ನಿಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಸರಕಾರದಿಂದ ಮಾಡಿಕೊಂಡು ಹಣವನ್ನ ಪಡೆದುಕೊಳ್ಳೋದು ಹೇಗೆ…

250

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳು ಪಡೆದುಕೊಳ್ಳುವ ಬಾಂಡ್ ಕುರಿತು ಹೆಚ್ಚಿನ ಮಾಹಿತಿ ನೀಡ್ತೇವೆ ಹಾಗೆ ಈ ಬಾಂಡ್ ಕುರಿತು ಇನ್ನಷ್ಟು ಮಾಹಿತಿ ನೀಡಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ನೀವು ಸಹ ವಾರ್ಡ್ ಪಡೆದುಕೊಂಡಿದ್ದಲ್ಲಿ ಇದರಿಂದ ಕಿನಿಲ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು ಎಂಬುದನ್ನು ಸಹ ಈ ಲೇಖನವನ್ನು ಓದಿ ತಿಳಿಯಿರಿ. ಮೊದಲು ನೀವು ತಿಳಿಯಬೇಕಾಗಿರುವ ವಿಚಾರ ಏನು ಅಂದರೆ ಹೆಣ್ಣುಮಕ್ಕಳಿಗೆ ಯಾಕೆ ಈ ರೀತಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಮತ್ತು ಯಾವ ಕಾರಣಕ್ಕಾಗಿ ಈ ರೀತಿ ಸರ್ಕಾರ ಯೋಜನೆಯನ್ನು ಶುರುಮಾಡಿದ್ದು ಇದನ್ನೆಲ್ಲ ತಿಳಿದುಕೊಳ್ಳೋಣ.

ಹೌದು ಸ್ನೇಹಿತರೆ ಹಿಂದಿನಿಂದಲೂ ಸಹ ಹೆಣ್ಣುಮಕ್ಕಳ ಮೇಲೆ ಹಾಗೂ ಹೆಣ್ಣು ಶಿಶುವಿನ ಮೇಲೆ ದೌರ್ಜನ್ಯ ನಡೆಯುತ್ತಲೇ ಬಂದಿದೆ ಇನ್ನು ಬಡವರ ಕುಟುಂಬದಲ್ಲಿ ಹೆಣ್ಣು ಮಗು ಜನನವಾದರೆ ಮುಂದೆ ಆಕೆಯ ಜೀವನ ಹೇಗೆ ಆಕೆಯನ್ನು ಮದುವೆ ಮಾಡುವುದು ಹೇಗೆ ಇವತ್ತಿನ ದಿವಸ ಗಳಲ್ಲಿ ಹೆಣ್ಣು ಮಕ್ಕಳನ್ನ ಹೇಗಪ್ಪಾ ಹೊದಿಸುವುದು ಅವರನ್ನು ಹೇಗೆ ಮದುವೆ ಮಾಡಿಕೊಡುವುದು ಇದಕ್ಕೆಲ್ಲ ನಮ್ಮ ಬಳಿಯಲ್ಲಿ ಹಣ ಇರುತ್ತದೆ ಎಂದು ಯೋಚನೆ ಮಾಡುವ ಮಂದಿಗೆ ಸಹಾಯವಾಗಲೆಂದೇ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆಯನ್ನು ಶುರು ಮಾಡಿತು ಹಾಗೂ ಯಾರೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದಾರೆ ಹಾಗೂ ಯಾರ ವಾರ್ಷಿಕ ಆದಾಯ ಬಹಳ ಕಡಿಮೆ ಇದೆ ಯಾರು ಕೂಲಿ ಮಾಡುತ್ತ ಜೀವನ ಸಾಗಿಸುತ್ತಾ ಇರುತ್ತಾರೆ ಬಿಲೋ ಪಾವರ್ಟಿ ಲೆವೆಲ್ ಅವರು ಈ ಯೋಜನೆಯ ಫಲವನ್ನ ಪಡೆದುಕೊಳ್ಳಬಹುದಾಗಿದೆ. ಹೌದು ಯಾಕೆ ಅಂದರೆ ಹೆಣ್ಣು ಮಕ್ಕಳು 18ವರುಷ ದಾಟುತ್ತಿದ್ದ ಹಾಗೆ ಅವರು ಮದುವೆ ವಯಸ್ಸಿಗೆ ಬರುತ್ತಾರೆ ಈ ವೇಳೆ ಹೆಣ್ಣು ಹೆತ್ತವರಿಗೆ ಹೆಣ್ಣುಮಕ್ಕಳನ್ನು ಮುಂದೆ ಓದಿಸುವುದಕ್ಕಾಗಿ ಆಗಲಿ ಅಥವಾ ಅವರಿಗೆ ಮದುವೆ ಮಾಡಿಕೊಡುವುದಕ್ಕೆ ಆಗಲಿ ಹಣದ ಕೊರತೆ ಉಂಟಾಗಬಾರದು ಬಡವರಿಗೆ ಸ್ವಲ್ಪವಾದರೂ ಹಣದ ಸಹಾಯವಾಗಲಿ ಎಂಬ ಕಾರಣಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು ಈ ಯೋಜನೆ ಜಾರಿಗೆ ಬಂದು ಈಗಾಗಲೇ ಸುಮಾರು ವರ್ಷ ಆಗಿದ್ದು ಇದರ ಅಡಿಯಲ್ಲಿ ಬಹಳಷ್ಟು ಜನರು ಈಗಾಗಲೇ ಫಲವನ್ನು ಪಡೆದುಕೊಂಡಿದ್ದಾರೆ.

