ಒಬ್ಬಸಾಮಾನ್ಯ ಅಡುಗೆ ಭಟ್ಟರ ಮಗ ಉಪೇಂದ್ರ ಸೂಪರ್ ಸ್ಟಾರ್ ಆದ ರೋಚಕ ಕಥೆ ಕೇಳಿದ್ರೆ ನಿಮ್ಮ ಗುಂಡಿಗೆ ನಡುಗುತ್ತೆ…

308
If you hear the exciting story of Upendra the son of a common cook Bhatt who became a superstar you will be shaken to the core,
If you hear the exciting story of Upendra the son of a common cook Bhatt who became a superstar you will be shaken to the core,

ಸಾವಿರದ ಒಂಬೈನೂರ ಅರವತ್ತೆಂಟು ಸೆಪ್ಟೆಂಬರ್ ಹದಿನೆಂಟರಂದು ಮಂಜುನಾಥರಾವ್ ಅನಸೂಯಮ್ಮ ದಂಪತಿಗಳ ಮಗನಾಗಿ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ತಿಕ್ಕೇಟ್ ಎನ್ನುವ ಗ್ರಾಮದಲ್ಲಿ ಜನಿಸಿದರು ಉಪೇಂದ್ರ ರಾವ್ ಅಲಿಯಾಸ್ ಉಪೇಂದ್ರ ಉಪೇಂದ್ರ ಅವರಿಗೆ ಸುಧೀಂದ್ರ ಎಂಬ ಅಣ್ಣ ಇದ್ದಾರೆ ಉಪೇಂದ್ರರವರ ಕುಟುಂಬದಲ್ಲಿ ತುಂಬಾ ಬಡತನವಿತ್ತು ಕುಟುಂಬ ನಡೆಸಲು ಉಪೇಂದ್ರರವರ ತಂದೆ ಪ್ರತಿದಿನ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಾ ಸಂಸಾರ ನಡೆಸುತ್ತಿದ್ದರು ಉಪೇಂದ್ರರವರ ತಂದೆ ತಾಯಿ ಕೆಲವೊಮ್ಮೆ ಕೈಯಲ್ಲಿ ಹಣವಿಲ್ಲದೆ ಮನೆಗೆ ದಿನಸಿ ತರದೇ ಹಸಿವೆಯಿಂದ ಮಲಗಿದ ಎಷ್ಟೋ ದಿನಗಳಿವೆ ಇನ್ನು ಉಪೇಂದ್ರರವರು ತಾಯಿಯಂತೂ ಮೂವರು ತಿಂದು ಊಟ ಮಿಕ್ಕರೆ ಉಳಿದದ್ದನ್ನು ತಿನ್ನುತ್ತಿದ್ದರಂತೆ ಇಲ್ಲದಿದ್ದರೆ ನೀರು ಕುಡಿದು ಮಲಗುತ್ತಿದ್ದರಂತೆ ದಿನ ಕಳೆದಂತೆ ಉಪೇಂದ್ರ ಅವರ ತಂದೆ ಅಡುಗೆ ಭಟ್ಟರೊಬ್ಬರ ಬಳಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರಂತೆ ನಂತರ ಅವರೇ ಅಡುಗೆ ಮಾಡುವುದನ್ನು ಕಲಿತುಕೊಂಡು ಸ್ವಂತ ಕ್ಯಾಟರಿಂಗ್ ಪ್ರಾರಂಭಿಸಿದರು ಇದಾದ ನಂತರ ಉಪೇಂದ್ರರವರ ಕುಟುಂಬಕ್ಕೆ ಊಟಕ್ಕೆ ಎಂದು ಕಷ್ಟ ಪಡಲಿಲ್ಲವಂತೆ ಅದೇ ಸಮಯದಲ್ಲಿ ಉಪೇಂದ್ರರವರ ಕಣ್ಣಿಗೆ ಇನ್ಫೆಕ್ಷನ್ ಆಗಿ ವಿಪರೀತ ನೋವು ಪಟ್ಟರು.

