ಹೊಟ್ಟೆ ನೋವು , ಆಗಾಗ ಎದೆ ಉರಿಯೋದು , ಆಮಶಂಕೆಗೂ ಸಹ ಇದು ತುಂಬಾ ಸಹಕಾರಿ, ಹಾಗಾದ್ರೆ ಯಾವುದು ಈ ಹಣ್ಣು ಇದನ್ನ ಹೇಗೆ ಬಳಸೋದು ನೋಡಿ..

180

ಪುನರ್ಪುಳಿ ಅಥವಾ ಕೊಕ್ಕುಂ ಇದನ್ನು ಮುರುಗಲು ಅಥವಾ ಬಿ ರಿಂದ ಇವುಗಳ ಹೆಸರು ಕೇಳಿದ್ದೀರಾ ಅಲ್ವಾ ಹೌದು ಹಳ್ಳಿಮಂದಿಯ ಆದರೆ ಇದರ ಪರಿಚಯ ಹೆಚ್ಚಾಗಿ ಇರುತ್ತದೆ ಇದು ಹುಳಿ ಹಣ್ಣುಗಳಲ್ಲಿ ಹೆಸರುವಾಸಿಯಾಗಿರುವ ಹಣ್ಣು ಅಷ್ಟೇ ಅಲ್ಲ ಬಹಳಷ್ಟು ಮಂದಿಗೆ ಇದರ ಚಮತ್ಕಾರವೇ ತಿಳಿದಿಲ್ಲ ಗರ್ಭಿಣಿಯರಿಗೂ ಕೂಡ ಕೊಡಬಹುದಾದ ಹುಳಿಯ ಹಣ್ಣು ಇದಾಗಿದೆ ಇದರಿಂದ ತುಪ್ಪ ತೆಗೆಯಬಹುದು ಎಣ್ಣೆ ತೆಗೆಯಬಹುದು ಹಾಗೆಯೇ ಇದನ್ನು ವರುಷಾನುಗಟ್ಟಲೆ ಶೇಖರಣೆ ಮಾಡಿ ಇಡಬಹುದು ಅಡುಗೆ ಎಣ್ಣೆ ಆಗಿ ಕೂಡ ತಯಾರಿ ಮಾಡಿಕೊಂಡು ಇದನ್ನು ಬಳಕೆ ಮಾಡಬಹುದು ಗೊತ್ತಾ?

ಹೌದು ಈ ಬಿರಿಂಡ ಎಂಬ ಹಣ್ಣಿನಲ್ಲಿ ಬೀಜಗಳು ಇರುತ್ತವೆ ಇದರ ಬೀಜವನ್ನು ತೆಗೆದು ರಸವನ್ನು ಬೇರ್ಪಡಿಸಿ ಅದರ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸುಮಾರು 5 ವರುಷಗಳ ವರೆಗೂ ಅಂದಿನ ಕಾಲದಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳುತ್ತಿದ್ದರು. ಆಮಶಂಕೆ ವಾತಕ್ಕೆ ಇದೆಲ್ಲದಕ್ಕೂ ಶಮನ ನೀಡಬಲ್ಲ ಈ ಹುಳಿ ಹಣ್ಣು ಇದರ ಚಮತ್ಕಾರಿ ತಿಳಿಯೋಣ ಬನ್ನಿ ಇವತ್ತಿನ ಈ ಪುಟದಲ್ಲಿ.

ಪ್ರಿಯ ಸ್ನೇಹಿತರೆ ಆರೋಗ್ಯದ ಬಗ್ಗೆ ಮಾಹಿತಿ ಕೊಡುತ್ತಿದ್ದರು ಅದನ್ನು ಕೆಲವರು ಉಡಾಫೆ ಮಾಡ್ತಾರೆ. ಆದರೆ ನಮ್ಮ ಅಂದಿನ ಕಾಲದ ಮಂದಿ ಎಷ್ಟು ಜ್ಞಾನವುಳ್ಳವರು ಅಂದರೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲಿಯೇ ಮನೆಮದ್ದು ಮಾಡಿಯೇ ಸೇವಿಸುವ ಮೂಲಕ ಅನಾರೋಗ್ಯ ಸಮಸ್ಯೆ ಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ದೂರ ಮಾಡಿಕೊಳ್ಳುತ್ತಿದ್ದರು.

ಅಂದು ಮನೆಗೊಬ್ಬರು ವೈದ್ಯರು ಇರುತ್ತಿದ್ದರು ಬಿಡಿ ಯಾಕೆ ಅಂತೀರಾ ಹೌದು ಅಂದಿನ ಕಾಲದ ಮಂದಿಗೆ ಅಷ್ಟು ಜ್ಞಾನವೇ ಹರಿದಿತ್ತು ಪ್ರಕೃತಿಯಲ್ಲಿ ಇರುವ ಹಣ್ಣು ಕಾಯಿ ಎಲೆ ಬಂಡಿಗಳ ಬಗ್ಗೆ ಪರಿಚಯ ವಿರುತ್ತಿತ್ತು. ಸಣ್ಣ ರಕ್ತಸ್ರಾವವಾದರೂ ಸಣ್ಣದಾಗಿ ತಲೆ ಸುತ್ತು ಬಂದರೂ ಬಹಳ ಬೇಗ ಅದಕ್ಕೆ ಮದ್ದನ್ನು ಹುಡುಕಿಕೊಳ್ಳುತ್ತಿದ್ದರು.

