ನಿಮ್ಮ ದೇಹದ ಕಣ ಕಣಗಳಲ್ಲಿ ರಕ್ತ ಹೆಚ್ಚಾಗಲು,ಮೂಳೆಗಳು ಗಟ್ಟಿಯಾಗಲು,ವಿಟಮಿನ್ಸ್ಗಳು ಸಿಗಲು ಈ ಒಂದು ಲಡ್ಡು ತಿನ್ನಿ ಸಾಕು…

274

ಬಲಹೀನತೆ ಅಥವಾ ಸುಸ್ತು ಇಂತಹ ತೊಂದರೆಯಿಂದ ನೀವು ಬಳಲುತ್ತಿದ್ದರೆ ಮನೆಯಲ್ಲಿಯೇ ಮಾಡಿ ಸರಳವಾದ ಆರೋಗ್ಯಕರವಾದ ಒಂದು ಉಂಡೆ…ನಮಸ್ತೆ ಪ್ರಿಯ ಸ್ನೇಹಿತರೇ ಕೆಲವೊಮ್ಮೆ ನಾವು ಎಷ್ಟೇ ತಿಂದರೂ ನಮ್ಮ ಆರೋಗ್ಯ ಆಗಾಗ ಹದಗೆಡುತ್ತಲೇ ಇರುತ್ತದೆ ಅದಕ್ಕೆ ಕಾರಣ ಹೇಳುವುದಾದರೆ ನಾವು ಆರೋಗ್ಯಕರವಾದ ಆಹಾರವನ್ನು ತಿನ್ನದೇ ಇರುವುದು ಮತ್ತು ನಮ್ಮ ದೇಹಕ್ಕೆ ಬೇಕಾಗಿರುವಂತಹ ಕೆಲವೊಂದು ಪೋಷಕಾಂಶಗಳ ನೀಡದೇ ಇರುವುದು ಇದು ಯಾವುದಕ್ಕೆ ಕಾರಣವಾಗುತ್ತದೆ.

ಅಂದರೆ ಬಲಹೀನತೆಯೂ ಹೌದು ನಾವು ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ನೀಡದೇ ಹೋದಾಗ ನಮ್ಮ ಆರೋಗ್ಯ ಕೆಡುತ್ತದೆ. ಆಗ ಬಹಳ ಬೇಗ ಸುಸ್ತಾಗುತ್ತಾ ಇರುತ್ತದೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹೋದರೂ ಸುಸ್ತು ಆಗುತ್ತಲೇ ಇರುತ್ತದೆ ಇದರಿಂದ ನಮಗೆ ಟ್ರೀಟ್ ಮೆಂಟ್ ತೆಗೆದುಕೊಳ್ಳಬೇಕೋ ಯಾಕಿಷ್ಟು ಸುಸ್ತಾಗುತ್ತದೆ ಎಂದು ಚಿಕಿತ್ಸೆ ಪಡೆದುಕೊಂಡು ಮಾತ್ರೆಗಳನ್ನ ತೆಗೆದುಕೊಳ್ಳುವ ಮೂಲಕ ಸರಿ ಹೋಗ್ತೇವೆ ಅನ್ನುವ ನಂಬಿಕೆಯಲ್ಲಿಯೆ ಇರುತ್ತೇವೆ.

ಹೌದು ಅನಾರೋಗ್ಯ ಸಮಸ್ಯೆ ಉಂಟಾದಾಗ ಸುಸ್ತಾಗೋದು ಬೇರೆ ಆದರೆ ನಾವು ಚೆನ್ನಾಗಿರುವಾಗಲೇ ಸುಸ್ತಾಗುತ್ತಿದೆ ತಲೆಸುತ್ತು ಬರುತ್ತಿದೆ ಅಂದರೆ ಅದಕ್ಕಾಗಿ ನೀವು ಮಾಡಬೇಕಿರುವುದು ಏನು ಅಂದರೆ ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿ ಕೊಳ್ಳುವುದು. ಹೌದು ಸ್ನೇಹಿತರೆ ಈ ಅನಾರೋಗ್ಯ ಸಮಸ್ಯೆ ಉಂಟಾಗಬಾರದು ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು ಮತ್ತು ಶಕ್ತಿ ವಂತರಾಗಿರಬೇಕು ನಮಗೆ ಆಗಾಗ ತಲೆಸುತ್ತು ಬರುವುದು ಕೈಕಾಲು ನಡುಗುವುದು ಮತ್ತೆ ಬಿಪಿ ಶುಗರ್ ನಂತಹ ಸಮಸ್ಯೆ ಬರಬಾರದು ಅಂಧರೂ ಸಹ ಈ ಪರಿಹಾರವನ್ನು ಮಾಡಿ ಆರೋಗ್ಯಕರವಾದ ರುಚಿಯಾದ ಉಂಡೆಯನ್ನು ಮನೆಯಲ್ಲಿಯೇ ತಯಾರಿಸಿ ಇದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ ನೀವು ಬಲಶಾಲಿಗಳಾಗುತ್ತೀರ.

