ನೀವೇನಾದರೂ ಈ ಸಮಯದಲ್ಲಿ ರಾಮ ಕೋಟಿಯನ್ನ ಬರೆದರೆ ನನಿಮಗೆ ಎಂತ ಕಷ್ಟಕರ ಸಮಯ ಬಂದ್ರು ಅದು ನೀರಿನ ರೀತಿಯಲ್ಲಿ ಕಳೆದು ಹೋಗುತ್ತದೆ… ಅಷ್ಟಕ್ಕೂ ರಾಮಕೋಟಿಯನ್ನ ಬರಿಯೋದು ಹೇಗೆ ಯಾವಾಗ…

440

ನಮಸ್ಕಾರಗಳು ಪ್ರಿಯ ಓದುಗರೇ ರಾಮಕೋಟಿ ಬರೆಯುವ ವಿಚಾರ ನಿಮಗೂ ಗೊತ್ತಿದೆ ಅಲ್ವಾ ಹೌದು ಶ್ರೀ ವಿಷ್ಣುಪರಮಾತ್ಮನ ಅವತಾರ ಗಳಂತೆಯೇ ರಾಮನ ಅವತಾರ ಶ್ರೇಷ್ಠ ಎಂದು ಪರಿಗಣಿಸಲಾಗಿದೆ ಇಡೀ ಲೋಕಕ್ಕೆ ಆದರ್ಶ ವ್ಯಕ್ತಿಯಾಗಿ ಬಿಂಬಿಸಿದ ರಾಮನ ಅವತಾರ ಎಲ್ಲರಿಗೂ ಕೂಡ ಆದರ್ಶ ಹಾಗಾಗಿ ಎಲ್ಲರೂ ಕೂಡ ಹೆಚ್ಚಾಗಿ ರಾಮನ ಆರಾಧನೆಯನ್ನು ಮಾಡುತ್ತಾರೆ, ಹಾಗೇ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುವುದಾಗಿ ರಾಮನ ಜಪ ಮಾಡುತ್ತಾರೆ. ಲೋಕಕ್ಕೆ ಆದರ್ಶ ವ್ಯಕ್ತಿಯಾಗಿರುವ ರಾಮನ ನಾಮವನ್ನು ಕೋಟಿ ಬಾರಿ ಬರೆಯುವುದರಿಂದ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ರಾಮಕೋಟಿ ಬರೆಯುವ ವಿಧಾನ ಇದರ ಪ್ರಯೋಜನ ನಿಮಗೆ ತಿಳಿದಿಲ್ಲವಾದಲ್ಲಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಆಗ ನಿಮಗೂ ಕೂಡ ರಾಮ ಕೋಟಿಯ ಮಹತ್ವ ಏನು ಎಂಬುದು ತಿಳಿಯುತ್ತದೆ.