ಆ ಸಮಯದಲ್ಲಿ ಡಾಕ್ಟರ್ ಬಳಿ ಹೋಗಿ ತೋರಿಸುವಷ್ಟು ಹಣವಿಲ್ಲದೆ ಅದನ್ನು ಸ್ವಲ್ಪ ನಿರ್ಲಕ್ಷ್ಯ ಮಾಡಿದರು ಇದೇ ಕಾರಣಕ್ಕೆ ಉಪೇಂದ್ರ ತನ್ನ ಕಣ್ಣುಗಳನ್ನು ಹೆಚ್ಚಾಗಿ ತಿರುಗಿಸುವುದಿಲ್ಲ ಇನ್ನು ಚಿಕ್ಕ ವಯಸ್ಸಿನಿಂದಲೇ ಉಪೇಂದ್ರ ಅವರಿಗೆ ನಾಟಕ ಹಾಗೂ ಸಿನಿಮಾ ಎಂದರೆ ಸಾಯುವಷ್ಟು ಇಷ್ಟವಿತ್ತು ಎಲ್ಲೇ ನಾಟಕಗಳು ನಡೆದರೂ ಉಪೇಂದ್ರ ಅಲ್ಲಿಗೆ ತೆರಳುತ್ತಿದ್ದರು ಕುಂದಾಪುರದ ಶಾಲೆಯಲ್ಲಿ ಓದುತ್ತಿದ್ದಾಗ ಕೆಲವು ನಾಟಕಗಳನ್ನು ಬರೆಯುತ್ತಿದ್ದರು ಕೆಲವು ಕಥೆಗಳನ್ನು ಬರೆಯುತ್ತಿದ್ದರು ತಾನು ಬರೆದಿದ್ದ ನಾಟಕಗಳನ್ನು ಹಾಗೂ ಕಥೆಗಳನ್ನು ತನ್ನ ಸ್ನೇಹಿತರಿಗೆ ಹೇಳುತ್ತಿದ್ದರು ತಾನು ಬರೆದ ನಾಟಕಗಳು ಆಗಾಗ ಪ್ರದರ್ಶಿಸುತ್ತಿದ್ದರು ಸ್ಕೂಲನಲ್ಲಿ ನಾಟಕಗಳಲ್ಲಿ ಅಭಿನಯಿಸಿ dialogue ಹೊಡೆದರೆ ಎಲ್ಲರೂ ಉಪೇಂದ್ರರವರನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು ಆಗಿನಿಂದಲೇ ಉಪೇಂದ್ರರವರಿಗೆ ಹೇಗಾದರೂ ಮಾಡಿ ತನ್ನೊಬ್ಬ ಹೀರೋ ಆಗಬೇಕೆನ್ನುವ ಆಸೆ ಚಿಗುರಿತ್ತು ಸ್ಕೂಲ್ ಮುಗಿಸಿ ಬಂದ ಮೇಲೆ ಉಪೇಂದ್ರ ಸುಮ್ಮನೆ ಟೈಮ್ ವೇಸ್ಟ್ ಮಾಡುತ್ತಿರಲಿಲ್ಲ ತನ್ನ ಅಣ್ಣನ ಜೊತೆ ಸೇರಿ ಪೇಪರ್ ಕವರ್ ತಯಾರಿಸಿ ಫುಡ್ಸ್ ಅಂಗಡಿಗಳಿಗೆ ಮಾರಿ ಬಂದ ಹಣವನ್ನು ತನ್ನ ತಂದೆ ತಾಯಿಗೆ ನೀಡುತ್ತಿದ್ದರು.

