ಚೆನ್ನಾಗಿ ಸಂಬಳ ಬರುತಿದ್ದ ಬ್ಯಾಂಕ್ ಕೆಲಸ ಬಿಟ್ಟು ಕೇವಲ ನಾಲ್ಕು ಎಕರೆ ಕೃಷಿ ಭೂಮಿಯಿಂದ ಇಂದು 450 ಎಕರೆ ಭೂಮಿ ಗಳಿಸಿದು ಹೇಗೆ ನೋಡಿ…

197

ಎಷ್ಟೋ ಜನರು ಹಳ್ಳಿಯಲ್ಲೇ ಇದ್ದುಕೊಂಡು ಹಣ ಮಾಡಲು ಸಾಧ್ಯವಿಲ್ಲ ಇಲ್ಲಿ ಇದರ ಲೈಫ್ ಸೆಟಲ್ ಆಗುವುದಿಲ್ಲ ಎಂದು ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಹಲವು ಮಂದಿ ಇದ್ದಾರೆ, ಇನ್ನೂ ಅಂತ ಮಂದಿ ಯಾರೆಲ್ಲ ಭೂಮಿಯಲ್ಲಿ ಕೆಲಸ ಮಾಡುವುದರಿಂದ ಹೆಚ್ಚು ಆದಾಯಗಳಿಸಲು ಸಾಧ್ಯ ಆಗುವುದಿಲ್ಲ ಇನ್ನು ಈ ಕೆಲಸ ಮಾಡುವ ಖರ್ಚು ಹೆಚ್ಚು ಎಂದು ಅಂದುಕೊಂಡಿದ್ದೀರಾ ಅಂಥವರು ಇಲ್ಲಿದೆ ನೋಡಿ ನಿಮಗಾಗಿ ಮುಖ್ಯ ಮಾಹಿತಿ. ಕರ್ನಾಟಕದ ಕಿಶನ್ ಬ್ರದರ್ಸ್ ಆಂಧ್ರಪ್ರದೇಶದ ಪೆನುಕೊಂಡ ಊರಿನಲ್ಲಿ ವ್ಯವಸಾಯ ಮಾಡುವ ಉದ್ದೇಶ ಇಟ್ಟುಕೊಂಡು, ತಮ್ಮದೆ ಆದ ಸಂಸ್ಥೆಯನ್ನು ಸ್ಥಾಪಿಸಿ ಇದೀಗ ಆದಾಯ ಪಡೆಯುತ್ತಿದ್ದಾರೆ. ಹಾಗೂ ತಿಳಿಯೋಣ ಬನ್ನಿ ಆ ಕಂಪೆನಿ ಯಾವುದು ಮತ್ತು ಆ ಕಂಪೆನಿ ಕುರಿತು ಇನ್ನಷ್ಟು ಹೆಚ್ಚಿನ ವಿಚಾರಗಳನ್ನು ಇಂದಿನ ಲೇಖನದಲ್ಲಿ.

