ಈ ತರಕಾರಿ ಜ್ಯೂಸ್ ಮಾಡಿ ಕುಡಿಯೋದ್ರಿಂದ ನಿಮ್ಮ ದೇಹ ವಜ್ರಕಾಯ ಆಗುತ್ತೆ … ರೋಗಗಳು ನಿಮ್ಮ ಹತ್ತಿರ ಬರುತ್ತಿದ್ದಂತೆ ಯು ಟರ್ನ್ ತಗೋಳ್ತಾವೆ…

310

ಪೋಷಕಾಂಶಗಳಲ್ಲಿ ಉತ್ತಮವಾಗಿರುವ ತರಕಾರಿಗಳ ರಾಜ ಅಂತಲೆ ಕರೆಸಿಕೊಳ್ಳುವ ಈ ತರಕಾರಿ ತಿಂದರೆ ಮಾತ್ರೆ ಗಳಿಲ್ಲದೆ ನಿಮ್ಮ ಹಲವು ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ…ಹೌದು ಬೂದಗುಂಬಳಕಾಯಿ, ಇದನ್ನು ತರಕಾರಿಯಂತ ಕೆಲವರು ಕರೆದರೆ ಇದನ್ನು ಕೆಲವರು ಹಣ್ಣು ಅಂತಾರೆ, ಆದರೆ ಈ ಬೂದು ಕುಂಬಳಕಾಯಿ ಇಂದ ಮಂದಿ ರುಚಿಕರವಾದ ಪಲ್ಯ ಡ್ರಿಂಕ್ ಸಾಂಬಾರ್ ಚಟ್ನಿ ಮಾಡಿ ತಿಂತಾರೆ.

ಇವತ್ತಿನ ಲೇಖನದಲ್ಲಿ ಬೂದುಗುಂಬಳಕಾಯಿಯ ಮಹತ್ವದ ಬಗ್ಗೆ ತಿಳಿಸಿಕೊಡಲಿದ್ದೇವೆ, ಹಾಗಾಗಿ ಈ ಪುಟಚನ್ನ ಸಂಪೂರ್ಣವಾಗಿ ತಿಳಿದು ಬೂದುಗುಂಬಳಕಾಯಿಯನ್ನು ವಾರಕ್ಕೆ ಒಮ್ಮೆಯಾದರೂ ಸೇವಿಸುತ್ತಾ ಬನ್ನಿ. ಹೌದು ಇದರಲ್ಲಿ ಇರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ ಖನಿಜಾಂಶಗಳು ವಿಟಮಿನ್ ಗಳು ಫೈಬರ್ ಅಷ್ಟೇ ಅಲ್ಲ ಅಧಿಕವಾದ ನೀರಿನ ಅಂಶವನ್ನು ತನ್ನಲ್ಲಿ ಹೊಂದಿರುವಂತಹ ಈ ಬೂದುಗುಂಬಳಕಾಯಿ, ತೂಕ ಹೇಳಿಕೊಳ್ಳಬೇಕು ಅಂತ ಇರುವವರಿಗೆ ವರದಾನ ಅನ್ನಬಹುದು.

ಯಾವುದೇ ತರಹದ ಡಯೆಟ್ ಪಾಲಿಸದೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಮತ್ತು ತೂಕವನ್ನು ಇಳಿಸಿಕೊಳ್ಳಬಹುದು ಈ ಬೂದುಗುಂಬಳ ಕಾಯಿಯನ್ನು ತಿನ್ನುವುದರಿಂದ ಹೌದು ಇದರ ಜ್ಯೂಸ್ ಸೇವನೆ ಎಷ್ಟು ಒಳ್ಳೆಯದು ಅಂದರೆ ದೇಹವನ್ನು ತಂಪಾಗಿರಿಸುವ ವುದಲ್ಲದೆ ಹೆಚ್ಚಿನ ಫೈಬರ್ ಅಂಶವನ್ನು ಶರೀರಕ್ಕೆ ನೀಡಿ ತೂಕ ಇಳಿಕೆಗೆ ಕಾರಣವಾಗುತ್ತದೆ.

ಮಲಬದ್ಧತೆ ಮೂಲವ್ಯಾಧಿ ಇದ್ದರೆ ನೀವು ತಪ್ಪದೆ ಈ ಡ್ರಿಂಕ್ ಕುಡಿಯುತ್ತಾ ಬನ್ನಿ ಪ್ರತಿದಿನ ಖಾಲಿ ಹೊಟ್ಟೆಗೆ ಈ ಡ್ರಿಂಕ್ ಮಾಡಿ ಕುಡಿಯುವುದರಿಂದ ಸ್ವಲ್ಪ ದಿನಗಳಲ್ಲಿಯೇ ಮಲಬದ್ಧತೆ ಮೂಲವ್ಯಾಧಿ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.ಇದರಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಜೀವಸತ್ವ ಇದೆ, ಹಾಗಾಗಿ ತ್ವಚೆಗೂ ಉತ್ತಮ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಸಹಕಾರಿ ಬೂದುಗುಂಬಳಕಾಯಿ.