ಈ ಬಿರಿಂಡ ಎಂಬ ಹಣ್ಣು ಸಹ ಹಾಗೆ ಹುಳಿ ಹಣ್ಣಿನ ಜಾತಿಗೆ ಸೇರಿರುವ ಈ ಹಣ್ಣು ಇದನ್ನು ಮಂದಿ ಬಹಳಷ್ಟು ಕಾಲ ಗಳವರೆಗೂ ಶೇಖರಣೆ ಮಾಡಿ ಇಟ್ಟುಕೊಳ್ಳುತ್ತಿದ್ದರು ಇದರ ರಸವನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬೆಲ್ಲದ ಪಾಕದೊಂದಿಗೆ ಮಿಶ್ರಮಾಡಿ ಇದನ್ನು ಕುದಿಸಿ ಶೇಖರಣೆ ಮಾಡಿ ಇಟ್ಟುಕೊಳ್ಳುತ್ತಿದ್ದರು. ಇಂದು ಮಕ್ಕಳು ಜಾಮ್ ಅಂತ ಏನು ಬಳಸುತ್ತಾರೆ ತಿನ್ನುವುದಕ್ಕೆ, ಅಂದಿನ ಕಾಲದಲ್ಲಿಯೆ ಹಿರಿಯರು ಕೆಲವೊಂದು ಹಣ್ಣುಗಳನ್ನು ಬಳಸಿ ಅವುಗಳಿಂದ ಹಲವು ಖಾದ್ಯ ತಯಾರಿಸಿ ಶೇಖರಣೆ ಮಾಡಿ ಇಟ್ಟುಕೊಂಡು ವರುಷವೆಲ್ಲ ತಿನ್ನುತ್ತಿದ್ದರು.

ಈ ಪುನರ್ಪುಳಿ ಇದೆಯಲ್ವಾ ಇದು ಬಹಳ ಹುಳಿ ಮಿಶ್ರಿತ ಹಣ್ಣಾಗಿದೆ ಹಾಗೆಯೇ ಇಂದು ಅಡುಗೆಯಲ್ಲಿ ನಾವು ಹುಣಸೆಹಣ್ಣನ್ನು ಹೇಗೆ ಬಳಕೆ ಮಾಡುತ್ತೇವೆ ಹಾಗೆ ಈ ಹಣ್ಣಿನ ಹುಳಿಯನ್ನು ಅಡುಗೆಯಲ್ಲಿ ಬಳಕೆ ಮಾಡುವ ಮೂಲಕ ರುಚಿ ಸವಿಯುತ್ತಿದ್ದರು ನಮ್ಮ ಹಿರಿಯರು.

ನಮ್ಮ ಹಿರಿಯರು ಕೂಡ ಬಹಳ ರುಚಿಗಾರರೇ ಹೌದು ಯಾಕೆ ಅಂತೀರಾ ಅಂದು ಈ ಚೈನೀಸ್ ಇಟಾಲಿಯನ್ ಕಾಂಟಿನೆಂಟಲ್ ನಾನ್ ಕಾಂಟಿನೆಂಟಲ್ ಅಂತ ಇರುತ್ತಿರಲಿಲ್ಲ ಆದರೆ ಪ್ರಕೃತಿಯಲ್ಲಿ ದೊರೆಯುವ ರುಚಿ ರುಚಿಯಾದ ಹಣ್ಣುಗಳನ್ನು ಬಳಕೆ ಮಾಡುವ ಮೂಲಕ ಉತ್ತಮ ಆಹಾರಗಳು ಬಹಳ ರುಚಿಕರವನ್ನಾಗಿಸಿ ಕೊಂಡು ಚಪ್ಪರಿಸುತ್ತಿದ್ದರು, ಅಂತಹ ಹಣ್ಣುಗಳಲ್ಲಿ ರುಚಿ ನೀಡಬಲ್ಲ ಆಹಾರದ ರುಚಿಯನ್ನು ಇನ್ನಷ್ಟು ಹೆಚ್ಚಿಸಬಲ್ಲ ಹಣ್ಣು ಮುರುಗಲು ಹಣ್ಣು ಸಹ.

ಗರ್ಭಿಣಿಯರಿಗೂ ಕೂಡ ಈ ಹಣ್ಣಿನಿಂದ ತುಪ್ಪ ಮಾಡಿ ತಿನ್ನಲು ನೀಡುತ್ತಿದ್ದರು ಇದು ಮೂಳೆಗಳನ್ನು ಬಲಪಡಿಸುತ್ತಿತ್ತು ಅಷ್ಟೆ ಅಲ್ಲಾ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತಿತ್ತು.

ನೋಡಿದಿರಲ್ಲ ಫ್ರೆಂಡ್ಸ್ ಅಂದಿನ ಕಾಲದ ಮಂದಿ ಎಷ್ಟೆಲ್ಲಾ ಜ್ಞಾನಿಗಳಾಗಿದ್ದರು ಈ ಪ್ರಕೃತಿಯಲ್ಲಿ ದೊರೆಯುವ ಹಣ್ಣುಗಳ ಬಗ್ಗೆ ಕಾಯಿ ಬಳ್ಳಿ ಎಲೆ ತೊಗಟೆ ಇವುಗಳ ಬಗ್ಗೆ ಎಷ್ಟು ಮಾಹಿತಿ ತಿಳಿದಿದ್ದರು ಮತ್ತು ಅದನ್ನ ಬಳಸಿ ತಮ್ಮ ನಾಲಿಗೆಗೂ ರುಚಿ ನೀಡಿ ತಮ್ಮ ಆರೋಗ್ಯವನ್ನು ಹೇಗೆ ವೃದ್ಧಿಸಿಕೊಳ್ಳುತ್ತಿದ್ದರೂ ಅಂತ…

WhatsApp Channel Join Now
Telegram Channel Join Now