ಕಿಶನ್ ಬ್ರದರ್ಸ್ ಎಂದೇ ಖ್ಯಾತಿ ಪಡೆದ ಇವರುಗಳ ಹೆಸರು, ಅಮಿತ್ ಕಿಶನ್ ಹಾಗೂ ಅಶ್ರಿತ್ ಕಿಶನ್. ಅವರು ಹುಟ್ಟಿ ಬೆಳೆದಿದ್ದು ಹಾಗೂ ಶಿಕ್ಷಣ ಪಡೆದಿದ್ದು ಚಿಕ್ಕಬಳ್ಳಾಪುರದಲ್ಲಿ. ಬೆಂಗಳೂರಿನಲ್ಲಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಇವರುಗಳು ಸಂಬಳ ಚೆನ್ನಾಗಿಯೇ ಬರುತ್ತಿತ್ತು ಆದರೆ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂಬ ಕನಸನ್ನು ಹೊತ್ತು ಇವರು ಆಂಧ್ರಪ್ರದೇಶದ ಪೆನುಕೊಂಡದಲ್ಲಿ ಹೆಬ್ಬೇವು ಫ್ರೆಶ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಹೈನುಗಾರಿಕೆಗೆ ಸಂಬಂಧಿಸಿದ ಈ ಸಂಸ್ಥೆಯಲ್ಲಿ, ಹಸುಗಳನ್ನು ಸಾಕಿದ್ದಾರೆ, ಈ ಹಸುಗಳ ಗೊಬ್ಬರವನ್ನು ಹೊಲಕ್ಕೆ ಬಳಸುತ್ತಾರೆ. ಹಾಲನ್ನು ಕೂಡ ಮಾರಾಟ ಮಾಡುತ್ತಾರೆ. ಆರ್ಗ್ಯಾನಿಕ್ ವಿಧಾನಗಳಲ್ಲಿ ಅವರು ಬೆಳೆ ಬೆಳೆಯುತ್ತ ಇದ್ದಾರೆ ಇನ್ನು ಈ ಬ್ರದರ್ಸ್ ತಾತ ಕೂಡ ಸಚಿವರಾಗಿದ್ದರು ಬಳಿಕ ಅವನ ತಂದೆ ಹೈನುಗಾರಿಕೆಯನ್ನು ಮಾಡಲಿಲ್ಲ ಆದರೆ ಕಿಶನ್ ಬ್ರದರ್ಸ್ ತಮ್ಮ ತಾತ ಮಾಡಿಕೊಂಡು ಬಂದ ಹೈನುಗಾರಿಕೆ ನ ಮುಂದುವರೆಸಬೇಕು ಎಂಬ ಕನಸು ಹುಟ್ಟುತ್ತದೆ ಎಲ್ಲಾ ಪೂರೈಸುವುದಕ್ಕಾಗಿ ಬೆಂಗಳೂರಿನ ಹತ್ತಿರದಲ್ಲಿ ಬೆಳೆ ಬೆಳೆಯಲು ಅನುಕೂಲವಾಗುವಷ್ಟು ನೀರಾವರಿ ಜಮೀನನ್ನು ಖರೀದಿ ಮಾಡಿದ ಇವರು ಅವರಿಗೆ ಆಂಧ್ರಪ್ರದೇಶದ ಪೆನುಕೊಂಡ ಪ್ರದೇಶದ ಬಗ್ಗೆ ತಿಳಿಯುತ್ತದೆ. ಹೀಗಾಗಿ ಅಲ್ಲಿಯೆ ತಮ್ಮ ಸಂಸ್ಥೆಯನ್ನು ಪ್ರಾರಂಭಿಸಿದರು, ನಿಸರ್ಗ ವುಡ್ಸ್ ಎಂಬ ಕಂಪನಿಯನ್ನು ಕೂಡ ಪ್ರಾರಂಭಿಸಿ ಅನೇಕ ಬ್ರಾಂಚ್ ಗಳನ್ನು ಸ್ಥಾಪಿಸಿದರು.

ಹೆಬ್ಬೇವು ಫಾರ್ಮ್ಸ್ ಎಂಬ ನಿಸರ್ಗ ವುಡ್ಸ್ ಕಂಪನಿಯ ಒಂದು ಬ್ರಾಂಚ್. ಹೆಬ್ಬೇವು ಫಾರ್ಮ್ಸ್ ನಲ್ಲಿ ವ್ಯವಸಾಯ ಮಾಡಲು ಆಗದೆ ಇರುವ ವ್ಯವಸಾಯದ ಭೂಮಿ ಬೇಕಾಗಿರುವವರಿಗೆ ಭೂಮಿಯನ್ನು ಮಾರಿ ಓನರ್ ಶಿಪ್ ಕೊಟ್ಟು ಸರ್ವಿಸ್ ಅಗ್ರೀಮೆಂಟ್ ಅಂತ 15 ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡು, ಭೂಮಿಯಲ್ಲಿ ಇವರೆ ವ್ಯವಸಾಯ ಮಾಡುತ್ತಾರೆ ಬಳಿಕ ಅಲ್ಲಿಂದ ಬಂದಿರುವ ಆದಾಯದಲ್ಲಿ ಇಬ್ಬರಿಗೂ ಪಾಲು ನೀಡಲಾಗುತ್ತದೆ. 15 ವರ್ಷಗಳ ನಂತರ ಅದನ್ನು ಮುಂದುವರಿಸಿಕೊಂಡು ಹೋಗಬಹುದು ಹಾಗೂ ಗ್ರಾಹಕರು ಅವರ ಜಮೀನಿನಲ್ಲಿ ಅವರೆ ವ್ಯವಸಾಯ ಮಾಡಿಕೊಳ್ಳಬಹುದು ಹಾಗೂ ಗ್ರಾಹಕರಿಗೆ ಜಮೀನನ್ನು ಮಾರುವ ಮನಸ್ಸಿದ್ದರೆ ಹೆಬ್ಬಾವು ಫ್ರಾನ್ಸ್ ಅವರು ಹಣ ಕೊಟ್ಟು ಅದನ್ನು ಖರೀದಿಸುತ್ತಾರೆ.