ಹೌದು ಸ್ನೇಹಿತರೇ ನಾವು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ ಈ ರುಚಿಕರವಾದ ಉಂಡೆಯನ್ನು ನೀವು ಬೆಳಿಗ್ಗೆ ಸಮಯದಲ್ಲಿ ಅಥವಾ ಮಧ್ಯಾಹ್ನ ಸಂಜೆ ಸ್ನ್ಯಾಕ್ಸ್ ಟೈಮ್ ನಲ್ಲಿ ಕೂಡ ತಿನ್ನಬಹುದು. ನೀವು ಡಯಟ್ ಮಾಡುತ್ತಿದ್ದರು ಕೂಡ ಈ ಉಂಡೆಯನ್ನು ನಿಯಮಿತವಾಗಿ ತಿನ್ನಬಹುದು ಇದರಿಂದ ಯಾವುದೇ ತರದ ಕೊಲೆಸ್ಟ್ರಾಲ್ ನಿಮ್ಮ ದೇಹದಲ್ಲಿ ಶೇಖರಣೆಯಾಗುವುದಿಲ್ಲ ಬದಲಾಗಿ ನೀವು ಎನೋ ಬಲಶಾಲಿ ಗಳಾಗುತ್ತೀರಿ ಮತ್ತು ರೋಗನಿರೋಧಕ ಶಕ್ತಿ ಕೂಡ ವೃದ್ಧಿಸುತ್ತದೆ ಇದಕ್ಕೆ ಬೇಕಾಗಿರುವ ಪದಾರ್ಥಗಳು ಹೇಗಿದೆ ಶೇಂಗಾ ಬೀಜ ಬಾದಾಮಿ ಕೊಬ್ಬರಿ ತುರಿ ಕುಂಬಳಕಾಯಿ ಬೀಜ ಅಗಸೆ ಬೀಜ ಗೋಡಂಬಿ ಮತ್ತು ದ್ರಾಕ್ಷಿ ಹಾಗೆ ಸ್ವಲ್ಪ ತುಪ್ಪ.

ಮೊದಲು ಈ ಎಲ್ಲಾ ಪದಾರ್ಥಗಳನ್ನು ಬೇರೆಬೇರೆಯಾಗಿ ಹುರಿದುಕೊಳ್ಳಬೇಕು ಅರ್ಧ ಕಪ್ ಶೇಂಗಾ ಬೀಜಕ್ಕೆ ಕಾಲು ಕಪ್ ಬಾದಾಮಿ ಕಾಲು ಕಪ್ ಅಗಸೆ ಬೀಜ ಕಾಲು ಕಪ್ ಗೋಡಂಬಿ ಮತ್ತು ಅರ್ಧ ಚಮಚದಷ್ಟು ಒಣ ದ್ರಾಕ್ಷಿ ಕಾಲು ಕಪ್ ಕುಂಬಳಕಾಯಿ ಬೀಜ ತೆಗೆದುಕೊಂಡು ಇದನ್ನು ಉರಿದ ಮೇಲೆ ದಪ್ಪನಾಗಿ ಪುಡಿ ಮಾಡಿಕೊಳ್ಳಬೇಕು. ಪುಡಿ ಮಾಡಿಕೊಂಡ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ಇದನ್ನು ಲಾಡು ಉಂಡೆ ಕಟ್ಟಿದ ಹಾಗೆ ಲಾಡು ಉಂಡೆಗಳು ರೀತಿ ಕಟ್ಟಿಕೊಳ್ಳಬೇಕು ಇದನ್ನು ಏರ್ ಟೈಟ್ ಕಂಟೈನರ್ ನಲ್ಲಿ ಇಟ್ಟು ವಾರದ ವರೆಗೂ ಶೇಖರಣೆ ಮಾಡಿ ಇಡಬಹುದು ಇದನ್ನು ಮಕ್ಕಳು ಸಹ ತಿನ್ನಬಹುದು ಇದರಿಂದ ಮೂಳೆಗಳು ಬಲಗೊಳ್ಳುತ್ತವೆ ಹಾಗೆ ಬಿಪಿ ಶುಗರ್ ನಂತಹ ಸಮಸ್ಯೆ ಬಾರದಿರುವ ಹಾಗೆ ಆರೋಗ್ಯವನ್ನೂ ಕಾಪಾಡುತ್ತದೆ ನಿಶ್ಯಕ್ತಿಯನ್ನು ನಿವಾರಿಸುತ್ತದೆ.

ರಕ್ತಹೀನತೆ ಸಮಸ್ಯೆ ಇರುವವರು ಈ ಉಂಡೆಗಳನ್ನು ತಿನ್ನುವುದರಿಂದ ಆರೋಗ್ಯ ಬಹಳ ವೃದ್ದಿಯಾಗುತ್ತದೆ ಹಾಗೆ ವಿದ್ಯಾರ್ಥಿಗಳು ಈ ಉಂಡೆಯನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ. ಆರೋಗ್ಯಕರವಾದ ಈ ಉಂಡೆಯನ್ನು ಮಾಡಿ ಹಿರಿಯರಿಂದ ಕಿರಿಯರವರೆಗೂ ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ…

WhatsApp Channel Join Now
Telegram Channel Join Now