ಆ ವಿಧದಲ್ಲಿ ಉಪೇಂದ್ರ ಹಾಗೂ ಅವರ ಅಣ್ಣ ತನ್ನ ತಂದೆಗೆ ಅಲ್ಪ ಸ್ವಲ್ಪ ಸಹಾಯ ಮಾಡುತ್ತಿದ್ದರು ಇನ್ನು ಶಾಲೆ ವಿದ್ಯಾಭ್ಯಾಸದ ನಂತರ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಎಪಿಎಸ್ ಕಾಲೇಜ್ ಆ ಕಾಮರ್ಸ್ ಕಾಲೇಜಿಗೆ ಸೇರಿದರು ಕಾಲೇಜಿಗೆ ಸೇರಿದ್ದ ಮೇಲೆ ಓದಿನ ಜೊತೆಯಲ್ಲಿಯೇ ಆಧುನಿಕ ನಾಟಕಗಳನ್ನು ನಡೆಸುತ್ತಿದ್ದ ಥಿಯೇಟರ್ ರೆಪ್ರೆಟ್ ರಿಗೆ ಹೋಗಿ ಅವರ ಜೊತೆ ಬೆರೆಯುತ್ತಿದ್ದರು ಅವರಿಗೆ ಏನೋ ಒಂದು ಸಹಾಯ ಮಾಡುತ್ತಾ ಅವರ ಗ್ರೂಪ್ ಗೆ ಸೇರಿದರು ಅಲ್ಲಿ ಅವರು ನಾಟಕಗಳನ್ನು ಹೇಗೆ ಡೈರೆಕ್ಟ್ ಮಾಡುತ್ತಾರೆ ಎಂದು ತಿಳಿದು ತಾನು ಓದುತ್ತಿದ್ದ ಎಪಿಎಸ್ ಕಾಲೇಜಿನಲ್ಲಿ ತನ್ನಂತೆಯೇ ನಾಟಕಗಳಲ್ಲಿ ಆಸಕ್ತಿಯುಳ್ಳ ಸ್ಟೂಡೆಂಟ್ಸ್ ಜೊತೆ ಸೇರಿ ಒಂದು ನಾಟಕ ತಂಡವನ್ನು ಕಟ್ಟಿ ನಾಟಕ ಪ್ರದರ್ಶನ ಮಾಡುತ್ತಿದ್ದ ನಾಟಕಗಳಿಗೆ ಕಥೆ ಹಾಗು direction ಹಾಡುಗಳು ಸಂಭಾಷಣೆ ಸಂಗೀತ ಎಲ್ಲ ಉಪೇಂದ್ರರವರದ್ದೇ ಆಗಿರುತ್ತಿತ್ತು ಆ ವೇಳೆಯಲ್ಲಿ ಉಪೇಂದ್ರ ಕತೆಗಳನ್ನು ತುಂಬಾ different ಆಗಿ ಬರೆಯುತ್ತಿದ್ದರು ಹೀಗೆ ನಾಟಕಗಳ ಜೊತೆ ಜೊತೆಯಲ್ಲಿಯೇ ಉಪೇಂದ್ರ ಸಿನಿಮಾ ಪ್ರಯತ್ನಗಳನ್ನು ಸಹ ಮಾಡುತಿದ್ದರು ಹೀಗೆ ಸಿನಿಮಾಗಳ ಅವಕಾಶಕ್ಕಾಗಿ ಹುಡುಕುತ್ತಿರುವಾಗಲೇ ಮ್ಯೂಸಿಕ್ ಡೈರೆಕ್ಟರ್ B ಮನೋಹರ್ ಪರಿಚಯವಾಗುತ್ತಾರೆ .

ಅವರ ಬಳಿ ಕೆಲವು ತಿಂಗಳು ಆಳಿದ ಮೇಲೆ ಅವರು ಉಪೇಂದ್ರ ಅವರ ಕಷ್ಟ ನೋಡದೆ ಅವರಿಗೆ ತುಂಬಾ ಪರಿಚಯವಿದ್ದ ನಟ ಹಾಗೂ ನಿರ್ದೇಶಕ ಕಾಶಿನಾಥ್ ರವರಿಗೆ ಪರಿಚಯ ಮಾಡಿಸುತ್ತಾರೆ ಕಾಶಿನಾಥರವರು ಕನ್ನಡದಲ್ಲಿ ನಿರ್ದೇಶಕರಾಗಿ ನಟರಾಗಿ ತುಂಬಾ ಹೆಸರು ಮಾಡಿದ್ದರು ಕಾಶಿನಾಥ್ ಅವರ ಬಳಿ ಹೇಗಾದರೂ ಮಾಡಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು ಉಪೇಂದ್ರ ಆದರೆ ಕಾಶಿನಾಥ್ ಅವರ ಬಳಿ ಅಷ್ಟು ಸುಲಭವಾಗಿ ಕೆಲಸ ಸಿಗಲಿಲ್ಲ V ಮನೋಹರ್ ಅವರು ಉಪೇಂದ್ರರವರನ್ನು ಕಾಶಿನಾಥ್ ಗೆ ಪರಿಚಯ ಮಾಡಿಸಿದ್ದರು ಕಾಶಿನಾಥ್ ಅವರು ಉಪೇಂದ್ರ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಸರಿ ಬಿಡು ನೋಡೋಣ ಹೇಳ್ತಿನಿ ಅನ್ನುತ್ತಿದ್ದರು ಆದರೆ ಉಪೇಂದ್ರ ಕೇವಲ ನಟನಾಗಿ ಅವಕಾಶ ಕೇಳಲಿಲ್ಲ ಒಂದು ವೇಳೆ ಹಾಗೆ ಕೇಳಿದರೆ ಅವಕಾಶ ಸಿಗೋದಿಲ್ವೇನೋ ಎಂದು ಸಹಾಯಕ ನಿರ್ದೇಶಕರಾಗಿ ಸಹಾಯಕ ಬರಹಗಾರರಾಗಿ ಏನೇ ಅವಕಾಶ ನೀಡಿದರು ಮಾಡ್ತೀನಿ ಎಂದು ಹೇಳುತ್ತಾರೆ ಇದಕ್ಕೂ ಸಹ ಕಾಶಿನಾಥ್ ಸರಿ ನೋಡೋಣ ಎನ್ನುತ್ತಿದ್ದರಂತೆ.

