ನಿಮ್ಮ ತಲೆ ಕೂದಲು ಉದುರೋದು , ಸಿಕ್ಕಾಪಟ್ಟೆ ಹೊಟ್ಟು ಇದ್ರೆ ಈ ಒಂದು ವಸ್ತುವಿನಿಂದ ತೈಲ ಮಾಡಿಕೊಂಡು ಹಚ್ಚಿ ಸಾಕು …ನಿಮ್ಮ ತಲೆಯಲ್ಲಿ ಕೂದಲು ಹುಲ್ಲಿನ ಹಾಗೆ ಧಾರಾಕಾರವಾಗಿ ಬೆಳೆಯುತ್ತವೆ…

180

ತಲೆ ಕೂದಲು ಉದುರುತ್ತಿದ್ದರೆ ಅದಕ್ಕಾಗಿ ಮಾಡಿ ಇದೊಂದು ಸರಳ ಪರಿಹಾರ, ಇದನ್ನು ಮಾಡೋದು ಸುಲಭಾನೆ ಆದರೆ ಇದಕ್ಕೆ ಬೇಕಾಗಿರುವ ಪದಾರ್ಥಗಳು ಮಾತ್ರ ಸ್ವಲ್ಪ ಹೆಚ್ಚಾಗಿ ಬೇಕು. ಆದರೆ ಪರಿಣಾಮಕಾರಿಯಾಗಿ ಕೂದಲು ಉದುರುವ ಸಮಸ್ಯೆಯನ್ನು ತಡೆಯುತ್ತದೆ.

ಇವತ್ತಿನ ಲೇಖನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತಹ ಹಾಗೂ ಎಲ್ಲರಿಗೂ ಉಪಯುಕ್ತವಾಗುವಂತಹ ಮನೆಮದ್ದು ಒಂದರ ಬಗ್ಗೆ ತಿಳಿಸಿಕೊಡಲಿದ್ದೇವೆ. ಹೌದು ಕೂದಲು ಉದುರುವ ಸಮಸ್ಯೆ ಪುರುಷ ಮಹಿಳೆಯರಿಗೆ ಅನ್ನದೆ ಎಲ್ಲರಿಗೂ ಕಾಡುತ್ತದೆ, ಹಾಗಾಗಿ ಕೂದಲು ಉದುರುವ ಸಮಸ್ಯೆಗೆ ಬಹಳಷ್ಟು ಪರಿಹಾರಗಳನ್ನ ನಾವು ನೀವೆಲ್ಲರೂ ಮಾಡಿಯೇ ಇರ್ತೇವೆ ಆದರೆ ಇದೊಂದು ಬಹಳ ಹಳೆಯ ಪದ್ಧತಿ ಆಗಿದ್ದು, ಇದನ್ನೂ ಪಾಲಿಸುವುದರಿಂದ ಖಂಡಿತವಾಗಿಯೂ ಪರಿಣಾಮಕಾರಿಯಾದ ಫಲಿತಾಂಶ ನಿಮಗೆ ಸಿಗುತ್ತದೆ. ಹಾಗಾದರೆ ಕೂದಲು ಉದುರುವ ಸಮಸ್ಯೆಗೆ ನಾಂದಿ ಹಾಡಬೇಕೆಂದರೆ ಸರಳವಾಗಿ ಮನೆಯಲ್ಲಿಯೇ ಮಾಡಿ ಇದೊಂದು ಮನೆಮದ್ದು, ಕೂದಲಿನ ಪೋಷಣೆ ಮಾಡುತ್ತಾ ಬಂದರೆ ತಾನಾಗಿಯೇ ಕೂದಲು ಉದುರುವ ಸಮಸ್ಯೆ ಸಹ ದೂರವಾಗುತ್ತದೆ.

ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಅಂದರೆ ಎಳ್ಳೆಣ್ಣೆ ಕೊಬ್ಬರಿಎಣ್ಣೆ ಕರಿಜೀರಿಗೆ ಮೆಂತ್ಯೆ ಕರಿಮೆಣಸು ಸಣ್ಣ ಹರಳೇಕಾಯಿ ದಾಲ್ಚಿನ್ನಿ ಚಕ್ಕೆ ಸೀಗೆಕಾಯಿ ಮತ್ತು ನೆಲ್ಲಿಕಾಯಿ ಹರಳೇಕಾಯಿ ತಾರೆಕಾಯಿ ಈ 3 ಪದಾರ್ಥಗಳ ಮಿಶ್ರಣದ ಪುಡಿ ತೆಗೆದುಕೊಳ್ಳಬೇಕು.ಇಲ್ಲಿ ಕರಿಮೆಣಸನ್ನು ಯಾಕೆ ಅಂದರೆ ಇದು ಡ್ಯಾಂಡ್ರಫ್ ಸಮಸ್ಯೆ ಯನ್ನು ನಿವಾರಣೆ ಮಾಡುತ್ತದೆ ಮತ್ತು ಮೆಂತೆ ಕೂದಲನ್ನು ಕೂದಲಿನ ಬುಡವನ್ನು ತಂಪಾಗಿರಿಸಿ ಕೂದಲಿಗೆ ಒಳ್ಳೆಯ ಫ್ರೆಂಡ್ ಕೂರುತ್ತದೆ ಹಾಗೆ ಈ ನೆಲ್ಲಿಕಾಯಿ ಕೂದಲಿಗೆ ಚೆನ್ನಾಗಿ ಪೋಷಣೆ ಮಾಡುತ್ತದೆ ಕೂದಲು ಕಪ್ಪಾಗಿ ರಿಸಲು ಸಹಕಾರಿಯಾಗಿರುತ್ತದೆ.

