ಹೈವೇ ಮೇಲೆ ಬರೆದಿರುವ ಹಳದಿ ಗೆರೆಗಳ ಅರ್ಥ ನಿಮಗೆ ಗೊತ್ತಾ…! ಇಲ್ಲಿದೆ ಸಂಪೂರ್ಣ ವರದಿ …

86

ನೀವು ಎಂದಾದರೂ ಬಸ್ ನಲ್ಲಿ ಪ್ರಯಾಣ ಮಾಡುವಾಗ ಬೈಕು ಕಾರು ಪ್ರಯಾಣ ಮಾಡುವಾಗ ರಸ್ತೆಯನ್ನು ಗಮನಿಸಿದರೆ ಅಲ್ಲಿ ಬಿಳಿ ಮತ್ತು ಹಳದಿ ಬಣ್ಣದಿಂದ ಗೆರೆಗಳನ್ನು ಹಾಕಿರುತ್ತಾರೆ, ಹಾಗಾದರೆ ಯಾಕೆ ಈ ರೀತಿ ಗೆರೆಗಳನ್ನು ಹಾಕಿರುತ್ತಾರೆ ಇದರ ಅರ್ಥವೇನು ಮತ್ತು ಈ ರೀತಿ ರಸ್ತೆಯ ಮೇಲೆ ಯಾಕೆ ಬರೆಯಬೇಕು ಎಂಬುದರ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ .ಇಂದಿನ ಮಾಹಿತಿ ತುಂಬಾನೇ ಉಪಯುಕ್ತವಾದದ್ದು ಅದರಲ್ಲಿಯು ವಾಹನ ಓಡಿಸುವವರಿಗೆ ಈ ಒಂದು ಮಾಹಿತಿ ತಿಳಿದಿರಲೇಬೇಕು ಆದ ಕಾರಣ ತಪ್ಪದೆ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೇ ಇದೊಂದು ಸಾಮಾನ್ಯ ಜ್ಞಾನವಾಗಿ ಇರುವುದರಿಂದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ.

ನಮ್ಮ ಭಾರತ ದೇಶದಲ್ಲಿ ಟ್ರಾಫಿಕ್ಕಿಗೆ ಸಂಬಂಧಪಟ್ಟಂತೆ ಅನೇಕ ನಿಯಮಗಳಿವೆ ಹಾಗೆ ರಸ್ತೆಗಳ ವಿಚಾರಕ್ಕೆ ಬಂದರೂ ಕೂಡ ಅಪಘಾತಗಳನ್ನು ಕಡಿಮೆ ಮಾಡಬೇಕೆಂದು ಅಪಘಾತಗಳು ಅದರಲ್ಲಿಯೂ ರಸ್ತೆ ಅಪಘಾತಗಳು ಜರುಗ ಬಾರದೆಂದು ಅನೇಕ ವರ್ಷಗಳಿಂದ ಅನೇಕ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ ಎನ್ನುವ ಹೈವೇಯ ರೋಡ್ಗಳಲ್ಲಿ ಸ್ಟೇಟ್ ಹೈವೇ ನ್ಯಾಷನಲ್ ಹೈವೇ ರೋಡ್ಗಳಲ್ಲಿ ನಾವು ಹಳದಿ ಮತ್ತು ಬಿಳಿ ಬಣ್ಣದಿಂದ ಗೆರೆಗಳು ಏಳದಿರುವುದನ್ನು ನೋಡಿರುತ್ತೇವೆ.ಈ ರೀತಿ ರಸ್ತೆಯ ಮೇಲೆ ಕೆರೆಗಳನ್ನು ಹಾಕಿರುವುದರ ಹಿಂದೆಯೂ ಕೂಡಾ ಒಂದು ಕಾರಣವಿದೆ ಅದೇನೆಂದರೆ ಮುಂದಿನ ರಸ್ತೆ ಹೇಗೆ ಇರುತ್ತದೆ ಅಥವಾ ನಾವು ಈ ರೋಡ್ ನಲ್ಲಿ ಯೂ ಟರ್ನ್ ಅಥವಾ ನಾವು ಓಡಿಸುತ್ತಿರುವ ಗಾಡಿಯ ದಿಕ್ಕನ್ನು ಬದಲಾಯಿಸಬಹುದು ಎಂಬುದರ ಮಾಹಿತಿಯನ್ನು ತಿಳಿಸಿಕೊಡುತ್ತದೆ ಈ ಗೆರೆಗಳು.