ಕಾಶಿನಾಥ್ ಅವರ ಬಳಿ ಎರಡು ವರ್ಷ ತಿರುಗಿದ ಮೇಲೆ ಇವರು ಹೀಗೆ ಹೇಳಿದರೆ ಕೇಳಲ್ಲ ಎಂದು ತಾನು ರಚನೆ ಮಾಡಿದ ನಾಟಕವನ್ನು ರೆಕಾರ್ಡ್ ಮಾಡಿ ಆ ಕ್ಯಾಸೆಟ್ ಅನ್ನು ಕಾಶಿನಾಥ್ ಅವರಿಗೆ ನೀಡಿದರು ಸರಿ ನೋಡ್ತೀನಿ ಎಂದು ಹೇಳಿ ಕಾಶಿನಾಥ ಕ್ಯಾಸೆಟ್ ಅನ್ನು ತೆಗೆದುಕೊಂಡು ಎಲ್ಲೋ ಇಟ್ಟುಬಿಟ್ಟರಂತೆ ಆದರೆ ಉಪೇಂದ್ರ ಮತ್ತೆ ಅವರ ಬಳಿ ಹೋಗಿ ಸರ್ ಒಂದು ಸಾರಿ ನನ್ನ ನಾಟಕ ಕೇಳ್ರಿ ನಿಮಗೆ ಆ ನಾಟಕ ಹಿಡಿಸಲಿಲ್ಲ ಅಂದ್ರೆ ನಾನು ನಿಮ್ಮನ್ನ ಮತ್ತೆ ಎಂದು ಭೇಟಿ ಆಗಲ್ಲ ಎಂದು ಉಪೇಂದ್ರ ಹೇಳಿದರು ನಂತರ ಕಾಶಿನಾಥ ಕ್ಯಾಸೆಟ್ ಅನ್ನು ಹುಡುಕಿ ಆ ನಾಟಕವನ್ನು ಕೇಳಿದರಂತೆ ಕಾಶಿನಾಥ್ ಅವರಿಗೆ ಉಪೇಂದ್ರ ಅವರ screenplay ಮತ್ತು dialogues ತುಂಬಾ ಇಷ್ಟ ಆಗಿ ಆಗ ಉಪೇಂದ್ರರವರನ್ನು ಕರೆಸಿ ಕಾಶಿನಾಥ್ ರವರೆ ಹೀರೋ ಆಗಿ ನಿರ್ದೇಶಕರಾಗಿ ತೆಗೆಯುತ್ತಿದ್ದ ಅನಂತನ ಅವಾಂತರ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಆ ಸಮಯದಲ್ಲಿ ಉಪೇಂದ್ರ ಡಿಗ್ರಿ ಕೊನೆಯ ವರ್ಷ ಓದುತ್ತಿದ್ದರು ಹಾಗೆ ಅದೇ ಸಿನೆಮಾಗೆ ಸಾಹಿತ್ಯ ಬರೆಯುತ್ತಿದ್ದ V ಮನೋಹರ್ ಅವರು ಒಂದು ಹಾಡು ಬರೆದು ಅದು ಹಂಸಲೇಖ ಅವರ ಬಳಿ compose ಮಾಡಿಸಿದರು ಆ ಹಾಡು ಉಪೇಂದ್ರ ಅವರಿಗೆ ಇಷ್ಟವಾಗದೆ ಆ ಹಾಡಿಗೆ ಅನುಬಂಧವಾಗಿ common common command ಎಂದು ಒಂದು ಹಾಡು ಬರೆದು ಅದು ಹಂಸಲೇಖ ಅವರಿಗೆ ಕೇಳಿಸುತ್ತಾರೆ.