ಎಣ್ಣೆ ಸೀಗೆಕಾಯಿ ಪುಡಿಯನ್ನು ಕೂಡ ಬಳಸಿದ್ದೇವೆ ಯಾಕೆ ಅಂದರೆ ಸೀಗೆಕಾಯಿ ಪುಡಿ ಕೂದಲಿನ ಬುಡವನ್ನು ದೃಢ ಮಾಡುವುದಲ್ಲದೆ ಕೂತಿಲ್ಲ ನಲ್ಲಿ ಇರುವ ಧೂಳಿನ ಅಂಶವನ್ನು ತೆಗೆದು ಹಾಕಲು ಸಹಕಾರಿ ಆಗಿರುತ್ತದೆ.ಹಾಗಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳುವ ಎಣ್ಣೆಗೆ ಇಷ್ಟು ಪದಾರ್ಥಗಳನ್ನು ಮಿಶ್ರಮಾಡಿ, ಎಣ್ಣೆಯನ್ನು ಚೆನ್ನಾಗಿ ಕುದಿಸಬೇಕು ಇಲ್ಲವಾದರೆ ಎಣ್ಣೆ ಬೇಗ ಹಾಳಾಗುತ್ತದೆ, ಹೆಚ್ಚು ಸಮಯ ಶೇಖರಣೆ ಮಾಡಿ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಒಮ್ಮೆ ಮಾಡಿಕೊಂಡು ತಿಂಗಳು ಶೇಖರಣೆ ಮಾಡಿಟ್ಟುಕೊಂಡರೂ ಕೆಡುವುದಿಲ್ಲ. ಇದನ್ನು ವಾರಕ್ಕೆ 2 ಬಾರಿ ಕೂದಲಿನ ಬುಡಕ್ಕೆ ಲೇಪ ಮಾಡಿ ಕೂದಲಿಗೆ ಮಸಾಜ್ ಮಾಡುತ್ತಾ ಬಂದರೆ, ಕೂದಲಿನ ಬುಡ ಸದೃಢವಾಗುವುದರ ಜೊತೆಗೆ ಡ್ಯಾಂಡ್ರಫ್ ಸಮಸ್ಯೆ ಕೂಡ ನಿಮ್ಮನ್ನು ಕಾಡುವುದಿಲ್ಲ. ಇವತ್ತಿನ ದಿನಗಳಲ್ಲಿ ಡ್ಯಾಂಡ್ರಫ್ ಸಮಸ್ಯೆ ಕಾಡುವುದರಿಂದಲೆ ಮುಖದ ಮೇಲೆ ಮೊಡವೆ ಅಂತಹ ಸಮಸ್ಯೆ ಕಾಡಿರುತ್ತದೆ ಅಂಥವರು ಈ ಸುಲಭ ಪರಿಹಾರವನ್ನು ಪಾಲಿಸಿ.

ಹಾಗಾಗಿ ಕೂದಲಿನ ಬಹುತೇಕ ಸಮಸ್ಯೆಗಳಿಗೆ, ಪರಿಹಾರ ನೀಡುವುದರಿಂದ, ನೀವು ಆಚೆಯಿಂದ ದುಬಾರಿ ಬೆಲೆಯ ಎಣ್ಣೆಗಳನ್ನು ತಂದು ಕೂದಲಿನ ಪೋಷಣೆ ಮಾಡುವ ಅವಶ್ಯಕತೆಯೇ ಬರುವುದಿಲ್ಲ.ನೈಸರ್ಗಿಕವಾಗಿ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿರುವ ಪದಾರ್ಥಗಳನ್ನೇ ಬಳಸಿ ಮಾಡಿಕೊಳ್ಳುವ ಈ ಎಣ್ಣೆ ಯಾವುದೇ ದುಬಾರಿ ಬೆಲೆಯ ಎಣ್ಣೆಗಿಂತ ಕಡಿಮೆ ಇರುವುದಿಲ್ಲ. ನೀವು ಮನೆಯಲ್ಲಿಯೇ ಈ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಮೇಲೆ ನಿಮ್ಮ ಆರೋಗ್ಯದ ಮೇಲೆ ಹಾಗೂ ತ್ವಚೆಯ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳು ಕೂಡ ಆಗುವುದಿಲ್ಲ.

ಕೂದಲನ್ನು ವಾರಕ್ಕೆ 2ಅಥವಾ 3ಬಾರಿ ಸ್ವಚ್ಛ ಮಾಡಬೇಕಿರುತ್ತದೆ ಹಾಗಾಗಿ ಕೂದಲನ್ನು ತೊಳೆಯುವ 2ಗಂಟೆಗಳ ಮುಂಚೆ ಅಥವಾ ಹಿಂದಿನ ದಿನ ರಾತ್ರಿ ಕೂದಲಿಗೆ ಎಣ್ಣೆಯನ್ನು ಲೇಪ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿ ಬಳಿಕ ಕೂದಲಿಗೆ ಜಡೆ ಹಾಕಿ ಮಲಗುವುದರಿಂದ ಕೂದಲು ಪೋಷಣೆ ಉತ್ತಮವಾಗಿ ಆಗುತ್ತದೆ ಮತ್ತು ಪುರುಷರಾದರೆ ಈ ಎಣ್ಣೆಯನ್ನು ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ, ಈ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ನಿಮಗೆ ಒಳ್ಳೆಯ ರಿಲೀಫ್ ಕೂಡ ಸಿಗುತ್ತದೆ.

WhatsApp Channel Join Now
Telegram Channel Join Now