ಮಹಿಳೆಯರ ಮುಟ್ಟಿನ ಸಮಸ್ಸೆಗೆ ರಾಮಬಾಣ ಅಂತಾನೆ ಹೇಳಬಹುದು , ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗಬೇಕು ಅಂದ್ರೆ ಈ ವಿಧಾನ ಅನುಸರಿಸಿ…

184

ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಅಥವಾ ಸರಿಯಾದ ಸಮಯಕ್ಕೆ ಮುಟ್ಟು ಆಗದಿರುವುದು ಹೀಗೆಲ್ಲಾ ಆಗುತ್ತಿದೆಯಾ ಹಾಗಾದರೆ ಇದಕ್ಕೆ ಒಂದೊಳ್ಳೆ ಪ್ರಭಾವಶಾಲಿ ಮನೆ ಮದ್ದು ಇದೆ ಅದನ್ನ ನೀವು ತಿಳೀಬೇಕಂದ್ರೆ ಈ ಪುಟವನ್ನು ತಿಳಿಯಿರಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ…ನಮಸ್ಕಾರಗಳು ಓದುಗರೆ, ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯ ಯಾಕಾದ್ರೂ ಬರುತ್ತೋ ಅಂತ ಅನಿಸುತ್ತಾ, ಯಾಕೆ ಅಂತೀರಾ ಹೌದು ಆ ನೋವು ಆ ಬಾಧೆ ಆ ಸಮಯದಲ್ಲಿ ಅವರಿಗೆ ಉಂಟಾಗುವ ಕಿರಿಕಿರಿ ಇದೆಲ್ಲದನ್ನು ಬಹುಶಃ ಹೆಣ್ಣುಮಕ್ಕಳಿಗೆ ಮಾತ್ರ ತಡೆದುಕೊಳ್ಳುವ ಸಾಮರ್ಥ್ಯವನ್ನು ಆ ದೇವರು ಕೊಟ್ಟಿದ್ದಾನೆ ಅನಿಸುತ್ತೆ.

ಹಾಗಾಗಿ ಈ ಸಮಯದಲ್ಲಿ ಪ್ರತಿಯೊಬ್ಬ ಪುರುಷನು ಕೂಡ ಹೆಣ್ಣನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಅವರಿಗೆ ನೋವಾಗುವ ಹಾಗೆ ಮಾಡಬಾರದು ಯಾಕೆಂದರೆ ಆಗಲೇ ಅವರ ಶರೀರ ಆ ಸಮಯದಲ್ಲಿ ಬಳಲಿರುತ್ತದೆ. ಅಂತಹ ಸಮಯದಲ್ಲಿ ನಾವು ಇನ್ನಷ್ಟು ಅವರಿಗೆ ಮನಸ್ಸಿಗೆ ಘಾಸಿ ಉಂಟು ಮಾಡಿದರೆ ಅವರಿಗೆ ಇನ್ನಷ್ಟು ನೋವು ಉಂಟಾಗಬಹುದು. ಹಾಗಾಗಿ ಮುಟ್ಟಿನ ಸಮಯದಲ್ಲಿ ಇರುವಾಗ ಹೆಣ್ಣುಮಕ್ಕಳನ್ನ ಕಾಳಜಿ ಮಾಡಿ ಹೆಚ್ಚು ಸಮಯ ಅವರಿಗೆ ಕೊಡಲು ಸಾಧ್ಯವಾಗದೇ ಇದ್ದರೂ, ಅವರಿಗೆ ಸಮಾಧಾನ ಆಗುವಂತಹ ಒಂದೆರಡು ಮಾತುಗಳನ್ನಾಡಿ, ಹೆಣ್ಣಾಗಲಿ ಗಂಡಾಗಲಿ ಆ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸಿ ಕಾಳಜಿ ಮಾಡಿ.

