೆ ಹೊಂದಿದೆ. ಈ ದೇವಾಲಯದ ಕುರಿತು ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದಿಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ ಈ ದೇವಾಲಯವು ನಮ್ಮ ರಾಜಧಾನಿಯಲ್ಲಿ ಇದು ಜಯನಗರ ಒಂಭತ್ತನೆಯ ಬ್ಲಾಕ್ನಲ್ಲಿ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಾಲಯ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಈ ದೇವಾಲಯವನ್ನು ನೀವು ಇನ್ನೂ ನೋಡಿಲ್ಲ.

ಅಂದ ಕೂಡಲೇ ಈ ದೇವಾಲಯಕ್ಕೆ ಭೇಟಿ ನೀಡಿ ಹಾಗೆಯೇ ನಿಮಗೆ ಸಂಶಯ ಬರಬಹುದು ಈ ಸ್ಥಳಕ್ಕೆ ಯಾಕೆ ರಾಗಿಗುಡ್ಡ ಎಂಬ ಹೆಸರು ಬಂತು ಅಂತ. ಹೌದು ಫ್ರೆಂಡ್ಸ್ ಇದಕ್ಕೂ ಕೂಡ ವಿಶೇಷವಾದ ಕಥೆಯಿದೆ ಅದೇನೆಂದರೆ ಸುಮಾರು ಐದೂವರೆ ಎಕರೆ ಭೂ ಪ್ರದೇಶದಲ್ಲಿರುವ 58 ಅಡಿಗಳ ಎತ್ತರ ಇರುವ ಹೆಬ್ಬಂಡೆ ರಾಗಿ ಗುಡ್ಡ ಆಗಿದೆ. ಇದಕ್ಕೆ ಈ ಹೆಸರು ಬರಲು ಕಾರಣ ಏನು ಅಂದರೆ ಹಿಂದೆ ಈ ಪ್ರದೇಶ ಪಾಳೇಗಾರರ ಆಡಳಿತದಲ್ಲಿತು. ಆಗಿನ ಕಾಲದಲ್ಲಿ ರಾಘವ ರಾಗಿ ಎತ್ತೆಚ್ಚವಾಗಿ ಬೆಳೆದು ಬೆಟ್ಟದಷ್ಟು ಎತ್ತರಕ್ಕೆ ಸಂಗ್ರಹ ಆಗಿತ್ತು.

ಸಂಪ್ರದಾಯದಂತೆ ಪಾಳೇಗಾರರ ಸೊಸೆ ಸಮೃದ್ಧವಾಗಿ ಬೆಳೆದ ರಾಗಿಯನ್ನು ಊರ ಜನರಿಗೆ ದಾನವಾಗಿ ನೀಡುತ್ತಾ ಇದ್ದರು ಅದೇ ಸಮಯದಲ್ಲಿ ಮೂವರು ದಾಸರು ಪ್ರತ್ಯಕ್ಷರಾಗಿ ತಮಗೂ ಸಹ ರಾಗಿಯನ್ನು ಭಿಕ್ಷೆ ನೀಡು ವುದಾಗಿ ಕೇಳಿಕೊಳ್ಳುತ್ತಾರೆ ಆಗ ಸೊಸೆಯು 3ಮೊರದ ತುಂಬ ಅನ್ನು ತಂದು ದಾನ ಮಾಡಲು ಮುಂದಾದಳು ಆದರೆ ಅದನ್ನು ನಿರಾಕರಿಸಿದ ಆಕೆಯ ಅತ್ತೆ ದಾಸರಿಗೆ ರಾಗಿ ದಾನ ಮಾಡಲು ಅಡ್ಡಿ ಮಾಡಿದಳು. ಇದರಿಂದ ಬೇಸತ್ತ ಸೊಸೆ ದಾನಕ್ಕೆ ದೊರಕದ ರಾಗಿ ಇದ್ದರೆಷ್ಟು ಹೋದರೆ ಎಷ್ಟು ಎಂದು ಗುಡ್ಡದಷ್ಟು ಇರುವ ಈ ರಾಗಿ ಕಲ್ಲಾಗಿ ಹೋಗಲಿ ಎಂದು ಶಾಪ ಇಟ್ಟಳು, ಕೂಡಲೇ ಅದು ರಾಗಿ ಗುಡ್ಡ ಆಯಿತು ದಾನ ಬೇಡಲು ಬಂದ ತ್ರಿಮೂರ್ತಿಗಳು ಕೂಡ ಹೊಂಬಣ್ಣ ರೂಪದಲ್ಲಿ ಶಿಲೆ ಆದರಂತೆ

ಇಂದು ಈ ದೇವಾಲಯದ ಪ್ರದೇಶದಲ್ಲಿ ಹೊರಭಾಗದಲ್ಲಿ ಬಿಡಿಯಾದ ಬಂಡೆ ಅನ್ನು ನೀವು ಕಾಣಬಹುದು. ಅಲ್ಲಿ 3 ಮಾನವ ಆಕೃತಿಯ ಶಿಲೆಗಳು ಕಾಣುತ್ತವೆ. ಈಗ ಈ ಶಿಲೆಗಳನ್ನು ತ್ರಿಮೂರ್ತಿಗಳ ಮೂರ್ತಿಯಾಗಿ ಪರಿವರ್ತಿಸಲಾಗಿದೆ. ಇನ್ನೂ ಇಲ್ಲಿ 1968 ರಲ್ಲಿ ಈ ಗುಡ್ಡದ ಮೇಲೆ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಸಹ ಪ್ರತಿಷ್ಠಾಪನೆ ಮಾಡಿದರು.

WhatsApp Channel Join Now
Telegram Channel Join Now