ಬಿಳಿ ಬಣ್ಣದ ಬಿಡಿಬಿಡಿ ಗೆರೆಗಳಿದ್ದಾರೆ ಈ ಒಂದು ಕೆರೆ ಏನನ್ನು ಸೂಚಿಸುತ್ತದೆ ಅಂದರೆ ವಾಹನ ಸವಾರರು ಯಾವುದೇ ಸಮಯದಲ್ಲಾದರೂ ಲೇನ್ ಅನ್ನು ಬದಲಾಯಿಸಬಹುದು ಅಥವಾ ಯೂ ಟರ್ನ್ ಮಾಡಬಹುದು ಎಂಬುದನ್ನು ಈ ಗೆರೆಗಳು ಸೂಚಿಸುತ್ತವೆ ಮತ್ತು ವಾಹನಗಳನ್ನು ಈ ರಸ್ತೆಯಲ್ಲಿ ಓವರ್ಟೇಕ್ ಮಾಡಬಹುದು ಎಂಬುದನ್ನು ಕೂಡ ಇದು ತಿಳಿಸಿಕೊಡುತ್ತದೆ.ಬಿಳಿ ಬಣ್ಣದ ಗೆರೆ ಕಂಟಿನ್ಯೂಸ್ ಆಗಿ ಇದ್ದರೆ :ಇದರ ಅರ್ಥವೇನು ಅಂದರೆ ವಾಹನಗಳು ಯಾವುದೇ ಕಾರಣಕ್ಕು ಬೇರೆ ವಾಹನಗಳನ್ನು ಓವರ್ಟೇಕ್ ಮಾಡುವಂತಿಲ್ಲ ಹಾಗೆ ಯಾವಾಗ ಬೇಕಾದರೂ ಯು ಟರ್ನ್ ಆಗಲಿ ಲೇನ್ ಅನ್ನು ಬದಲಾಯಿಸುವಂತಿಲ್ಲ ಇಂತಹ ಗೆರೆಯನ್ನು ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಹಾಕಲಾಗಿರುತ್ತದೆ.

ಹಳದಿ ಬಣ್ಣದ ಬಿಡಿಬಿಡಿ ಗೆರೆಗಳಿದ್ದರೆ ಇದು ಕೂಡ ವಾಹನಗಳು ಯಾವಾಗ ಬೇಕಾದರೂ ಓವರ್ಟೇಕ್ ಮಾಡಬಹುದು ಮತ್ತು ಲೇನ್ ಅನ್ನು ಬದಲಾಯಿಸಬಹುದು ಯು ಟರ್ನ್ ಮಾಡಬಹುದು ಎಂಬುದನ್ನು ಸೂಚಿಸುತ್ತದೆ.ಒಂದೆಡೆ ಹಳದಿ ಬಣ್ಣದ ಬಿಡಿಬಿಡಿ ಗೆರೆಗಳು ಮತ್ತೊಂದೆಡೆ ಹಳದಿ ಬಣ್ಣದ ಕಂಟ್ಯೂನ್ಯು ಗೆರೆ ಇದ್ದರೆ:
ವಾಹನಗಳು ಬಿಡಿಬಿಡಿ ಗೆರೆಗಳ ಕಡೆ ಹೋಗುತ್ತಿದ್ದರೆ ವಾಹನಗಳನ್ನು ಓವರ್ಟೇಕ್ ಮಾಡಬಹುದು ಆದರೆ ಮತ್ತೊಂದೆಡೆ ಇರುವ ಹಳದಿ ಬಣ್ಣದ ಕಂಟಿನ್ಯೂ ಲೈನ್ನಲ್ಲಿ ಹೊಗುತ್ತಿರುವ ವಾಹನಗಳು ಯಾವುದೇ ಕಾರಣಕ್ಕೂ ಓವರ್ಟೇಕ್ ಮಾಡುವಂತಿಲ್ಲ ಲೇನ್ ಬದಲಾಯಿಸುವಂತಿಲ್ಲ ಹಾಗೆ ಯು ಟರ್ನ್ ಮಾಡುವಂತಿಲ್ಲ ಎಂಬುದನ್ನು ಸೂಚಿಸುತ್ತಿರುತ್ತದೆ.ಈ ರೀತಿ ರಸ್ತೆ ಮೇಲೆ ಇರುವ ಲೈನ್ ಗಳು ವಾಹನ ಚಲಾಯಿಸುವವರಿಗೆ ಗೈಡ್ ಲೈನ್ ಅನ್ನು ನೀಡುತ್ತದೆ ಅಂತಾ ಹೇಳಿದರೆ ತಪ್ಪಾಗಲಾರದು, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now