ಅದನ್ನು ಕೇಳಿದ ಹಂಸಲೇಖ ಅವರು ಹಾಗೂ ಮನೋಹರ್ ಅವರು ನಮ್ಮ ಹಾಡಿಗಿಂತ ನಿನ್ನ ಹಾಡೇ ಚೆನ್ನಾಗಿದೆ ಹುಡುಗ ಎಂದು ಮೆಚ್ಚಿಕೊಂಡು ಆ ಹಾಡನ್ನೇ final ಮಾಡುತ್ತಾರೆ ಆ ಸಿನಿಮಾದಲ್ಲಿದ್ದ ಮಿಕ್ಕ ಮೂರು ಹಾಡುಗಳಿಗೂ ಕೂಡ ಸಾಹಿತ್ಯಕ್ಕೆ ಸಹಾಯ ಮಾಡುವಂತೆ ಉಪೇಂದ್ರ ಅವರಿಗೆ ಹೇಳಿ ಬರೆಸಿಕೊಳ್ಳುತ್ತಾರೆ ಅದು ಮಾತ್ರವಲ್ಲದೆ ಕಮಾನ್ ಕಮಾನ್ ಕಾಮಣ್ಣ ar ಕಾಮದೇವನ ಪಾತ್ರವನ್ನು ಸಹ ಉಪೇಂದ್ರ ಅವರಿಗೆ ನೀಡುತ್ತಾರೆ ಉಪೇಂದ್ರ ಬೆಳ್ಳಿ ತೆರೆ ಮೇಲೆ ಬಂದಿದ್ದು ಸಹ ಅದೇ ಮೊದಲ ಬಾರಿ ಈ ಸಿನಿಮಾ ಸಾವಿರದ ಒಂಬೈನೂರ ಎಂಬತ್ತೊಂಬತ್ತರ ಜನವರಿಯಲ್ಲಿ ಬಿಡುಗಡೆಯಾಯಿತು ಈ ಸಿನಿಮಾದ ನಂತರ ಕಾಶಿನಾಥ್ ಬೇರೆಯವರ ನಿರ್ದೇಶನದಲ್ಲಿ ನಟಿಸುತ್ತಾರೆ ಇದರ ಮಧ್ಯೆ ಉಪೇಂದ್ರ ಡಿಗ್ರಿ ಫೈನಲ್ exam ಬರೆದು BCom ಪೂರ್ತಿ ಮಾಡುತ್ತಾರೆ ನಂತರ ಕಾಶಿನಾಥರವರು ಸಾವಿರದ ಒಂಬೈನೂರ ತೊಂಬತ್ತರಲ್ಲಿ ತಮ್ಮ ನಿರ್ದೇಶನದಲ್ಲಿ ತಾವೇ ಹೀರೋ ಆಗಿ ಅಜಗಜಾಂತರ ಸಿನಿಮಾ ಮಾಡಲು ಪ್ರಾರಂಭಿಸುತ್ತಾರೆ ಇದಕ್ಕೆ ಉಪೇಂದ್ರರವರನ್ನು ನೇರವಾಗಿ ಸಹ ನಿರ್ದೇಶಕ ರನ್ನಾಗಿ ಮಾಡುತ್ತಾರೆ ಕಾಶಿನಾಥ್ ಅವರು associate ಡೈರೆಕ್ಟರ್ ಆದ ನಂತರ ಉಪೇಂದ್ರ ಕಾಶಿನಾಥ್ ರವರ ಕೆಲಸಗಳನ್ನು ತುಂಬಾ ಸುಲಭ ಮಾಡುತ್ತಾರೆ .