ಹೌದು ಕೆಲವರಿಗೆ ಮುಟ್ಟಿನ ಸಮಯ ಹೇಗಿರುತ್ತದೆ ಅಂದರೆ ತಿಂಗಳು ತುಂಬುವುದಕ್ಕೂ ಮೊದಲೇ ಮುಟ್ಟಾಗಬಹುದು ಅಥವಾ ತಿಂಗಳು ಕಳೆದು ಎಷ್ಟು ದಿನಗಳಾದರೂ ಈ ಮುಟ್ಟು ಆಗದಿರುವುದು ಅಥವಾ ಈ ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆ ನೋವು ಕಾಡುವುದು ಕಾಲು ಸೆಳೆತ ಸೊಂಟನೋವು ಬಹಳಾನೇ ಕಾಣಿಸಿಕೊಳ್ಳುವುದು, ಹೀಗೆಲ್ಲಾ ಆಗುತ್ತದೆ ಇದಕ್ಕೆ ಮೂಲ ಕಾರಣ ಅಂದರೆ ಹೆಣ್ಣು ಮಕ್ಕಳು ಪಾಲಿಸುವ ಆಹಾರ ಪದ್ಧತಿ ಸಹ ಆಗಿರುತ್ತದೆ, ಜೊತೆಗೆ ಹಾರ್ಮೋನ್ ಇಂಬ್ಯಾಲೆನ್ಸ್ ಹೌದು ಕೆಲವರಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ಆದಾಗ ಹೆಣ್ಣುಮಕ್ಕಳಿಗೆ ಈ ಮುಟ್ಟಿನ ಕಾಲದಲ್ಲಿ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ಪದ್ದತಿ ಹೇಗಿರಬೇಕೆಂದರೆ ಬಹಳ ಪೋಷಕಾಂಶಭರಿತ ಆಗಿರಬೇಕು ಕೆಲವೊಂದು ನ್ಯೂಟ್ರಿಯಂಟ್ಸ್ ಹೊಂದಿರುವ ಆಹಾರಗಳನ್ನು ಹೆಣ್ಣುಮಕ್ಕಳು ಸೇವಿಸಲೇ ಬೇಕಿರುತ್ತದೆ.

ಯಾರಿಗೆ ಇಂತಹ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಅಥವಾ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಅಂದರೆ ಏನು ಮಾಡಬೇಕು ಅನ್ನೋದನ್ನ ಈ ಪುಟದಲ್ಲಿ ತಿಳಿಸುತ್ತಿದ್ದೇವೆ ರಾತ್ರಿ ಸಮಯದಲ್ಲಿ ಕುಂಬಳಕಾಯಿ ಬೀಜ ಸೂರ್ಯಕಾಂತಿ ಬೀಜ ಮತ್ತು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಮಯದಲ್ಲಿ ಖಾಲಿ ಹೊಟ್ಟೆಗೆ ಆ ಪದಾರ್ಥಗಳನ್ನು ಸೇವನೆ ಮಾಡಿ ಬಿಸಿ ನೀರನ್ನು ಕುಡಿಯಿರಿ.

ಈ ಪದ್ಧತಿಯ ಜೊತೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪವಾದರೂ ತರಕಾರಿ ಸೊಪ್ಪುಗಳನ್ನು ಸೇವನೆ ಮಾಡಿ ಹೆಚ್ಚು ಅನ್ನವನ್ನು ತಿನ್ನ ಬೇಡಿ ಯಾಕೆಂದರೆ ಹೆಚ್ಚು ಅನ್ನ ತಿಂದರೆ ಅದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ತರದ ಪೋಷಕಾಂಶಗಳು ದೊರೆಯುವುದಿಲ್ಲ.ಹಾಗಾಗಿ ನಮ್ಮ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಉಂಟಾಗಿದೆ ಅಂದರೆ ಅದಕ್ಕೆ ಮಾಡಬೇಕಿರುವುದು ಯಾವುದೇ ಚಿಕಿತ್ಸೆ ಅಲ್ಲ ಮಾತ್ರೆ ತೆಗೆದುಕೊಳ್ಳುವುದು ಅಲ್ಲಾ, ಮೊದಲು ನಮ್ಮ ಆಹಾರ ಪದ್ಧತಿಯನ್ನು ಬದಲಾವಣೆ ಮಾಡುವುದು.

ಹೌದು ಹಾರ್ಮೋನ್ ಇಂಬ್ಯಾಲೆನ್ಸ್ ಇಂದ ಮುಟ್ಟಿನ ಸಮಸ್ಯೆ ಮಾತ್ರವಲ್ಲ ಹೆಣ್ಣುಮಕ್ಕಳಿಗೆ ಮದುವೆಯ ನಂತರ ಮಗು ಪಡೆದುಕೊಳ್ಳಬೇಕು ಅಂದರೆ ಆಗ ಕೂಡ ಹೆಚ್ಚು ತೊಂದರೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಿಮ್ಮ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿದೆ ಅಂದರೆ ಅದು ನೇರವಾಗಿ ಮುಟ್ಟಿನ ಚಟುವಟಿಕೆ ಮೂಲಕ ನಿಮಗೆ ತಿಳಿಯುತ್ತಾ ಇರುತ್ತದೆ. ಅದನ್ನು ನಿರ್ಲಕ್ಷ್ಯ ಮಾಡದೆ ಆದಷ್ಟು ಬೇಗ ಸರಿಪಡಿಸಿಕೊಳ್ಳಿ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಿ ಒಳ್ಳೆಯ ಜೀವನ ಶೈಲಿ ಒಳ್ಳೆಯ ಆಹಾರ ಪದ್ಧತಿಯನ್ನು ಪಾಲಿಸಿ ಧನ್ಯವಾದ…

WhatsApp Channel Join Now
Telegram Channel Join Now