ಸುಮಾರು 180 ಜನರು ಇವರ ಗ್ರಾಹಕರಾಗಿದ್ದು, ಅವರ ಗ್ರಾಹಕರು ಗಳು ದೇಶ ವಿದೇಶಗಳಲ್ಲಿಯೂ ಕೂಡ ಇದ್ದಾರೆ ಹಾಗೂ ಹೆಬ್ಬೇವು ಫ್ರೆಶ್ ಎಂಬ ಮತ್ತೊಂದು ಬ್ರಾಂಚ್ ಸೂಪರ್ ಮಾರ್ಕೆಟ್ ಆಗಿದ್ದು ಬೆಳೆದ ಬೆಳೆಗಳನ್ನು ಅಲ್ಲಿಯೇ ಮಾರಾಟ ಮಾಡಲಾಗುತ್ತದೆ ಹೌದು ಈ ಸೂಪರ್ ಮಾರ್ಕೆಟ್ ನಿಂದ ಗ್ರಾಹಕರು ನೇರವಾಗಿ ಸರಕಾರಿ ಹಣ್ಣುಗಳ ಖರೀದಿ ಮಾಡಬಹುದು. ಪ್ರಾರಂಭದಲ್ಲಿ ಅವರು 6 ರಿಂದ 8 ವರ್ಷ ಕಷ್ಟಪಟ್ಟು ದುಡಿದು, ಇದೀಗ 30 ರಿಂದ 40 ಲಕ್ಷ ರೂಪಾಯಿ ಬಂಡವಾಳ ಹಾಕಿ 10 ಎಕರೆ ಜಮೀನನ್ನು ಖರೀದಿಸಿದ್ದಾರೆ. ಇಂದು 450 ರಿಂದ 500 ಎಕರೆ ಜಮೀನನ್ನು ಈ ಬ್ರದರ್ಸ್ ಹೊಂದಿದ್ದಾರೆ. ಭೂಮಿಯನ್ನು ಖರೀದಿಸುವ ಗ್ರಾಹಕರ ಬೇಡಿಕೆಯ ಅನುಗುಣವಾಗಿ ಭೂಮಿಯನ್ನು ಉಳುಮೆ ಮಾಡಲಾಗುತ್ತದೆ.