ಈ ಸಿನಿಮಾದಲ್ಲಿಯೂ ಉಪೇಂದ್ರ ಮದುವೆ ಗಂಡಿನ ಪಾತ್ರ ಮಾಡುತ್ತಾರೆ ಈ ಸಿನಿಮಾ ಶೂಟಿಂಗ್ ನಲ್ಲಿ ಉಪೇಂದ್ರರವರ ಸ್ಪೀಡ್ ಗೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದರಂತೆ ಕೆಲಸದ ಮೇಲೆ ಇವರಿಗಿದ್ದ ಡೆಡಿಕೇಶನ್ ಹಾಗೂ ಕಮಿಟ್ಮೆಂಟ್ ನಾಯಕತ್ವದ ಗುಣ ಏಕಾಗ್ರತೆ ಎಲ್ಲರಿಗೂ ಇಷ್ಟವಾಯಿತು ಮ್ಯೂಸಿಕ್ ಡೈರೆಕ್ಟರ್ ಮನೋಹರ್ ಅವರು ಕಾಶಿನಾಥರವರು ಹಾಗೂ ಹಂಸಲೇಖರವರು ಉಪೇಂದ್ರ ಬಳಿ ಹುಡುಗ ನೀನು ಒಳ್ಳೆ ಕಥೆ ready ಮಾಡಿಕೋ ನೀನೆ ಡೈರೆ ಮಾಡಿಯಂತೆ ನಿರ್ಮಾಪಕರನ್ನು ನಾವು ಹುಡುಕಿ ಕೊಡುತ್ತೇವೆ ಎಂದು ಸಪೋರ್ಟ್ ಮಾಡುತ್ತಾರೆ ಅವರ ಸಲಹೆ ಹಾಗೂ ಸಹಕಾರದೊಂದಿಗೆ MB ಬಾಬು ಎಂಬ ವ್ಯಕ್ತಿ ನಿರ್ಮಾಪಕರಾಗಿ ಮುಂದೆ ಬರುತ್ತಾರೆ ಅವರಿಗೆ ಉಪೇಂದ್ರ ಎರಡು ಕಥೆ ಹೇಳುತ್ತಾರೆ ಅದರಲ್ಲಿ ಅವರಿಗೆ ಒಂದು ಕಥೆ ಹೇಳಿಸಿ ನಿರ್ಮಾಣ ಮಾಡುವುದಕ್ಕೆ ಒಪ್ಪಿಕೊಳ್ಳುತ್ತಾರೆ ಅಜಗಜಾಂತರ ಸಿನಿಮಾ ಸಾವಿರದ ಒಂಬೈನೂರ ತೊಂಬತ್ತೊಂದರಲ್ಲಿ ಬಿಡುಗಡೆಯಾಗುತ್ತೆ ನಂತರ ಉಪೇಂದ್ರ ನಿರ್ದೇಶಕರಾಗಿ MB ಬಾಬು ನಿರ್ಮಾಪಕರಾಗಿ ಜಗ್ಗೇಶ್ ಅವರನ್ನು ಹೀರೋ ಆಗಿ ಮಾಡಿ ತರ್ಲೆ ನನ್ನ ಮಗ ಸಿನಿಮಾ ಪ್ರಾರಂಭ ಮಾಡಿದರು ಕಾಶಿನಾಥ್ ಅವರು ಉಪೇಂದ್ರ ಅವರಿಗೆ ಸಿನಿಮಾ ಮಾಡಲು ಸಹಾಯ ಮಾಡುತ್ತಾರೆ ಮ್ಯೂಸಿಕ್ ಡೈರೆಕ್ಟರ್ V ಮನೋಹರ್ ಅವರು ಸಹ ಆ ಸಿನಿಮಾ ಪ್ರೊಡಕ್ಷನ್ ನಲ್ಲಿ ಸ್ವಲ್ಪ ಹೆಲ್ಪ್ ಮಾಡುತ್ತಾರೆ ಒಟ್ಟಿನಲ್ಲಿ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ಬಿಡುಗಡೆಯಾಗುತ್ತದೆ .