ರಾಮಕೋಟಿ ಅಂದರೆ ರಾಮನ ನಾಮವನ್ನು ಕೋಟಿ ಬಾರಿ ಬರೆಯುವುದು ಎಂದರ್ಥ ಆದರೆ ಎಲ್ಲೆಂದರೆ ಅಲ್ಲಿ ಕುಳಿತು ಹೇಗೆಂದರೆ ಹಾಗೆ ರಾಮ ಕೋಟಿಯನ್ನ ಬರೆಯುವಂತಿಲ್ಲ ಇದು ಕೂಡ ಕೆಲವೊಂದು ನಿಯಮಗಳಿವೆ ಕೆಲವೊಂದು ಪದ್ಧತಿಗಳಿವೆ ಅದನ್ನು ಪಾಲಿಸುವ ಮೂಲಕವೇ ನಾವು ರಾಮ ಕೋಟಿಯನ್ನು ಬರೆಯಬೇಕಿರುತ್ತದೆ ಹೌದು ರಾಮನ ಭಕ್ತರು ಈಗಾಗಲೇ ಬಹಳಷ್ಟು ಮಂದಿ ರಾಮನ ನಾಮವನ್ನ ಜಪ ಮಾಡಿದ್ದಾರೆ ಹಾಗೆಯೇ ಕೆಲವರು ರಾಮ ಕೋಟಿಯನ್ನು ಬರೆದಿದ್ದಾರೆ. ಗ್ರಾಮ ಕೋಟಿ ಬರುವುದರಿಂದ ಮನಸ್ಸಿಗೆ ಏನೋ ನೆಮ್ಮದಿ. ಅಷ್ಟೇ ಅಲ್ಲ ಒಂದೇ ನಾಮವನ್ನು ಕೋಟಿ ಬಾರಿ ಬರೆಯುವುದರಿಂದ ಇದರಿಂದ ನಮ್ಮ ಏಕಾಗ್ರತೆ ಕೂಡ ಹೆಚ್ಚುತ್ತದೆ. ರಾಮಕೋಟಿ ಬರೆಯುವಾಗ ಮನಸ್ಸನ್ನು ಎಲ್ಲೆಂದರೆ ಅಲ್ಲಿ ಹರಿಬಿಡುವಂತಿಲ್ಲ ಆಕೆಯನ್ನು ರಾಮಕೋಟಿ ಬರೆಯುವಾಗ ಯಾರ ಜೊತೆಯೂ ಮಾತನಾಡಬಾರದು ಹೀಗೆ ರಾಮಕೋಟಿ ಬರೆಯುವಾಗ ಹಲವು ನಿಯಮಗಳನ್ನು ಅರಿತು ನಾವು ರಾಮ ಕೋಟಿಯನ್ನ ಬರೆಯಬೇಕಿರುತ್ತದೆ ಹಾಗೆ ರಾಮಕೋಟಿ ಬರೆಯುವ ಮುನ್ನ ನೀವು ಕೂಡ ಈ ಕೆಲವೊಂದು ಪದ್ಧತಿ ಆಚಾರ ವಿಚಾರಗಳನ್ನು ತಿಳಿದು ರಾಮಕೋಟಿ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಇದರಿಂದ ಅಪಾರ ಪುಣ್ಯವನು ನಾವು ಪಡೆದುಕೊಳ್ಳಬಹುದು.

ಹೌದು ಮನುಷ್ಯನ ಜೀವನ ಅಂದರೆ ಅವನು ಈ ಜೀವನದಲ್ಲಿ ಪಾಪ ಪುಣ್ಯ ಕಾರ್ಯಗಳನ್ನು ಮಾಡಿಯೇ ಇರುತ್ತಾರೆ ಹಾಗೆ ತನ್ನ ಪಾಪವನ್ನು ತನ್ನ ಕರ್ಮಗಳನ್ನು ನಿವಾರಿಸುವುದಕ್ಕಾಗಿ ಇತರ ಪಾಪಗಳನ್ನು ಮನೆ ದೇವರ ಮೊರೆ ಹೋಗುತ್ತಾನೆ. ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ದೇವರಿಗೆ ತಮ್ಮ ಪೂಜ್ಯನೀಯ ಭಾವವನ್ನು ಅರ್ಪಿಸುತ್ತಾರೆ ಹಾಗೆ ಕೆಲವರು ರಾಮಕೋಟಿ ಬರೆಯುವ ಮೂಲಕ ರಮಣನನ್ನು ಸ್ಮರಿಸುತ್ತಾ ಈ ರಾಮ ಕೋಟಿ ಬರೆಯುವಾಗ ಈ ಮಾಹಿತಿ ತಿಳಿದರೆ ಈ ರಾಮಕೋಟಿ ಬರೆಯಲು ಶುರು ಮಾಡುವವರು, ಅದನ್ನು ಪುನರ್ವಸು ನಕ್ಷತ್ರದಂದು ಶುರು ಮಾಡಿ. ಹೌದು ಈ ನಕ್ಷತ್ರದಂದು ಶುರುಮಾಡಿ ಈ ನಕ್ಷತ್ರದಲ್ಲಿಯೆ ರಾಮಕೋಟಿಯನ್ನು ಬರೆದು ಮುಗಿಸಿದರೆ ಬಹಳ ಪುಣ್ಯ ಅಂತ ಕೂಡ ನಂಬಲಾಗಿದೆ.