ಕ್ಯಾಲ್ಶಿಯಂ ಫಾಸ್ಫರಸ್ ಪೊಟ್ಯಾಷಿಯಂ ಮತ್ತು ಐರನ್ ಖನಿಜಾಂಶಗಳನ್ನು ಹೊಂದಿರುವ ಈ ಬೂದುಗುಂಬಳಕಾಯಿ, ದೇಹಕ್ಕೆ ಉತ್ತಮವಾದ ಹಾಗೂ ಅತ್ಯಗತ್ಯವಾಗಿ ಬೇಕಾಗಿರುವ ಖನಿಜಾಂಶಗಳನ್ನು ಕೂಡ ನೀಡುತ್ತದೆ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಇದರ ಡ್ರಿಂಕ್ ಕುಡಿಯುವುದರಿಂದ.ಹೆಚ್ಚಿದ ನೀರಿನ ಅಂಶವನ್ನು ಹೊಂದಿರುವ ಬೂದುಗುಂಬಳಕಾಯಿ ದೇಹದಲ್ಲಿ ಅಸಿಡಿಕ್ ಅಂಶ ಹೆಚ್ಚಾಗಿದ್ದರೆ ಅದರ ಪ್ರಭಾವ ವನ್ನೂ ಕಡಿಮೆ ಮಾಡಿ ಎದೆ ಉರಿ ಹೊಟ್ಟೆ ಉರಿ ಕಾಲು ಉರಿ ಅಥವಾ ಕೈ ಉರಿ ಇಂತಹ ಬಾಧೆಗಳಿಂದ ಶಮನ ನೀಡುತ್ತದೆ.

ಕಿಡ್ನಿಯಲ್ಲಿ ಸ್ಟೋನ್ ಆಗಿದ್ದರೆ ಅಂಥವರು ಬೂದುಗುಂಬಳಕಾಯಿಯ ಜ್ಯೂಸನ್ನು ಖಾಲಿ ಹುದ್ದೆಗೆ ಕುಡಿಯಬಹುದು ಅಷ್ಟೇ ಅಲ್ಲ ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನುವವರು ಕೂಡ ತಪ್ಪದೆ ಈ ಒಂದು ತರಕಾರಿಯ ಡ್ರಿಂಕ್ ಕುಡಿಯುತ್ತಾ ಬನ್ನಿ ನಿಮ್ಮ ಇಮ್ಯುನಿಟಿ ಬೂಸ್ಟರ್ ಆಗುವುದಲ್ಲದೆ ಸ್ಥೂಲಕಾಯ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಮುಖ್ಯವಾಗಿ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿರುತ್ತದೆ ಬೂದುಗುಂಬಳಕಾಯಿ.

ಹೌದು ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ದೈವಿಕ ಕಾರ್ಯಗಳಲ್ಲಿ ಬಳಕೆ ಮಾಡುತ್ತೇವೆ ಆದರೆ ಇದರಿಂದ ನಮ್ಮ ದೇಹಕ್ಕೆ ಅತಿ ಅವಶ್ಯಕ ಪೋಷಕಾಂಶಗಳು ಕೂಡ ದೊರೆಯುವುದರಿಂದ ಇದರಿಂದ ಹಲವು ರುಚಿಕರವಾದ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು ಅಥವಾ ಈ ಬೂದುಗುಂಬಳಕಾಯಿಯ ಜ್ಯೂಸ್ ಮಾಡಿ ಕುಡಿದರೆ ಸಾಕು ಇದರ ಸಂಪೂರ್ಣ ಪೋಷಕಾಂಶಗಳನ್ನೂ ನಾವು ಪಡೆದುಕೊಳ್ಳಬಹುದು.ಹಲವರಿಗೆ ಉದರ ಸಂಬಂಧಿ ಸಮಸ್ಯೆಗಳು ಅಥವಾ ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು ಹೀಗೆಲ್ಲ ಆಗುತ್ತಿರುತ್ತದೆ ಅಂಥವರು ಕೂಡ ಈ ಬೂದುಗುಂಬಳಕಾಯಿಯ ಜ್ಯೂಸ್ ಕುಡಿಯಬಹುದು.

ಈ ರೀತಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಇದೊಂದೇ ತರಕಾರಿ ಪರಿಹಾರವನ್ನು ನೀಡುವ ಕಾರಣದಿಂದ ಇದನ್ನು ತರಕಾರಿಗಳ ರಾಜ ಅಂತ ಕರಿತಾರ ಇದನ್ನು ಬೂದಗುಂಬಳ ಅಂತ ಕರೆದರೆ ಇನ್ನು ಕೆಲವರು ಕುಂಬಳ ಸಿಹಿ ಕುಂಬಳ ಅಂತ ಕರಿತಾರೆ. ಇದನ್ನು ಇಂಗ್ಲಿಷ್ ನಲ್ಲಿ ವಿಂಟರ್ ಮೆಲೋನ್ ಅಂತ ಕೂಡ ಕರೆಯುತ್ತಾರೆ.

WhatsApp Channel Join Now
Telegram Channel Join Now