ಇನ್ನು ಆ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ ನಿರ್ದೇಶಕರಾಗಿ ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಹೆಸರು ಸಂಪಾದಿಸುತ್ತಾರೆ ನಟ ಉಪೇಂದ್ರ ನಂತರ ತನ್ನ ಎರಡನೇ ಸಿನೆಮಾಗೋಸ್ಕರ ಕುಮಾರ್ ಗೋವಿಂದ್ ಹಾಗೂ ಕಾಶಿನಾಥ್ ಅವರನ್ನು ಹೀರೋಗಳನ್ನಾಗಿ ಮಾಡಿ ಸಿನಿಮಾ ಮಾಡುತ್ತಾರೆ ಇದರಲ್ಲಿ ಹೀರೋ ಆಗಿ ನಟಿಸಿದ ಕುಮಾರ್ ಗೋವಿಂದ್ ಅವರೇ ಚಿತ್ರದ ನಿರ್ಮಾಪಕರು ಈ ಸಿನಿಮಾದಲ್ಲಿಯೂ ಸಹ ಒಂದು ಸೀನ್ ನಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಾರೆ ನಟ ಉಪೇಂದ್ರ ಸಾವಿರದ ಒಂಬೈನೂರ ತೊಂಬತ್ತು ಮೂರರ ಡಿಸೆಂಬರನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತದೆ ಈ ಸಿನಿಮಾ ಕೂಡ ದೊಡ್ಡ ಹಿಟ್ ಆಗುತ್ತದೆ ನಂತರ ಉಪೇಂದ್ರ ನಿರ್ದೇಶನ ಮಾಡಿದ ಕನ್ನಡಿಗರು ಎಂದು ಮರೆಯದ ಸಿನಿಮಾ ಓಂ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಿಗೆ ಈ ಸಿನಿಮಾ ದೊಡ್ಡ success ತಂದುಕೊಡುತ್ತದೆ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಬಿಡುಗಡೆಯಾದ ,

ಓಂ ಚಿತ್ರ ಗ್ರ್ಯಾಂಡ್ ಹಿಟ್ ಕಾಣುತ್ತದೆ ನಂತರ ಅಂಬರೀಷ್ ಅವರ ಆಪರೇಷನ್ ಅಂತ ಸಿನಿಮಾ ಮಾಡುತ್ತಾರೆ ನಂತರ ತಾವೇ ನಿರ್ದೇಶನ ಮಾಡಿ ತಾವೇ ನಾಯಕರಾಗಿ ನಟಿಸಿದ ಚಿತ್ರ a B ಜಗನಾಥ್ ಹಾಗು ಮಂಜುನಾಥ್ ರವರ ಜೊತೆ ಉಪೇಂದ್ರ ಅವರು ಸೇರಿ ಉಪ್ಪಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ A ಸಿನಿಮಾ ನಿರ್ಮಿಸಿದರು ಈ ಚಿತ್ರಕ್ಕೆ ಉಪೇಂದ್ರ ಸಹ ಇಪ್ಪತ್ತು ಲಕ್ಷ ಹಣ ಹೂಡಿದ್ದರು ಒಟ್ಟು ಒಂದು ಕೋಟಿ ಇಪ್ಪತ್ತು ಲಕ್ಷ ಹಣದಲ್ಲಿ a ಸಿನಿಮಾ ನಿರ್ಮಾಣವಾಯಿತು ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ ಬಿಡುಗಡೆಯಾದ ಈ ಸಿನಿಮಾ ದೊಡ್ಡ hit ಆಯಿತು ಸುಮಾರು ಇಪ್ಪತ್ತು ಕೋಟಿ collection ಮಾಡಿತ್ತು ಈ ಸಿನಿಮಾದಿಂದ ಉಪೇಂದ್ರ ತೆಲುಗಿನವರೆಗೂ ಪರಿಚಯವಾಗುತ್ತಾರೆ ನಂತರ ತೆಲುಗಿನಲ್ಲಿ ಕನ್ಯಾ ದಾನಮ್ಮ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ತಮ್ಮ ಹೆಸರನ್ನೇ ಇಟ್ಟು ಉಪೇಂದ್ರ ಎಂಬ ಸಿನಿಮಾ ಮಾಡುತ್ತಾರೆ ಎರಡು ಕೋಟಿ ಇಪ್ಪತ್ತು ಲಕ್ಷದಲ್ಲಿ ನಿರ್ಮಾಣವಾದ ಉಪೇಂದ್ರ ಸಿನಿಮಾ ಉಪೇಂದ್ರ ಅವರ ಅದ್ಭುತ ನಟನೆ ಹಾಗೂ ನಿರ್ದೇಶನದಿಂದ ಮೂವತೈದು ಕೋಟಿ ಹಣ ಬಾಚುತ್ತದೆ ಇಲ್ಲಿಂದ ಉಪೇಂದ್ರ ಕೇವಲ ನಿರ್ದೇಶಕ ಮಾತ್ರವಲ್ಲದೆ,