ಆದಾಯ ಬೇಗ ಬರಬೇಕು ಎಂಬ ಗ್ರಾಹಕರಿಗೆ ತರಕಾರಿ ಬೆಳೆಯಲಾಗುತ್ತದೆ, ಲಾಂಗ್ ಟರ್ಮ್ ಆದಾಯ ಬೇಕು ಎಂದು ಬಯಸುವ ಗ್ರಾಹಕರಿಗೆ ಮಿಲಿಯಾ ಡುಬಿಯಾ ಟೀಕ್ ಶ್ರೀಗಂಧ ಬೆಳೆಯಲಾಗುತ್ತದೆ ಹೀಗೆ ಹೊಲಕ್ಕೆ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು ಎಂಬ ಕಾರಣಕ್ಕಾಗಿ ಉತ್ತಮ ತಳಿಯ ಹಸುಗಳ ಗೊಬ್ಬರವನ್ನು ಇವರು ಬಳಸುತ್ತಾರೆ. ಎನೋ ಗೊಬ್ಬರಕ್ಕಾಗಿ ಹಸುಗಳನ್ನ ಸಾಗಿದರು ಆದರೆ ರೋಗದಿಂದ ಕೆಲ ಹಸುಗಳು ಸಾಯುತ್ತಿವೆ ಈ ಕಾರಣಕ್ಕಾಗಿ ದೇಶಿ ಹಸುಗಳನ್ನು ಸಹ ಇವರು ಸಾಕಿ ಅದರಲ್ಲಿಯೂ ಯಶಸ್ಸು ಪಡೆದುಕೊಳ್ಳುತ್ತಾರೆ ಈಗ ಸುಮಾರು 450ಹಸುಗಳಿದ್ದು ಪ್ರತಿ ದಿವಸ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಲ್ಲಿಯ ಹಾಲನ್ನು ಕರ್ನಾಟಕದ ಬೆಂಗಳೂರಿನಲ್ಲಿ ಒದಗಿಸಲಾಗುತ್ತಿದೆ.

ಅವರ ಸಂಸ್ಥೆಯಲ್ಲಿ ಖಾಯಂ ಆಗಿ 100 ಮಂದಿ ಗಿಂತ ಅಧಿಕ ಕೆಲಸಗಾರರು ಇಲ್ಲಿ ಕೆಲಸ ಮಾಡುತ್ತಾ ಇದ್ದರೆ ಹಾಗೂ 100ರಿಂದ 150ಮಂದಿ ದಿನಗೂಲಿ ಕೆಲಸಗಾರರು ಇಲ್ಲಿ ಕೆಲಸ ಮಾಡುತ್ತಾರೆ ಹಾಗೂ ಲಾಕ್ ಡೌನ್ ಸಮಯದಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಆಗದೇ ಇರುವ ಸಮಯ ವನ್ನು ಇವರು ಎದುರಿಸಿದ್ದರು ಆಗ ಅವರದೇ 1ಸೂಪರ್ ಮಾರ್ಕೆಟ್ ಅನ್ನು ಪ್ರಾರಂಭಿಸಿದ್ದರು ಇದನ್ನು ಹೆಬ್ಬೇವು ಸಂಸ್ಥೆಯ ಉತ್ಪನ್ನಗಳು ಖರೀದಿಸಲು ಆನ್ ಲೈನ್ ನಲ್ಲಿಯೂ ಹೆಬ್ಬೇವು ಫಾರ್ಮ್ ಫ್ರೆಶ್ ಎಂಬ ಹೋಟೆಲ್ ಇದೆ ಹಾಗೆ ಹೆಬ್ಬೇವು ಫ್ರೆಶ್ ಎಂಬ ಮೊಬೈಲ್ ಆ್ಯಪ್ ಸಹ ಇದ್ದು ಮನೆಗಳಿಗೆ ನೇರವಾಗಿ ಇವರ ಉತ್ಪನ್ನಗಳು ಬರುತ್ತದೆ. ಕರ್ನಾಟಕದಲ್ಲಿಯೂ ಹೆಬ್ಬೇವು ಫಾರ್ಮ್ ಸಂಸ್ಥೆಯನ್ನು ಸ್ಥಾಪನೆ ಮಾಡುವ ಗುರಿಯನ್ನು ಕಿಶನ್ ಬ್ರದರ್ಸ್ ಹೊಂದಿದ್ದಾರೆ. ಒಟ್ಟಿನಲ್ಲಿ ಭೂಮಿಯಲ್ಲಿ ದುಡಿಮೆಯ ಸಾರ್ಥಕತೆಯನ್ನು ಪಡೆದುಕೊಂಡ ಕಿಶನ್ ಬ್ರದರ್ಸ್ ಅವರು ಇಂದಿನ ಯುವಕರಿಗೆ ನಿಜಕ್ಕೂ ಮಾದರಿಯಾಗಿದ್ದಾರೆ. ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

LEAVE A REPLY

Please enter your comment!
Please enter your name here