ರಾಮಕೋಟಿ ಬರೆಯುವಾಗ ಪದ್ಮಾಸನದಲ್ಲಿ ಕುಳಿತು ರಾಮನ ನಾಮವನ್ನು ಕೋಟಿ ಬಾರಿ ಬರೆಯಬೇಕು, ಇದನ್ನು ಎಲ್ಲೆಂದರಲ್ಲಿ ಬರೆಯುವಂತಿಲ್ಲ ಬಿಳಿ ಪುಸ್ತಕವನ್ನು ತೆಗೆದುಕೊಂಡು ಹಸಿರು ಇಂಕ್ ಪೆನ್ ತೆಗೆದುಕೊಂಡು, ಅದರಲ್ಲಿ ರಾಮ ಕೋಟಿಯನ್ನು ಬರೆಯಬೇಕು. ರಾಮಕೋಟಿ ಬರೆಯುವಾಗ ಶುದ್ಧವಾದ ಜಾಗದಲ್ಲಿ ಕುಳಿತು ಬರೆಯಬೇಕು ಮತ್ತು ಸ್ನಾನಾದಿಗಳನ್ನು ಮುಗಿಸಿ ಪೂಜೆ ಮಾಡಿ ಬಳಿಕ ರಾಮ ಕೋಟಿಯನ್ನು ಬರೆದು ದೇವರಿಗೆ ಸಮರ್ಪಿಸಿದ ನೈವೇದ್ಯಯನ್ನು ಎಲ್ಲರಿಗೂ ಹಂಚಬೇಕು ಈ ರೀತಿ ರಾಮಕೋಟಿ ಬರೆಯುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ ಹಾಗೂ ನಮ್ಮಲ್ಲಿ ಸಕಾರಾತ್ಮಕ ಸದ್ಗುಣ ಚಿಂತನೆಗಳು ಆಲೋಚನೆಗಳು ಹೆಚ್ಚುತ್ತದೆ.

ಈ ಮೊದಲೇ ತಿಳಿಸಿದಂತೆ ರಾಮಕೋಟಿ ಬರೆಯುವಾಗ ಯಾವುದೇ ಕಾರಣಕ್ಕೂ ಬೇರೆಯವರನ್ನ ಮಾತನಾಡಿಸುವುದಾಗಲೀ ನೀವು ಅಪ್ಪಿತಪ್ಪಿ ಮಾತಾಡುವುದಾಗಲಿ ಮಾಡಬೇಡಿ ಸೂತಕದ ಸಮಯದಲ್ಲಿ ರಾಮಕೋಟಿ ಬರೆಯುವುದು ಬೇಡ ಹಾಗೆ ರಾಮಕೋಟಿ ಪಡೆದ ಬಳಿಕ ಆ ಪುಸ್ತಕವನ್ನು ಅರಿಶಿನದ ಬಟ್ಟೆಯಿಂದ ಮುಚ್ಚಿ ಅದನ್ನು ಇಡಬೇಕು ಬಳಿಕ ಅದನ್ನು ಸಂಪೂರ್ಣವಾಗಿ ಬರೆದ ಮೇಲೆ ರಾಮನ ಆಲಯಕ್ಕೆ ತೆಗೆದುಕೊಂಡು ಹೋಗಿ ಕೊಡಬೇಕು. ಈ ರೀತಿ ರಾಮಕೋಟಿ ಬರೆಯುವ ವಿಧಾನ ರಾಮಕೋಟಿ ಬರೆಯುವ ಮುನ್ನ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ ಇದರಂತೆ ರಾಮಕೋಟಿ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಸದಾ ರಾಮನು ನಿಮ್ಮ ಜತೆಗಿರುತ್ತಾರೆ ಧನ್ಯವಾದ.

WhatsApp Channel Join Now
Telegram Channel Join Now