ಒಬ್ಬ ಅತ್ಯದ್ಭುತ ನಟ ಎಂದು ನಿರೂಪಿಸಿದರು ಉಪೇಂದ್ರ ಸಿನಿಮಾ ಸತತ ಇನ್ನೂರು ದಿನಗಳು ಥಿಯೇಟರಗಳಲ್ಲಿ ಪ್ರದರ್ಶನ ಕಂಡಿತ್ತು ಯಾರು ಬರೆಯದಂತಹ ಕಥೆ ಯಾರು ಮಾಡ ನಿರೂಪಣೆ ಸಂಭಾಷಣೆ ಹಾಗು ನಿರ್ದೇಶನದಿಂದ ಉಪೇಂದ್ರ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದರು ಉಪೇಂದ್ರ ಅವರ ಸಿನಿಮಾ ಚೆನ್ನಾಗಿರಲಿ ಇಲ್ಲದೆ ಇರಲಿ ಏನೋ ಒಂದು ವಿಷಯವಂತೂ ಇದ್ದೆ ಇರುತ್ತದೆ ಉಪೇಂದ್ರ ಸಿನಿಮಾದ ನಂತರ ನಟ ಉಪೇಂದ್ರ ಅವರು ನಿರ್ದೇಶನದ ಕಡೆ ಗಮನ ಹರಿಸದೆ ನಟನೆ ಕಡೆ ವಾಲ್ತಾರೆ ಕನ್ನಡದಲ್ಲಿ ಪ್ರೀತಿಸೆ ರಕ್ತ ಕಣ್ಣೀರು ಇನ್ನು ಮುಂತಾದ ಚಿತ್ರಗಳಲ್ಲಿ ತಮ್ಮ ನಟನೆಯ ಸಾಮರ್ಥ್ಯವನ್ನು ಪ್ರದರ್ಶನ ಮಾಡಿರುವ ಉಪ್ಪಿ ಉಪೇಂದ್ರ ಇಲ್ಲಿ ತನಕ ಎಂಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ ನಲವತ್ತೆರಡು ಸಿನಿಮಾಗಳಲ್ಲಿ ನಟನೆ ಮಾಡಿ ಕೊಲ್ಕತ್ತಾ ಮೂಲದ ನಟಿ ಪ್ರಿಯಾಂಕಾ ಅವರನ್ನು ಮದುವೆಯಾಗಿರುವ ಉಪೇಂದ್ರ ,

ಒಬ್ಬಸಾಮಾನ್ಯ ಅಡುಗೆ ಭಟ್ಟರ ಮಗ S ಸೂಪರ್ ಸ್ಟಾರ್ ಆದ ರೋಚಕ ಕಥೆ!ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ ಇನ್ನು ಉಪೇಂದ್ರ ಅವರು ಪ್ರಜಾಕೀಯ ಎಂಬ ಪಕ್ಷ ಕಟ್ಟಿದರು ನಂತರ ಆ ಪಕ್ಷದಿಂದ ಹೊರಬಂದ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷ ನಿರ್ಮಾಣ ಮಾಡಿದರು ತಮ್ಮ ವಿಭಿನ್ನ ಆಲೋಚನಾ ಲಹರಿಯಿಂದ ಉಪೇಂದ್ರ ಅವರು ಖಂಡಿತ ಸಮಾಜದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುತ್ತಾರೆ ಎಂಬ ಆಶಯ ಅವರ ಅಭಿಮಾನಿಗಳಲ್ಲಿ ದಟ್ಟವಾಗಿದೆ ಸ್ನೇಹಿತರೆ ಇದಾಗಿತ್ತು ಉಪೇಂದ್ರ ಅವರ ನಿಜ ಜೀವನದ ಕಿರುಪರಿಚಯ ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೆ ಶೇರ್ ಮಾಡಿ ನಮ್ಮ ಈ ಹೊಸ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

WhatsApp Channel Join Now
Telegram Channel Join Now