ಹೌದು ಹೆಣ್ಣು ಮಕ್ಕಳು ಬಡವರ ಮನೆಯಲ್ಲಿ ಅಥವಾ ಬಿಪಿಎಲ್ ಕಾರ್ಡ್ ಹೊಂದಿರುವವರ ಮನೆಯಲ್ಲಿ ಜನಿಸಿದ ರಾವ್ ಅವರು ಮಗುವಿನ ಬರ್ತ್ ಸರ್ಟಿಫಿಕೇಟ್ ಮತ್ತು ತಂದೆ ತಾಯಿಯ ಆಧಾರ ಕಾರ್ಡ್ ಪಾಸ್ಬುಕ್ ಇನ್ನೂ ಇತರೆ ದಾಖಲಾತಿ ಗಳನ್ನು ಅಂಗನವಾಡಿಗೆ ಅಥವಾ ಪೋಸ್ಟ್ ಆಫೀಸ್ ಗೆ ನೀಡಿ ಈ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ತಮ್ಮ ಮಗುವಿನ ಹೆಸರಿನಲ್ಲಿ ಬಾಂಡ್ ಪಡೆದುಕೊಳ್ಳಬಹುದಾಗಿದೆ ಹಾಗೆ ಮಗುವಿಗೆ ಹದಿನೆಂಟು ವರ್ಷ ದಾಟುತ್ತಿದ್ದ ಹಾಗೆ ಈ ಹಣ ಮೆಚೂರಾಗಿ ಹೆಣ್ಣು ಮಕ್ಕಳಿಗೆ ಹಣ ಬರುತ್ತದೆ ಇನ್ನು ಮನೆಯಲ್ಲಿ ಮೊದಲ ಹೆಣ್ಣು ಮಗು ಜನಿಸಿದಾಗ ಆ ಮಗುವಿನ ಹೆಸರಿನಲ್ಲಿ 19300ರೂಪಾಯಿಗಳನ್ನು ಠೇವಣಿ ಇಡುತ್ತದೆ ಇದಕ್ಕೆ ಎಲ್ಲೈಸಿ ಅವರು ಒಂದಿಷ್ಟು ಬಡ್ಡಿಯನ್ನು ಸೇರಿಸಿ ಹೆಣ್ಣು ಮಗುವಿಗೆ 1ಲಕ್ಷ ತೊಂಬತ್ತೇಳು ರೂಪಾಯಿ ಹಣ ನೀಡುತ್ತದೆ ಇನ್ನು ಆ ಮನೆಯಲ್ಲಿ ಅದೇ ತಂದೆತಾಯಿಗೆ ಎರಡನೇ ಮಗು ಸಹ ಹೆಣ್ಣು ಮಗು ಆದರೆ ಆ ಮಗುವಿಗೂ ಭಾಗ್ಯಲಕ್ಷ್ಮೀ ಬಾಂಡನ್ನು ಪಡೆಯಬಹುದು ಹಾಗೆ ಆ ಮಗುವಿನ ಹೆಸರಿಗೆ ಸರ್ಕಾರ 18.500 ರೂಪಾಯಿಗಳನ್ನು ಠೇವಣಿ ಇಡುತ್ತಾರೆ ನಂತರ ಎಲೈಸಿ ಅವರು ಇದಕ್ಕೆ ಬಡ್ಡಿ ಸೇರಿಸಿ ಮಗುವಿನ 18ವರ್ಷದ ನಂತರ 1ಲಕ್ಷದ 59ರೂಪಾಯಿಗಳು ಮಗುವಿಗೆ ನೀಡುತ್ತಾರೆ.

ಈ ಬಾಂಡ್ ಅಡಿಯಲ್ಲಿಯೇ ಆ ಮಗುವಿನ ತಂದೆ ಹಾಗು ತಾಯಿಗು ಸಹ ವಿಮೆ ಇರುತ್ತದೆ ಈ ವೇಳೆ ಅಂದರೆ ಮಗುವಿಗೆ ಹದಿನೆಂಟು ವರ್ಷ ತುಂಬುವ ಒಳಗೆ ತಂದೆ ಅಥವಾ ತಾಯಿಗೆ ಏನಾದರೂ ಆಕ್ಸಿಡೆಂಟ್ ಆದರೆ ಅವರಿಗೆ ಅಂದರೆ ಆ ಮಗುವಿನ ತಾಯಿಗೆ ಅಥವಾ ತಂದೆಗೆ 75ಸಾವಿರ₹ಹಣ ಬರುತ್ತದೆ ಸಹಜ ಸಾವು ಉಂಟಾದರೆ 30ಸಾವಿರ ರೂಪಾಯಿಗಳು ಮಗುವಿಗೆ ಹಣ ಬರುತ್ತದೆ ಅಥವಾ ಅಪಘಾತದ ವೇಳೆ ಮಗು ಅಥವಾ ತಂದೆ ಅಥವಾ ತಾಯಿ ಅಂಗವಿಕಲರ ಆದರೆ ಅವರಿಗೆ 75ಸಾವಿರ₹ಹಣ ಬರುತ್ತದೆ. ಈ ರೀತಿ ಎಲ್ಲ ಸೌಲಭ್ಯವಿರುತ್ತದೆ ಈ ಭಾಗ್ಯಲಕ್ಷ್ಮೀ ಬಾಂಡ್ ಅಡಿಯಲ್ಲಿ ಧನ್ಯವಾದ.

WhatsApp Channel Join Now
Telegram Channel Join Now