ಮೂತ್ರದಲ್ಲಿ ಉರಿ ಉರಿ , ಅಜೀರ್ಣ ,ಕೆಮ್ಮು ಈ ತರ ಯಾವುದೇ ಪ್ರಾಬ್ಲಮ್ ಇದ್ರೂ ಸಹ ಈ ಒಂದು ಕಷಾಯ ಮಾಡಿ ಸಾಕು … ಅದ್ಭುತವಾಗಿ ಕೆಲಸ ಮಾಡುತ್ತದೆ…

254

ನೆಲನಲ್ಲಿ ಪರಿಚಯ ನಿಮಗೆ ಇದೆಯಾ ಹೌದು ನೆಲನೆಲ್ಲಿ ಕೇವಲ ಒಂದೇ ಗಿಡಮೂಲಿಕೆ ಆದರೆ ಇದರಿಂದ ಹತ್ತು ಹಲವಾರು ಪ್ರಯೋಜನಗಳಿವೆ ಅದನ್ನು ಈ ಮಾಹಿತಿಯಲ್ಲಿ ಈ ಪುಟದ ಮೂಲಕ ನಿಮಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಹಲವು ಅನಾರೋಗ್ಯ ಸಮಸ್ಯೆಗಳಿಗೆ ನೆಲನೆಲ್ಲಿ ಪ್ರಯೋಜನ ಪಡೆದುಕೊಳ್ಳಿ

ನಮಸ್ಕಾರಗಳು ಪ್ರಿಯ ಓದುಗರೆ, ಅನಾರೋಗ್ಯ ಸಮಸ್ಯೆ ಎಂಬುದು ಅಂದಿನ ಕಾಲದಲ್ಲಿಯು ಇತ್ತು ಇವತ್ತಿನ ಕಾಲದಲ್ಲಿಯೂ ಇದೆ. ಆದರೆ ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಬದಲಾಗಿರುವುದೇನು ಅಂದರೆ ನಾವು ಅನಾರೋಗ್ಯ ಸಮಸ್ಯೆಗಳಿಗೆ ಮಾಡುವ ಪರಿಹಾರ ನಾವು ಪಡೆದುಕೊಳ್ಳುವ ಚಿಕಿತ್ಸೆ ಅವತ್ತಿನ ಕಾಲದಲ್ಲಿ ಇವತ್ತಿನ ಹಾಗೆ ದವಾಖಾನೆಗಳು ಇರಲಿಲ್ಲಾ. ಆದರೆ ಹಿರಿಯರಿಗೆ ಯಾವ ಸಮಸ್ಯೆ ಗೆ ಯಾವ ಪರಿಹಾರ ಮಾಡಿಕೊಳ್ಳಬೇಕು ಎಂಬ ಜ್ಞಾನ ವಿತ್ತ ಹಾಗಾಗಿ ಅಂದು ಹೆಚ್ಚಿನ ಕಾಲ ಹಿರಿಯರು ಆರೋಗ್ಯಕರವಾಗಿ ಬದುಕುತ್ತಿದ್ದರೂ ಮತ್ತು ಬಂದು ಹೋಗುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳದೆ ಆರೋಗ್ಯಕರ ಜೀವನ ನಡೆಸುತ್ತಿದ್ದರು ಆದರೆ ಇವತ್ತಿನ ಕಾಲದಲ್ಲಿ ಪರಿಸ್ಥಿತಿ ಏನಾಗಿದೆ ಎಂದು ನೀವು ಕೂಡ ನೋಡುತ್ತಿದ್ದೀರಾ ಅಲ್ವಾ.

ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಆಸ್ಪತ್ರೆಗೆ ಓಡುವ ಮಂದಿ ಹಲವು ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವುದೇ ಪರಿಹಾರ ಅಂತ ಅಂದುಕೊಂಡಿದ್ದಾರೆ, ಆದರೆ ಅಂದಿನ ಕಾಲದಲ್ಲಿ ಹಿರಿಯರು ಎಂತಹ ಒಳ್ಳೆಯ ಗಿಡಮೂಲಿಕೆಗಳನ್ನು ಬಳಸಿ ಪ್ರಭಾವ ಉಳ್ಲ ಮನೆಮದ್ದುಗಳನ್ನೂ ಮಾಡುತ್ತಿದ್ದರು ಇವತ್ತಿನ ಈ ಪುಟದಲ್ಲಿ ಹಿರಿಯರು ಆಡುತ್ತಿದ್ದ ಪ್ರಭಾವಶಾಲಿಯಾದ ದಂತಹ ಮನೆಮದ್ದು ವೊಂದರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಹೌದು ನೆಲನೆಲ್ಲಿಯ ಪ್ರಯೋಜನಗಳು ಹತ್ತುಹಲವಾರು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ, ಅಷ್ಟೆ ಅಲ್ಲ ಜಾಂಡೀಸ್ ನಂತಹ ಮಹಾಮಾರಿ ಕಾಯಿಲೆಗಳನ್ನೂ ಇದು ಪರಿಹಾರ ನೀಡುತ್ತದೆ.ಇದನ್ನು ಬಳಕೆ ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ ನೆಲನೆಲ್ಲಿ ಗಿಡವನ್ನು ತರುವಾಗ ಇದರ ಬುಡ ಸಮೇತ ತರಬೇಕು ಹಾಗೆ ಇದನ್ನು ನೀರಿನಲ್ಲಿ ಸ್ವಚ್ಛ ಮಾಡಿ ಬಳಿಕ ಇದನ್ನು ಕಲ್ಲಿನಲ್ಲಿ ಅರೆದು ಇದರಿಂದ ರಸವನ್ನು ಬೇರ್ಪಡಿಸಿ, ಇದರಿಂದ ಕಷಾಯವೊಂದರ ತಯಾರಿಸಬೇಕು ಹೇಗೆಂದರೆ 2 ಲೋಟ ನೀರನ್ನು ಕುದಿಯಲು ಇಟ್ಟು ಇದಕ್ಕೆ ಜೀರಿಗೆ ಮತ್ತು ಸಂಗ್ರಹ ಮಾಡಿ ಇಟ್ಟುಕೊಂಡಂತಹ ರಸವನ್ನು ನೀರಿಗೆ ಹಾಕಿ ಇದಕ್ಕೆ ಸ್ವಲ್ಪ ಬೆಲ್ಲವನ್ನು ಮಿಶ್ರ ಮಾಡಿ, ನೀರು ಅರ್ಧ ಆಗುವಷ್ಟು ನೀರನ್ನ ಕುದಿಸಿಕೊಳ್ಳಬೇಕು ಬಳಿಕ ಇದನ್ನು ಶೋಧಿಸಿಕೊಂಡು ಕುಡಿಯಿರಿ ಇದರಿಂದ ಜಾಂಡೀಸ್ ನಂತಹ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಕಷಾಯವನ್ನು ಯಾವಾಗ ಸೇವಿಸಬೇಕು ಅಂದರೆ ಬೆಳಿಗ್ಗೆ ಅಥವಾ ಮಧ್ಯಾಹ್ನ ಅಥವಾ ರಾತ್ರಿ ಯಾವ ಸಮಯದಲ್ಲಿ ಆಗಲೇ ಊಟಕ್ಕೂ ಮೊದಲು ಈ ಕಷಾಯವನ್ನು ಸೇವಿಸದರೆ ಈ ಕಷಾಯವನ್ನು ಕುಡಿದ ಕೂಡಲೇ ಊಟವನ್ನು ಮಾಡಬೇಕು, ಇಲ್ಲವಾದಲ್ಲಿ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಈ ಕಷಾಯ ಕುಡಿದ ಕೂಡಲೇ ಊಟ ಮಾಡಿ ಮತ್ತು ಹೆಚ್ಚು ನೀರು ಕುಡಿಯುವುದು ಒಳ್ಳೆಯದು.

ಶೀತ ಕೆಮ್ಮಿಗೆ ರಾಮಬಾಣ ಈ ನೆಲನಲ್ಲಿ, ಇದರ ನಿವಾರಣೆಗೆ ನೆಲನೆಲ್ಲಿ ಯನ್ನು ಹೇಗೆ ಬಳಸಬೇಕೆಂದರೆ, ನೆಲನೆಲ್ಲಿಯ ಮತ್ತು ತುಳಸಿ ದಳಗಳನ್ನು ಸೇರಿಸಿ ಅರೆದು ರಸವನ್ನು ಸಂಗ್ರಹಿಸಿ ಇದಕ್ಕೆ ಶುಂಠಿಯ ರಸವನ್ನು ಮಿಶ್ರ ಮಾಡಿ ಕುಡಿಯಬೇಕು, ಇದರಿಂದ ಗಂಟಲಿನಲ್ಲಿ ಕಟ್ಟಿರುವ ಕಫ ಹಾಗೂ ಶೀತದಂತಹ ಸಮಸ್ಯೆ ನಿವಾರಣೆ ಆಗುತ್ತದೆ.ಈ ರೀತಿ ಹತ್ತು ಹಲವಾರು ಪ್ರಯೋಜನಗಳನ್ನು ಅಡಗಿಸಿಕೊಂಡಿರುವ ನೆಲನಲ್ಲಿ ಉಪಯೋಗಗಳು ಹೀಗಿದೆ, ಇದನ್ನು ವಾರಕ್ಕೊಮ್ಮೆಯಾದರು ಸೇವಿಸುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

WhatsApp Channel Join Now
Telegram Channel Join Now